Sunday, September 28, 2025
Menu

ಡಿಜಿಟಲ್ ಪೇಮೆಂಟ್ ಸುರಕ್ಷತೆ: ಯುಪಿಐ ಫ್ರಾಡ್ ತಪ್ಪಿಸಿಕೊಳ್ಳೋದು ಹೇಗೆ?

ಡಿಜಿಟಲ್ ಯುಗದಲ್ಲಿ ಯುಪಿಐ (UPI) ಪೇಮೆಂಟ್ ಎಷ್ಟರ ಮಟ್ಟಿಗೆ ಆವರಿಕೊಂಡಿದೆ ಅಂದ್ರೆ! ಚಾ ಅಂಗಡಿಯಿಂದ ಹಿಡಿದು ದೊಡ್ಡ ದೊಡ್ಡ ಮಾಲ್ಗಳಲ್ಲಿ ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಮೂಲಕ ಹಣ ಪಾವತಿ ಮಾಡ್ತಿವಿ. ಆದ್ರೆ ಹೆಚ್ಚಾಗ್ತಿರೋ ಸೈಬರ್ ಮೋಸಗಳ ಬಗ್ಗೆ ನಾವ್ ಯಾವತ್ತು ಗಮನ ಕೊಟ್ಟಿರಲ್ಲ! ಆದ್ರೆ ಇನ್ಮುಂದೆ ನೀವು ಸೈಬರ್ ಕ್ರೈಂಗಳ ಮೇಲೆ ಸ್ವಲ್ಪ ಗಮನಹರಿಸಬೇಕಾಗುತ್ತೆ.

ಇತ್ತೀಚೆಗೆ ಕರ್ನಾಟಕ ಸೇರಿದಂತೆ ಹಲವೆಡೆ ಯುಪಿಐ ಫ್ರಾಡ್ ಪ್ರಕರಣಗಳು ವರದಿಯಾಗಿವೆ. ಮೋಸಗಾರರು ಕೃತಕ ಲಿಂಕ್‌ಗಳನ್ನು ಕಳುಹಿಸುವುದು, ನಕಲಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಸುವುದು, ಅಥವಾ ಫೋನ್‌ ಮೂಲಕ OTP, UPI PIN ಕೇಳುವುದು ಸಾಮಾನ್ಯವಾಗಿದೆ. ತಿಳಿಯದೇ ಮಾಹಿತಿ ಹಂಚಿಕೊಂಡರೆ ಹಣ ತಕ್ಷಣವೇ ಕಳೆದುಹೋಗುವ ಸಾಧ್ಯತೆ ಇದೆ.

ಸೈಬರ್ ಕ್ರೈಂನಿಂದ ತಪ್ಪಿಸಿಕೊಳ್ಳಲು ಕೆಲವು ಕ್ರಮಗಳು

  • OTP ಅಥವಾ UPI PIN ಯಾರಿಗೂ ಹೇಳಬೇಡಿ. ಬ್ಯಾಂಕ್ ಅಥವಾ ಆಪ್ ಕಂಪನಿಗಳು ಎಂದಿಗೂ ಇದನ್ನು ಕೇಳುವುದಿಲ್ಲ.
  • ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ವಾಟ್ಸಪ್, SMS ಅಥವಾ ಇಮೇಲ್ ಮೂಲಕ ಬರುವ ಲಿಂಕ್‌ಗಳಿಗೆ ಎಚ್ಚರಿಕೆ ಅಗತ್ಯ.
  • ಮೊಬೈಲ್ ಆ್ಯಪ್‌ಗಳನ್ನು ಕೇವಲ ಅಧಿಕೃತ App Store ಅಥವಾ Play Store ನಿಂದ ಮಾತ್ರ ಡೌನ್‌ಲೋಡ್ ಮಾಡಿ.
  • ರಿಕ್ವೆಸ್ಟ್ ಮೊನಿ ವೈಶಿಷ್ಟ್ಯವನ್ನು ಬಳಸುವಾಗ ಜಾಗರೂಕತೆ ವಹಿಸಿ. ಅಜ್ಞಾತ ವ್ಯಕ್ತಿ “ರಿಕ್ವೆಸ್ಟ್ ” ಕಳಿಸಿದಾಗ ತಕ್ಷಣ accept ಮಾಡಬೇಡಿ.
  • ಬ್ಯಾಂಕ್ ಖಾತೆ ಹಾಗೂ UPI ಆ್ಯಪ್‌ಗೆ ಬಲವಾದ ಪಾಸ್‌ವರ್ಡ್/ಬಯೋಮೆಟ್ರಿಕ್ ಲಾಕ್ ಇಡಿ.
  • ಅಸಹಜ ವ್ಯವಹಾರ ಕಂಡುಬಂದರೆ ತಕ್ಷಣ ಬ್ಯಾಂಕ್‌ನ್ನು ಅಥವಾ 1930 ಸೈಬರ್ ಹೆಲ್ಪ್‌ಲೈನ್ ಸಂಪರ್ಕಿಸಿ.

ಸರ್ಕಾರ ಮತ್ತು RBI ಜನರಲ್ಲಿ ಜಾಗೃತಿ ಮೂಡಿಸಲು ಹಲವು ಅಭಿಯಾನಗಳನ್ನು ನಡೆಸುತ್ತಿವೆ. ಆದರೂ, ಸುರಕ್ಷತೆ ನಮ್ಮ ಕೈಯಲ್ಲೇ ಇದೆ. ಪ್ರತಿಯೊಬ್ಬರೂ ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ UPI ಪೇಮೆಂಟ್ ಸುರಕ್ಷಿತವಾಗಿದ್ದು, ಫ್ರಾಡ್ ತಪ್ಪಿಸಿಕೊಳ್ಳಬಹುದು.

Related Posts

Leave a Reply

Your email address will not be published. Required fields are marked *