ಧರ್ಮಸ್ಥಳ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚನೆಗೊಂಡಿರುವುದಕ್ಕೆ ಧರ್ಮಸ್ಥಳ ವಿಚಾರದಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿ ಶಾಸಕರ ಆರೋಪಕ್ಕೆ ಏನು ಹೇಳಬೋಕೋ ಗೊತ್ತಿಲ್ಲ, ಒಬ್ಬ ಅನಾಮಿಕ ಕೋರ್ಟ್‌ಗೆ ಬಂದ,
ಕೋರ್ಟ ಮುಖಾಂತರ ಎಸ್‌ಐಟಿ ರಚನೆ ಆಗಿದೆ, ಸರಕಾರ ಸಮರ್ಪಕವಾಗಿ ಉತ್ತರ ಕೊಡುತ್ತದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಏನೋ ಷಡ್ಯಂತ್ರ ಇರೋದಕ್ಕೆ ತನಿಖೆ ಎಸ್‌ಐಟಿಗೆ ವಹಿಸಲಾಗಿದೆ. ಸೌಜನ್ಯ ಮರ್ಡರ್ ಕೇಸ್ ಹಾಗೂ ಇತರ ಮರ್ಡರ್ ಕೇಸ್‌ಗಳಿವೆ. ಸಾವಿರಾರು ಬಾಡಿ ಇವೆ ಅಂತ ಅನಾಮಿಕ ಹೇಳುತ್ತಿದ್ದು, ಯಾವ ಸಮಯದಲ್ಲಿ ಏನಾಗಿದೆ ಗೊತ್ತಿಲ್ಲ. ಎಸ್‌ಐಟಿ ಕೆಲಸ ಮಾಡುತ್ತಿದ್ದು, ವರದಿ ಬರಬೇಕಿದೆ. ಎಲ್ಲದಕ್ಕೂ ಕಾಂಗ್ರೆಸ್ ಕಡೆ ಬೊಟ್ಟು ಮಾಡಿದ್ರೆ ನಾವೇನು ಮಾಡಬೇಕು ಎಂದು ಲಾಡ್ ಪ್ರಶ್ನಿಸಿದರು.
ಚುನಾವಣಾ ಆಯೋಗದ ಮೇಲೆ ಮತಗಳ್ಳತನ ಆರೋಪ ವಿಚಾರಕ್ಕೆ ಪ್ರತಿಕ್ರಯಿಸಿದ ಸಚಿವರು, ವಿಷಯ ಸುಪ್ರೀಂ ಕೋರ್ಟ್‌ಗೆ ಹೋಗಿದೆ. ಬಿಹಾರ್‌ನಲ್ಲಿ 65 ಲಕ್ಷ ಮತದಾರರ ಹೆಸರು ಅಳಿಸಲಾಗಿದೆ. ಹೀಗಾಗಿ ಎಲೆಕ್ಷನ್ ಕಮಿಷನ್ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ರಾಹುಲ್ ಗಾಂಧಿ ಮಾತನಾಡಿದ್ದು ಭಾರತೀಯರ ಹಕ್ಕಿನ ಬಗ್ಗೆ, ಅದರಲ್ಲಿ ಬಿಜೆಪಿಯವರು ಬಂದು ಮಾತಾಡೋದೇನಿದೆ? ಇವರಿಗೆ ಈ ಬಗ್ಗೆ ಮಾಹಿತಿ ಇದೆಯಾ? ನಮ್ಮ ಸರಕಾರವಿದ್ದಾಗ 25 ದಿನಗಳಲ್ಲಿ ಚುನಾವಣೆ ಮಗಿಸುತ್ತಿದ್ದೆವು, ಇವರ ಕಾಲದಲ್ಲಿ 90 ದಿನಗಳವರೆಗೆ ಚುನಾವಣೆ ನಡೆಯುತ್ತಿದೆ. 2004 ರಿಂದ 2025 ರಲ್ಲಿ ಎಷ್ಟೊಂದು ಟೆಕ್ನಾಲಜಿ ಬಹಳಷ್ಟು ಬದಲಾಗಿದೆ, ಆದರೆ ಇವರಿಗೆ ಡಿಜಿಟಲ್ ವೋಟರ್ ಲಿಸ್ಟ್ ಮಾಡಲು ಆಗುತ್ತಿಲ್ಲ. ಡಿಜಿಟಲ್ ಇಂಡಿಯಾ, ಖೇಲೋ ಇಂಡಿಯಾ ಅಂತ ದಿನ ಬೆಳಗಾದರೆ ಬಿಜೆಪಿಯವರು ಹೇಳುತ್ತಾರೆ ಎಂದರು.