ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಲ ದೂರುದಾರ, ಆರೋಪಿಯಾಗಿದ್ದವರು ಹೊಂದಿರುವುದಕ್ಕಿಂತ ಹೆಚ್ಚಿನ ಮಾಹಿತಿ ತಾವು ಹೊಂದಿರುವುದಾಗಿ ಹೇಳಿಕೊಂಡಿರುವ ಅರ್ಜಿದಾರರು ಸೆಪ್ಟೆಂಬರ್ 26 ರಂದು ನ್ಯಾಯಾಲಯಕ್ಕೆ ಸ್ವತಂತ್ರ ಮಾಹಿತಿಯನ್ನು ಸಲ್ಲಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಅರ್ಜಿದಾರರಾದ ಪುರಂದರ ಗೌಡ ಮತ್ತು ತುಕಾರಾಂ ಗೌಡ ಅವರ ಪರವಾಗಿ ಹಿರಿಯ ವಕೀಲ ದೀಪಕ್ ಖೋಸ್ಲಾ ಮತ್ತು ವಿಶೇಷ ಸಾರ್ವಜನಿಕ ಅಭಿಯೋಜಕ ಬಿ ಎನ್ ಜಗದೀಶ ಅವರ ವಾದವನ್ನು ಆಲಿಸಿದ ನಂತರ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಈ ಆದೇಶ ಪ್ರಕಟಿಸಿದ್ದಾರೆ.
ಮೂಲ ದೂರುದಾರರು ತೋರಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯ ಶವಗಳನ್ನು ಹೊರತೆಗೆಯಲು ಸ್ಥಳಗಳನ್ನು ತೋರಿಸಲು ಸಿದ್ಧರಿರುವ ಅರ್ಜಿದಾರರ ಮನವಿ ಪರಿಗಣಿಸಲು ವಿಶೇಷ ತನಿಖಾ ತಂಡಕ್ಕೆ ನಿರ್ದೇಶನ ನೀಡಬೇಕೆಂದು ಖೋಸ್ಲಾ ಕೋರ್ಟ್‌ಗೆ ಮನವಿ ಮಾಡಿದರು. ದೂರುದಾರರಾಗಿದ್ದ ನೈರ್ಮಲ್ಯ ಕಾರ್ಮಿಕ ಈಗ ಆರೋಪಿಯಾಗಿದ್ದಾರೆ. ಅವರನ್ನು ಹೊರತುಪಡಿಸಿ ಅರ್ಜಿದಾರರು ಬೇರೆ ಯಾವ ಸ್ವತಂತ್ರ ಮಾಹಿತಿಯನ್ನು ಹೊಂದಿದ್ದಾರೆ ಎಂಬುದನ್ನು ತಿಳಿಸುವಂತೆ ಕೋರ್ಟ್ ಕೇಳಿದೆ.
ಶವಗಳನ್ನು ಹೂಳಲು ದೂರುದಾರರು ಈ ಹಿಂದೆ ಹೇಳಿದ್ದ 14 ಸ್ಥಳಗಳಿಗಿಂತ ಹೆಚ್ಚಿನ ಸ್ಥಳಗಳಿವೆ ಎಂದು ಹಿರಿಯ ವಕೀಲ ಖೋಸ್ಲಾ ಹೇಳಿದರು. ನ್ಯಾಯಾಲಯವು ಸೆಪ್ಟೆಂಬರ್ 26 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೇಳಿತು.
ದೂರುದಾರ ನೀಡಿದ್ದ ಮಾಹಿತಿಯ ಆಧಾರದ ಮೇಲೆ 13 ಸ್ಥಳಗಳನ್ನು ಅಗೆದಾಗ ಒಂದು ಸ್ಥಳದಲ್ಲಿ ಮಹಿಳೆಯ ತಲೆಬುರುಡೆ ಕಂಡುಬಂದಿದೆ, ಎಫ್‌ಎಸ್‌ಎಲ್ ವರದಿಯು ಅದು ಪುರುಷನದ್ದಾಗಿದೆ ಎಂದು ತಿಳಿಸಿದೆ. ದೂರುದಾರರು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತನಿಖೆಯು ಬಹಿರಂಗಪಡಿಸಿದ್ದಾಗಿ ಎಂದು ಎಸ್‌ಪಿಪಿ ಜಗದೀಶ ವಿವರಿಸಿದರು. ದೂರುದಾರರ ಹೇಳಿಕೆ ದಾಖಲಿಸು ವಲ್ಲಿನ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯವು ದೂರುದಾರರ ಹಿಂದೆ ಯಾವ ಪಿತೂರಿ ಇದೆ ಎಂದು ಪ್ರಶ್ನಿಸಿದೆ.