Menu

ಸಿಬಿಐ ಸೋಗಿನಲ್ಲಿ ಡಿಜಿಟಲ್‌ ಅರೆಸ್ಟ್‌: ಬೆಳಗಾವಿ ವ್ಯಕ್ತಿಗೆ 15 ಕೋಟಿ 45 ಲಕ್ಷ ರೂ. ವಂಚನೆ

Cyber fraud

ಬೆಳಗಾವಿಯಲ್ಲಿ ಡಿಜಿಟಲ್‌ ಅರೆಸ್ಟ್‌ ಹೆಸರಲ್ಲಿ ಬಹುದೊಡ್ಡ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ವಂಚಕರು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯನ್ನು ಡಿಜಿಟಲ್ ಅರೆಸ್ಟ್ ಮಾಡಿ 15 ಕೋಟಿ 45 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ.

ಉದ್ಯಮಿಗೆ ಫೋನ್ ಮಾಡಿದ ವಂಚಕರು, ತಾವು ಸಿಬಿಐ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದಾರೆ. ನಿಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣವಿದೆ, ಮನಿ ಲಾಂಡರಿಂಗ್ ಆರೋಪವಿದೆ. ತನಿಖೆಗೆ ಸಹಕರಿಸದಿದ್ದರೆ ತಕ್ಷಣವೇ ಬಂಧಿಸಲಾಗುವುದು ಎಂದು ಹೆದರಿಸಿದ್ದಾರೆ. ವಿಚಾರಣೆಯ ಹೆಸರಲ್ಲಿ ಬ್ಯಾಂಕ್ ಖಾತೆ ವಿವರ ಮತ್ತು ಒಟಿಪಿ ಪಡೆದುಕೊಂಡು ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.

ವಂಚಕರು ಉದ್ಯಮಿಯ ಖಾತೆಯಿಂದ ಮೊದಲು 10 ‘ಫಸ್ಟ್ ಲೇಯರ್ ಖಾತೆ’ ಗಳಿಗೆ ಹಣ ವರ್ಗಾಯಿಸಿ ನಂತರ ಅದನ್ನು ಹೈದರಾಬಾದ್, ಅಹಮದಾಬಾದ್, ಕೋಲ್ಕತ್ತಾ, ಗುವಾಹಟಿ, ಹರಿಯಾಣ ಮತ್ತು ದೆಹಲಿ ಸೇರಿದಂತೆ ದೇಶದ 6 ರಾಜ್ಯಗಳ 390ಕ್ಕೂ ಅಧಿಕ ಬ್ಯಾಂಕ್ ಖಾತೆಗಳ ಮೂಲಕ ಹಂಚಿಕೊಂಡಿದ್ದಾರೆ.

ನಕಲಿ ಕಂಪನಿ ಹೆಸರಿನಲ್ಲಿದ್ದ ಖಾತೆಯೊಂದಕ್ಕೆ 2 ಕೋಟಿ ರೂ. ವರ್ಗಾವಣೆಯಾಗಿದ್ದು, ಪೊಲೀಸರು ಈಗಾಗಲೇ 1 ಕೋಟಿ ರೂಪಾಯಿ ಫ್ರೀಜ್ ಮಾಡಿದ್ದಾರೆ. 14 ಕೋಟಿ 45 ಲಕ್ಷ ರೂಪಾಯಿಯನ್ನು ವಿವಿಧ ಎಟಿಎಂಗಳು ಮತ್ತು ಆನ್ಲೈನ್ ವಹಿವಾಟುಗಳ ಮೂಲಕ ಡ್ರಾ ಮಾಡಿಕೊಳ್ಳಲಾಗಿದೆ.

Related Posts

Leave a Reply

Your email address will not be published. Required fields are marked *