Menu

DIGIPIN: ಇಂಡಿಯಾ ಪೋಸ್ಟ್‌ನಿಂದ ಪಿನ್ ಕೋಡ್‌ ಬದಲಿಗೆ ಡಿಜಿಪಿನ್

ಪೋಸ್ಟಲ್‌ ಅಡ್ರೆಸ್‌ ನಲ್ಲಿ  ಮಹತ್ವ ಪಡೆದಿದ್ದ  ಪಿನ್ ಕೋಡ್‌ಗಳ ಯುಗ ಮುಗಿದಿದ್ದು, ಭಾರತೀಯ ಅಂಚೆ ಇಲಾಖೆಯು ಅದಕ್ಕೆ ಬದಲಾಗಿ ‘ಡಿಜಿಪಿನ್’ ಎಂಬ ಡಿಜಿಟಲ್ ವಿಳಾಸವನ್ನು ಪರಿಚಯಿಸಿದೆ.

ಇನ್ನು ಮುಂದೆ ದೇಶದಲ್ಲಿ ಡಿಜಿಪಿನ್ ಹೊಸ ವಿಳಾಸ ವ್ಯವಸ್ಥೆಯಾಗಲಿದೆ. ಸಾಂಪ್ರದಾಯಿಕ ಪಿನ್ ಕೋಡ್‌ಗಳು ವಿಶಾಲ ಪ್ರದೇಶವನ್ನು ಒಳಗೊಂಡಿದ್ದರೆ, 10-ಅಂಕಿಯ ಡಿಜಿಪಿನ್ ವ್ಯವಸ್ಥೆಯು ನಿಮ್ಮ ಮನೆ ಅಥವಾ ವ್ಯವಹಾರದ ನಿಖರವಾದ ಸ್ಥಳವನ್ನು ಪ್ರತಿನಿಧಿಸುತ್ತದೆ.

ನಿಖರವಾದ ಸ್ಥಳವನ್ನು ತಿಳಿದುಕೊಳ್ಳಲು ಭಾರತೀಯ ಅಂಚೆ ಇಲಾಖೆ ಡಿಜಿಪಿನ್ ವ್ಯವಸ್ಥೆಯನ್ನು ಪರಿಚಯಿಸಿದೆ. ಡಿಜಿಪಿನ್ 10-ಅಂಕಿಯ ಡಿಜಿಟಲ್ ಕೋಡ್  ಹೊಂದಿದೆ. ಡಿಜಿಪಿನ್ ನಿಖರವಾದ ಸ್ಥಳ ಮಾಹಿತಿ ಒದಗಿಸುತ್ತದೆ. ನಿಮ್ಮ ಮನೆ ಅಥವಾ ವ್ಯವಹಾರದ ನಿಖರವಾದ ಸ್ಥಳವನ್ನು ಈ ಡಿಜಿಪಿನ್ ಮೂಲಕ ಕಂಡುಹಿಡಿಯಬಹುದು.

ಡಿಜಿಪಿನ್ ರಚಿಸಲು ಮತ್ತು ಕೋಡ್ ಕಂಡುಹಿಡಿಯಲು ಗೊತ್ತುಪಡಿಸಿದ ಸರ್ಕಾರಿ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಮನೆಯನ್ನು ಕಂಡುಹಿಡಿಯಬಹುದು. ಡಿಜಿಪಿನ್‌ನ ಪ್ರಯೋಜನವೆಂದರೆ ಅದು ಪತ್ರ ವ್ಯವಹಾರವನ್ನು ಸರಿ ಯಾದ ಸ್ಥಳಕ್ಕೆ ತಲುಪಿಸುತ್ತದೆ ಮತ್ತು ಆಂಬ್ಯುಲೆನ್ಸ್‌ಗಳು ಮತ್ತು ಅಗ್ನಿಶಾಮಕ ಇಲಾಖೆಗಳಂತಹ ತುರ್ತು ಸೇವೆಗಳನ್ನು ಸ್ಥಳಕ್ಕೆ ನಿಖರವಾಗಿ ತಲುಪಲು ಸಹಾಯ ಮಾಡುತ್ತದೆ. ಗ್ರಾಮೀಣ ಪ್ರದೇಶಗಳು ಸೇರಿದಂತೆ ದೂರದ ಪ್ರದೇಶಗಳಲ್ಲಿ ಡಿಜಿಪಿನ್ ಪ್ರಯೋಜನಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಡಿಜಿಪಿನ್ ಮೂಲಕ ಇ-ಕಾಮರ್ಸ್ ವೆಬ್‌ಸೈಟ್‌ಗಳಿಗೂ ಸರಿಯಾದ ಸ್ಥಳಕ್ಕೆ ಪಾರ್ಸೆಲ್‌ಗಳನ್ನು ತಲುಪಿಸಲು ಸಾಧ್ಯವಾಗುತ್ತದೆ.

https://dac.indiapost.gov.in/mydigipin/home ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮತ್ತು ನೀವು ಕಂಡುಕೊಂಡ ಸ್ಥಳವನ್ನು ಕ್ಲಿಕ್ ಮಾಡುವ ಮೂಲಕ, ನಿಮ್ಮ 10-ಅಂಕಿಯ ಡಿಜಿಪಿನ್ ಅನ್ನು ನೀವು ಕಂಡು ಹಿಡಿಯ ಬಹುದು. ಡಿಜಿಪಿನ್ ನ್ನು ಇತರ ವಿಳಾಸ ವ್ಯವಸ್ಥೆಗಳಿಗಿಂತ ಭಿನ್ನವಾಗಿದೆ. ನಾಲ್ಕು ಮೀಟರ್ ತ್ರಿಜ್ಯದೊಳಗೆ ನಿಮ್ಮ ನಿಖರವಾದ ಸ್ಥಳವನ್ನು ನೀವು ತಿಳಿದುಕೊಳ್ಳಬಹುದು. ಇಂಡಿಯಾ ಪೋಸ್ಟ್ ಐಐಟಿ ಹೈದರಾಬಾದ್, NRSC ಮತ್ತು ISRO ಸಹಯೋಗದೊಂದಿಗೆ ಡಿಜಿಪಿನ್ ಎಂಬ ಜಿಯೋಕೋಡೆಡ್ ಡಿಜಿಟಲ್ ವಿಳಾಸ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದೆ. ಡಿಜಿಪಿನ್ ಅನ್ನು ಆಫ್‌ಲೈನ್‌ನಲ್ಲಿಯೂ ಬಳಸಬಹುದು.

Related Posts

Leave a Reply

Your email address will not be published. Required fields are marked *