ಧರ್ಮಸ್ಥಳ ಫೈಲ್ಸ್ ಸಿನಿಮಾ ತಯಾರಿ ಪ್ಲಾನ್ ಜೊತೆಗೆ ವೆಬ್ ಸಿರೀಸ್ ಮಾಡುವುದಕ್ಕೂ ಸಿದ್ಧತೆ ಭರದಿಂದ ಸಾಗಿದೆ. ಫಿಲಂ ಚೇಂಬರ್ ನಲ್ಲಿ ಈಗಾಗಲೇ ಸದ್ದಿಲ್ಲದೆ ಚಿತ್ರತಂಡ ಟೈಟಲ್ ರಿಜಿಸ್ಟರ್ ಮಾಡಿಸಿದೆ. ಫಿಲಂ ಚೇಂಬರ್ ಟೈಟಲ್ ಕಮಿಟಿಯಿಂದಲೂ ಅನುಮತಿ ಪಡೆದುಕೊಂಡಿದೆ.
ಕಾನೂನು ತೊಡಕು ಉಂಟಾದರೆ ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಿ ಸಿನಿಮಾ ಮಾಡಲು ಚಿತ್ರತಂಡ ಸಿದ್ಧವಾಗಿದೆ. ಮಲಯಾಳಿ ನಿರ್ದೇಶಕ ವಿಕೆ ಪ್ರಕಾಶ್ ಅವರಿಂದ ಸಿನಿಮಾ ಮಾಡುವ ಪ್ಲಾನ್ ನಡೆಯುತ್ತಿದೆ.
ಎಂಎಸ್ ರಮೇಶ್ ಕಥೆ ರೆಡಿ ಮಾಡಿದ್ದಾರೆ.
ಶ್ರೀರಾಮ್ ಚಿತ್ರ ಸೇರಿದಂತೆ ಹಲವು ಸಿನಿಮಾ ಮಾಡಿರುವ ನಿರ್ದೇಶಕರಿಂದ ಕಥೆ ತಯಾರಾಗುತ್ತಿದೆ. ಓಂ ಶ್ರೀ ಚಾಮುಂಡೇಶ್ವೇರಿ ಪರೊಡಕ್ಷನ್‌ನಡಿ ಚಿತ್ರ ತಯಾರಾಲಿದೆ.
ಕೇರಳ ಫೈಲ್ಸ್, ಕಾಶ್ಮೀರಿ ಫೈಲ್ಸ್ ರೀತಿ ಧರ್ಮಸ್ಥಳ ಫೈಲ್ಸ್ ಸಿನಿಮಾ ಮಾಡುವ ಪ್ಲಾನ್ ನಡೆಯುತ್ತಿರುವುದಾಗಿ ಹೇಳುವ ಚಿತ್ರತಂಡ ಸದ್ಯದಲ್ಲಿಯೇ ಬಹಿರಂಗವಾಗಿ ಅನೌನ್ಸ್ ಮಾಡಲಿದೆ.