Saturday, February 28, 2026
Menu

ಜ್ಯೋತಿಷಿಯ ಮಾತಿಗೆ ಹೆದರಿ ಬೆಂಗಳೂರಿನಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡರಾ?

ಬೆಂಗಳೂರು ನಗರದ ಬಾಗಲಗುಂಟೆಯ ಎಂಇಐ ಲೇಔಟ್‌ನಲ್ಲಿ ಜ್ಯೋತಿಷಿಯು ಅಲ್ಪಾಯುಷಿ ಎಂದು ಭವಿಷ್ಯ ನುಡಿದಿದ್ದಕ್ಕೆ ಹೆದರಿಕೊಂಡ ಟೆಕ್ಕಿ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ.

ವಿದ್ಯಾಜ್ಯೋತಿ (29) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಆಕೆ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿ ವರ್ಕ್ ಫ್ರಂ ಹೋಮ್‌ನಲ್ಲಿದ್ದರು. ಆಕೆಗೆ ಜ್ಯೋತಿಷಿಯೊಬ್ಬರು ನೀನು ಅಲ್ಪಾಯುಷಿ ಎಂದು ಭವಿಷ್ಯ ನುಡಿದಿ ದ್ದರು. ಹೀಗಾಗಿ ಮನೆಯವರು, ಅಪ್ಪ, ಅಮ್ಮ ಮಗಳ ಆಸೆಯಂತೆ ಎಲ್ಲವನ್ನೂ ಮಾಡಿದ್ದರು. ಕೊಡಗು ಮೂಲದ ಯುವಕನ ಪ್ರೀತಿಸುತ್ತಿದ್ದ ವಿದ್ಯಾ ಇಷ್ಟದಂತೆ ಎರಡೂ ಮನೆಯವರು ಒಪ್ಪಿಗೆ ಸೂಚಿಸಿ ಮದುವೆ ಮಾಡಿಕೊಡಲು ಒಪ್ಪಿಕೊಂಡಿದ್ದರು.

ಜ್ಯೋತಿಷಿ ಒಂಬತ್ತು ದಿನ ಪೂಜೆ ಮಾಡಲು ಸೂಚಿಸಿದ್ದರು. ಅದರಂತೆ ಮನೆಯಲ್ಲಿ ಒಂಬತ್ತನೇ ದಿನದ ಪೂಜೆ ಮನೆಯಲ್ಲಿ ನಡೆಯುತ್ತಿತ್ತು. ಕೊನೆಯ ದಿನವಾದ್ದರಿಂದ ಮಾರಮ್ಮ ದೇವರಿಗೆ ತಾಳಿ ಕೊಡುವಂತೆ ಜ್ಯೋತಿಷಿ ತಿಳಿಸಿದ್ದರು. ಮನೆಯಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು.

ಊಟದ ನಂತರ ವಿದ್ಯಾ ರೂಂಗೆ ಹೋಗಿದ್ದರು. ಸಂಜೆ ತಾಯಿ ಕೂಗಿದರೂ ವಿದ್ಯಾ ಹೊರಬಂದಿರಲಿಲ್ಲ. ಕೆಲಸ ಮಾಡುತ್ತಿರಬೇಕೆಂದು ಎಲ್ಲರೂ ಸುಮ್ಮನಾಗಿದ್ದರು. ರಾತ್ರಿ ಎಂಟು ಗಂಟೆ ಸುಮಾರಿಗೆ ತಾಯಿ ದೇವಸ್ಥಾನಕ್ಕೆ ತೆರಳಲು ವಿದ್ಯಾಳನ್ನು ಕರೆದಾಗ ಬಾಗಿಲು ತೆರೆಯಲಿಲ್ಲ. ಅನುಮಾನಗೊಂಡು ಕಿಟಕಿಯಲ್ಲಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Posts

Leave a Reply

Your email address will not be published. Required fields are marked *