Menu

ರಾಜ್ಯದ ಮೂರು ಜಿಲ್ಲೆಗಳಲ್ಲಿ ಡಿಫೆನ್ಸ್‌ ಮಾಕ್‌ ಡ್ರಿಲ್‌

ಕೇಂದ್ರ ಗೃಹ ಸಚಿವಾಲಯವು ದೇಶಾದ್ಯಂತ ಮಾಕ್​ ಡ್ರಿಲ್ ಮಾಡಲು ಆದೇಶಿಸಿದೆ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಮಾಕ್​ ಡ್ರಿಲ್​​ ಮಾಡಲಾಗುತ್ತಿದೆ. ಕರ್ನಾಟಕದ ಬೆಂಗಳೂರು, ಕಾರವಾರ ಮತ್ತು ರಾಯಚೂರಿನಲ್ಲಿ ನಾಳೆ ಮಾಕ್​ ಡ್ರಿಲ್​ಗೆ ನಿರ್ಧರಿಸಲಾಗಿದೆ ಎಂದು ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಹೇಳಿದ್ದಾರೆ.

ಎನ್‌ಸಿಸಿ, ಎನ್ನೆಸ್ಸೆಸ್‌, ಸಿವಿಲ್ ಡಿಫೆನ್ಸ್ ಮತ್ತು ವೈದ್ಯರು ಈ ಡ್ರಿಲ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪಹಲ್ಗಾಮ್​ನಲ್ಲಿ ನಡೆದ ಉಗ್ರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಹದಗೆಟ್ಟು ಉದ್ವಿಗ್ನತೆ ಸೃಷ್ಟಿಯಾಗಿದೆ. ಪಹಲ್ಗಾಂ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಸಿದ್ಧತೆ ನಡೆಸುತ್ತಿದೆ. ಇದರ ಭಾಗವಾಗಿ ದೊಡ್ಡ ಮಟ್ಟದಲ್ಲಿ ಸೇನಾ ತಾಲೀಮು ಆರಂಭಿಸಿದೆ.

ಎರಡೂ ರಾಷ್ಟ್ರಗಳಲ್ಲೂ ಯುದ್ಧದ ಕಾರ್ಮೋಡವಿದ್ದು, ವಿಶ್ವಸಂಸ್ಥೆಯು ಯುದ್ಧ ಕೈ ಬಿಟ್ಟು ಶಾಂತಿ ಸ್ಥಾಪನೆಗೆ ಮುಂದಾಗುವಂತೆ  ಸಲಹೆ ನೀಡಿದ್ದು, ಯುದ್ಧ ಯಾವುದಕ್ಕೂ ಪರಿಹಾರವಲ್ಲ ಎಂದು ಹೇಳಿದೆ.

1971 ರಲ್ಲಿ ಭಾರತ ಮತ್ತು ಪಾಕ್‌ ಮಮಧ್ಯೆ ಯುದ್ಧಕ್ಕೂ ಮೊದಲು ಹೀಗೆ ದೇಶಾದ್ಯಂತ ಸೇನೆಯಿಂದ ಕವಾಯತು ಅಭ್ಯಾಸ, ನಾಗರಿಕರಿಗೆ ರಕ್ಷಣಾ ತರಬೇತಿ  ಅಣಕು ಪ್ರದರ್ಶನ ನಡೆಸಲಾಗಿತ್ತು.

 

 

 

 

Related Posts

Leave a Reply

Your email address will not be published. Required fields are marked *