ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾತಂಡವು ಬೆಂಗಳೂರಿನಲ್ಲಿ ಮಹಜರು ಪ್ರಕ್ರಿಯೆ ಮುಂದುವರಿಸಿದೆ. ಆರೋಪಿ ಚಿನ್ನಯ್ಯನನ್ನು ಕರೆದುಕೊಂಡು ಬಂದು ವಿದ್ಯಾರಣ್ಯಪುರದ ತಿಂಡ್ಲು ಸರ್ಕಲ್ ಬಳಿಯ ಸರ್ವಿಸ್ ಅಪಾರ್ಟ್ಮೆಂಟ್‌ನಲ್ಲಿ ಎಸ್‌ಐಟಿ ಮಹಜರು ನಡೆಸುತ್ತಿದೆ.
ವಿದ್ಯಾರಣ್ಯಪುರದ ಎಸ್.ಬಿ ಮ್ಯಾನ್ ಷನ್ ಸರ್ವೀಸ್ ಅಪಾರ್ಟ್ಮೆಂಟ್ ನಲ್ಲಿ ಷಡ್ಯಂತ್ರ ರೂಪಿಸಿದ ಆರೋಪ ಹಿನ್ನಲೆ ತನಿಖಾ ತಂಡ ಮಹಜರು ಕೈಗೊಂಡಿದೆ. 4-5 ತಿಂಗಳ ಹಿಂದೆ ಈ ಸರ್ವಿಸ್ ಅಪಾರ್ಟ್‌ಮೆಂಟ್ ಗೆ ಚಿನ್ನಯ್ಯ ಮತ್ತು ತಂಡ ಬಂದಿತ್ತು , ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ, ಸುಜಾತ ಭಟ್, ಜಯಂತ್, ಚಿನ್ನಯ್ಯ ಬುರುಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಗಿರೀಶ್ ಮಟ್ಟಣ್ಣವರ್ ವಾಸವಿರುವ ಪ್ಲಾಟ್ ಸಮೀಪವೇ ಈ ಸರ್ವೀಸ್ ಅಪಾರ್ಟ್‌ಮೆಂಟ್ ಇದೆ ಎಂಬುದು ಕೂಡ ಗಮನಾರ್ಹ. ತಡರಾತ್ರಿ ಎರಡು ಗಂಟೆ ಸುಮಾರಿಗೆ ಎಸ್ಐಟಿ ತಂಡ ಇಲ್ಲಿಗೆ ಆಗಮಿಸಿ ಪರಿಶೀಲನೆ ಮತ್ತು ಮಹಜರು ಪ್ರಕ್ರಿಯೆ ನಡೆಸುತ್ತಿದೆ.
ವ್ಯಕ್ತಿಗೆ ಮಾಸ್ಕ್ ಹಾಕಿಸಿ ಎಸ್‌ಐಟಿ ಸಿಬ್ಬಂದಿ ಸಹಕಾರ ನಗರ ಸುತ್ತಾಡಿದ್ದು, ಅಜ್ಞಾತ ಸ್ಥಳಕ್ಕೆ ಚಿನ್ನಯ್ಯನ ಶಿಫ್ಟ್ ಮಾಡಿರುವ ಸಾಧ್ಯತೆ ಇದೆ, ಸಂಜಯ್ ನಗರದ ಅಪಾರ್ಟ್ಮೆಂಟ್ ನಲ್ಲಿರುವ ಗಿರೀಶ್ ಮಟ್ಟಣ್ಣನವರ್ ಹಾಗೂ ಮಲ್ಲೇಶ್ವರಂನಲ್ಲಿರುವ ಮತ್ತೊಂದು ಮನೆಗೆ ಜಯಂತ್‌ನನ್ನು ಕರೆದೊಯ್ದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.