Menu

ತುಮಕೂರಿನಲ್ಲಿ ಡಿಜಿಟಲ್ ಆರ್ಥಿಕತೆಯ ಅಭಿಯಾನ ಯಶಸ್ವಿ

tumakur

ತುಮಕೂರು, ೧೫ ಜುಲೈ ೨೦೨೫: ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಆಶ್ರಯದಲ್ಲಿ ಕರ್ನಾಟಕ ಡಿಜಿಟಲ್ ಆರ್ಥಿಕತೆಯ ಅಭಿಯಾನ (ಕೆಡಿಇಎಂ), ಬಿಯಾಂಡ್ ಬೆಂಗಳೂರು ಕಾರ್ಯಕ್ರಮದ ಭಾಗವಾಗಿ ಜುಲೈ ತಿಂಗಳಲ್ಲಿ ಇತ್ತೀಚೆಗೆ ತುಮಕೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಿತು.

ಡಿಜಿಟಲ್ ಮಾಹಿತಿಯನ್ನು ಅಪ್ಲಿಕೇಶನ್ನಲ್ಲಿ ಪ್ರಕ್ರಿಯೆಗೊಳಿಸಲು, ಮೂಲಸೌಕರ್ಯ ಮತ್ತು ಕೈಗಾರಿಕಾ ಸಹಯೋಗಕ್ಕಾಗಿ ಭವಿಷ್ಯಕ್ಕೆ ಸಿದ್ಧವಾದ ಕೇಂದ್ರವಾಗಿ ತುಮಕೂರು ಈ ಕಾರ್ಯಕ್ರಮ ಪ್ರದರ್ಶಿಸಿತು, ೧೪ ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು, ತುಮಕೂರು ಮತ್ತು ಬೆಂಗಳೂರಿನಿ೦ದ ೧೦೦ ಕ್ಕೂ ಹೆಚ್ಚು ವ್ಯಾಪಾರ ಮತ್ತು ತಂತ್ರಜ್ಞಾನ ನಾಯಕರು ಮತ್ತು ಎಫ್‌ಕೆಸಿಸಿಐ ಮತ್ತು ಟಿಡಿಐಸಿಸಿ ಸೇರಿದಂತೆ ಪ್ರಮುಖ ವ್ಯಾಪಾರ ಸಂಸ್ಥೆಗಳ ಭಾಗವಹಿಸಿದ್ದವು.

ನಿಯೋಗವು ಪ್ರಮುಖ ಶೈಕ್ಷಣಿಕ ಸಂಸ್ಥೆಗಳಾದ ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಸ್‌ಐಟಿ) ಮತ್ತು ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಸ್‌ಎಸ್‌ಐಟಿ) ಗಳಿಗೆ ಭೇಟಿ ನೀಡಿತು – ಅಲ್ಲಿ ಪ್ರತಿನಿಧಿಗಳು ಸೈಬರ್ ಸೆಕ್ಯುರಿಟಿ ಪ್ರಯೋಗಾಲಯಗಳು ಮತ್ತು ಎಸ್‌ಐಟಿ ಸಂಸ್ಥೆಯಲ್ಲಿ ತಂತ್ರಜ್ಞಾನ ವ್ಯವಹಾರಗಳ ಇನ್ಕ್ಯುಬೇಟರ್ಗಳು (ಟಿಬಿಐ) ಸೇರಿದಂತೆ ಸುಧಾರಿತ ತಂತ್ರಜ್ಞಾನ ಪ್ರಯೋಗಾಲಯಗಳನ್ನು ಅನ್ವೇಷಿಸಿದರು. ಸಂಸ್ಥೆಗಳು ತಮ್ಮ ನವೀನ ಸಂಸ್ಕೃತಿ, ನಿಯೋಜನೆ ಸಾಮರ್ಥ್ಯಗಳು ಮತ್ತು ಕೌಶಲ್ಯಗಳನ್ನು ಪ್ರಸ್ತುತಪಡಿಸಿದವು, ತುಮಕೂರಿನ ಪ್ರತಿಭಾನ್ವಿತ ನಗರ ಸ್ಥಾನವನ್ನು ಬಲಪಡಿಸಿತು.

ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ನಗರದ ಡಿಜಿಟಲ್ ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಪರಿಹಾರಗಳನ್ನು ಅನ್ವೇಷಿಸಲು ನಿಯೋಗವು ತುಮಕೂರಿನ ಇಂಟಿಗ್ರೇಟೆಡ್ ಕಮಾಂಡ್ & ಕಂಟ್ರೋಲ್ ಸೆಂಟರ್ (ಐಸಿಸಿಸಿ) ಮತ್ತು ಇಂಟೆಲಿಜೆAಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಐಟಿಎಂಎಸ್) ಗೆ ಭೇಟಿ ನೀಡಿತು. ನೈಜ-ಸಮಯದ ಮೇಲ್ವಿಚಾರಣೆ, ಉತ್ತಮ ಆಡಳಿತ, ನಾಗರಿಕ-ಕೇಂದ್ರಿತ ಸೇವಾ ವಿತರಣೆ ಮತ್ತು ಸುಧಾರಿತ ನಗರ ಚಲನಶೀಲತೆಗೆ ಸಕ್ರಿಯಗೊಳಿಸುವ ಈ ವ್ಯವಸ್ಥೆಗಳನ್ನು ಪ್ರದರ್ಶಿಸಲಾಯಿತು.

ತುಮಕೂರು ನಗರ ಡಿಜಿಟಲ್ ಸೌಲಭ್ಯಗಳಿಂದ ಕೂಡಿದ ಕೇಂದ್ರವಾಗಿ ರೂಪಾಂತರಗೊAಡಿದ್ದು, ಐಸಿಸಿಸಿ ಮತ್ತು ಐಟಿಎಂಎಸ್ ಗಳನ್ನು ಮಾನದಂಡ ಅನುಷ್ಠಾನಗಳಾಗಿ ಗುರುತಿಸಲಾಗಿದೆ. “ವರ್ಷದ ಅತ್ಯತ್ತಮ ನಗರ” ಪ್ರಶಸ್ತಿ ಸೇರಿದಂತೆ ನಗರದ ಉನ್ನತ ಶ್ರೇಣಿಯ ಸ್ಮಾರ್ಟ್ ಸಿಟಿ ಕ್ಷೇತ್ರದಲ್ಲಿ ಅದರ ನಾಯಕತ್ವ ದೃಢೀಕರಿಸಿದೆ. ತುಮಕೂರಿನ ಬೆಳೆಯುತ್ತಿರುವ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ಹ್ಯಾಕಥಾನ್‌ಗಳಂತಹ ಸಹಯೋಗದ ಕಾರ್ಯಕ್ರಮಗಳ ಕುರಿತು ಚರ್ಚೆಗಳಿಗೆ ಅವಕಾಶ ಮಾಡಿಕೊಟ್ಟಿತು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ನಿಯೋಗವನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಶ್ರೀಮತಿ ಶುಭ ಕಲ್ಯಾಣ್, ಐಎಎಸ್, ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರ (ಡಿಐಸಿ), ತುಮಕೂರು ಸ್ಮಾರ್ಟ್ ಸಿಟಿ, ಕೆಐಎಡಿಬಿ ಮತ್ತು ಇತರ ಪ್ರಮುಖ ಇಲಾಖೆಗಳ ಅಧಿಕಾರಿಗಳು ಸ್ವಾಗತಿಸಿದರು. ಕೆಡಿಇಎಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಸಂಜೀವ್ ಕುಮಾರ್ ಗುಪ್ತಾ ಅವರೊಂದಿಗೆ ಜಿಲ್ಲಾಧಿಕಾರಿ ಅವರು ನಿಯೋಗದ ನೇತೃತ್ವ ವಹಿಸಿದ್ದರು.

ಇದು ತಕ್ಷಣದ ಕಚೇರಿ ಮತ್ತು ಕೌಶಲ್ಯ ಬಳಕೆಗೆ ಲಭ್ಯವಿರುವ ೩೦,೦೦೦ ಚದರ ಅಡಿ ಜಾಗದ ಸಮೀಕ್ಷೆಗೆ ಮುಂದಾದರು. ಐಟಿ, ಐಟಿಇಎಸ್ ಮತ್ತು ಜಿಸಿಸಿ ಕಂಪನಿಗಳನ್ನು ತುಮಕೂರಿಗೆ ಸ್ವಾಗತಿಸಲು ಜಿಲ್ಲಾ ಮಟ್ಟದಲ್ಲಿ ಉತ್ತಮ ಬೆಂಬಲ ಮತ್ತು ನೀತಿ ಸೌಲಭ್ಯಗಳನ್ನು ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು. ನಗರದಲ್ಲಿ ನಡೆಯುತ್ತಿರುವ ಅಭ್ಯಾಸಗಳು ಮತ್ತು ಡಿಜಿಟಲ್ ಆಡಳಿತ ಕ್ರಮಗಳ ಬಗ್ಗೆ ತಿಳಿದುಕೊಳ್ಳಲು ನಿಯೋಗ ಸ್ಮಾರ್ಟ್ ಸಿಟಿ ಆಯುಕ್ತರೊಂದಿಗೆ ಸಂವಾದ ನಡೆಸಿತು.

ಭಾಗವಹಿಸಿದ್ದ ಸಂಸ್ಥೆಗಳು: ಕೇಪ್ ಜೆಮಿನಿ, ಕೈಂಡ್ರಿಲ್, ಬಾಷ್, ಟೀಮ್ಲೀಸ್, ಅಷ್ಟಾಕ್ಷ ಲ್ಯಾಬ್ಸ್, ಚೇಂಜ್ಪೇ, ಟಿಎನ್‌ಎಸ್ ಫೌಂಡೇಶನ್, ಐಸಿಟಿ ಅಕಾಡೆಮಿ, ಅಪ್ನಾ ವಿಕಾಸ್, ಟಿಐಐಇಸಿ, ಭೈವ್ ವಕ್ಸ್ಪೇðಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ಇತರ. ಉದ್ಯಮದ ನಾಯಕರು ಸ್ಥಳೀಯ ಆಡಳಿತದೊಂದಿಗೆ ಮತ್ತು ಶೈಕ್ಷಣಿಕ ಸಂಸ್ಥೆಗಳು ಸ್ಥಳೀಯ ನೇಮಕಾತಿ, ಯೋಜನೆ ಆಧಾರಿತ ಕಲಿಕೆ ಮತ್ತು ಸಹಯೋಗದ ನಾವೀನ್ಯತೆಯಲ್ಲಿನ ಅವಕಾಶಗಳ ಕುರಿತು ಚರ್ಚಿಸಿದರು.

ತುಮಕೂರಿನ ಮೂಲಸೌಕರ್ಯದಲ್ಲಿ ಉದ್ಯಮ-ಶೈಕ್ಷಣಿಕ ಪಾಲುದಾರಿಕೆಗಳಿಗೆ ಪ್ರೋತ್ಸಾಹ ಮತ್ತು ಕೌಶಲ್ಯ ಕೇಂದ್ರಗಳು, ಜಾಗತಿಕ ಸಾಮರ್ಥ್ಯ ಕೇಂದ್ರ ಕಾರ್ಯಾಚರಣೆಗಳು ಮತ್ತು ನಾವೀನ್ಯತೆ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಈ ಭೇಟಿಯ ಪ್ರಮುಖ ಅಂಶಗಳಾಗಿವೆ, ೨೫೦ ಕ್ಕೂ ಹೆಚ್ಚು ಜನರ ಕಾರ್ಯಾಚರಣೆಯ ೩ ಕಂಪನಿಗಳು ಜಿಲ್ಲಾಧಿಕಾರಿಗಳೊಂದಿಗೆ ಉದ್ದೇಶ ಪತ್ರ ಹಂಚಿಕೊಡಿವೆ.

ಪ್ರಮುಖ ಗಣ್ಯರ ಉಲ್ಲೇಖಗಳು:

ಕೆಡಿಇಎಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ್ ಕುಮಾರ್ ಗುಪ್ತಾ ಈ ಭೇಟಿಯ ಕುರಿತು ಮಾತನಾಡುತ್ತಾ, “ಡಿಜಿಟಲ್ ಆರ್ಥಿಕ ಬೆಳವಣಿಗೆಗೆ ತುಮಕೂರು ಒಂದು ಉನ್ನತ-ಸಾಮರ್ಥ್ಯದ ಕೇಂದ್ರವಾಗಿದ್ದು, ಅದರ ಸಾಮರ್ಥ್ಯವನ್ನು ಅನಾವರಣಗೊಳಿಸಲು ಪಾಲುದಾರರ ಭಾಗವಹಿಸುವಿಕೆ ಅತ್ಯಗತ್ಯ. ಇಂದಿನ ಮುಕ್ತ ಸಭೆಯು ಸಹಯೋಗಕ್ಕೆ ಅಡಿಪಾಯ ಹಾಕಿದೆ, ಭವಿಷ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪ್ರತಿಭೆ, ಮೂಲಸೌಕರ್ಯ ಮತ್ತು ಸಹಯೋಗದ ಮನೋಭಾವ ನಿರ್ಣಯಿಸಲು ಮತ್ತು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಒಂದು ಆರಂಭಿಕ ಹಂತ ಆದರೆ ಹೊಸ ಅವಕಾಶಗಳ ಮತ್ತು ತುಮಕೂರು ನಾವೀನ್ಯತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ಅಭಿವೃದ್ಧಿಶೀಲ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಖಂಡಿತವಾಗಿಯೂ ಒಂದು ಪ್ರಮುಖ ಅಂಶವಾಗಿರುತ್ತದೆ.” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರಿನ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್, ಶುಭಾ ಕಲ್ಯಾಣ್, ಐ.ಎ.ಎಸ್. ಅವರು “ತುಮಕೂರಿಗೆ ಪ್ರಮುಖ ತಂತ್ರಜ್ಞಾನ ಮತ್ತು ಉದ್ಯಮ ಪಾಲುದಾರರ ನಿಯೋಗವನ್ನು ಸ್ವಾಗತಿಸಲು ನಾವು ಹರ್ಷವಾಗಿದೆ, ಇದು ದಿನವಿಡೀ ನಡೆಯುವ ಮುಕ್ತ ಸಭೆಯಾಗಿದೆ. ಈ ಭೇಟಿಯು ಶೈಕ್ಷಣಿಕ ಪ್ರತಿಭೆಯಿಂದ ಹಿಡಿದು ಲಭ್ಯವಿರುವ ಮೂಲಸೌಕರ್ಯದವರೆಗೆ ನಮ್ಮ ಸಮಗ್ರ ಪರಿಸರ ವ್ಯವಸ್ಥೆಯನ್ನು ಪ್ರದರ್ಶಿಸಿದೆ ಮತ್ತು ನಾವೀನ್ಯತೆ ಮತ್ತು ಉದ್ಯಮವನ್ನು ಬೆಂಬಲಿಸಲು ತುಮಕೂರು ಹೇಗೆ ಸಜ್ಜಾಗಿದೆ ಎಂಬುದನ್ನು ತೋರಿಸುತ್ತದೆ, ಕಂಪನಿಗಳು ಸಜ್ಜುಗೊಂಡಿರುವುದನ್ನು ಮತ್ತು ಸ್ಥಳೀಯ ಸಂಸ್ಥೆಗಳೊAದಿಗೆ ತೊಡಗಿಸಿಕೊಂಡಿರುವುದನ್ನು ಉತ್ತೇಜನಕಾರಿಯಾಗಿದೆ ಮತ್ತು ಈ ರೀತಿಯ ಸಂವಾದಗಳು ನಮ್ಮ ಡಿಜಿಟಲ್ ಆರ್ಥಿಕತೆಯನ್ನು ಸದೃಢಗೊಳಿಸುವ ಪರಿಣಾಮಕಾರಿ ಸಹಯೋಗಗಳಿಗೆ ದಾರಿ ಮಾಡಿಕೊಡುತ್ತವೆ” ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *