ಧರ್ಮಸ್ಥಳ ಅಸಹಜ ಸಾವುಗಳ ತನಿಖೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ಜೊತೆ ಇದ್ದ ವಕೀಲರಿಗೆ ಎಸ್‌ಐಟಿ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಚಿನ್ನಯ್ಯ ಪರ ವಕೀಲ ಕೆ.ವಿ.ಧನಂಜಯ್ ಹಾಗೂ ತಂಡದ ವಿರುದ್ಧ ತನಿಖೆ ನಡೆಸುವಂತೆ ಕೋರಿ ಗಾಮಸ್ಥರು ದೂರು ನೀಡಿದ್ದಾರೆ.
ವಕೀಲ ಕೆ.ವಿ.ಧನಂಜಯ, ಓಜಸ್ವಿ ಗೌಡ, ಸಚಿನ್ ದೇಶಪಾಂಡೆ, ದಿವಿನ್, ಧೀರಜ್ ಹಾಗೂ ಮಂಜುನಾಥ್ ವಿರುದ್ಧ ಎಸ್‌ಐಟಿ ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ದೂರಿನ ಪ್ರತಿಯಲ್ಲಿ ದಾಖಲೆಗಳನ್ನು ಕೆ.ವಿ.ಧನಂಜಯ್ ಬಳಿ ಕೊಟ್ಟಿರೋದಾಗಿ ಚಿನ್ನಯ್ಯ ಹೇಳಿದ್ದು, ಸುಪ್ರೀಂ ಕೋರ್ಟ್ ನಲ್ಲೂ ಚಿನ್ನಯ್ಯ ಪರ ವಕಾಲತ್ತು ಧನಂಜಯ್ ವಕಾಲತ್ತು ವಹಿಸಿದ್ದರು. ಗುಂಡಿ ಅಗೆಯುವ ಹೊತ್ತಲ್ಲಿ ಚಿನ್ನಯ್ಯ ಜೊತೆಗೆ ಧನಂಜಯ್ ಜ್ಯೂನಿಯರ್ ವಕೀಲರು ಇದ್ದರು. ವಕೀಲರು ಕೂಡ ಷಡ್ಯಂತ್ರದ ಭಾಗವಾಗಿರುವ ಸಾಂದ್ಯತೆ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚಿನ್ನಯ್ಯನ 12 ದಿನದ ಎಸ್‌ಐಟಿ ಕಸ್ಟಡಿ ಅಂತ್ಯಗೊಂಡಿದ್ದು, ಸೆ. 3 ರಂದು ಸಂಜೆ ಬೆಳ್ತಂಗಡಿ ಹೆಚ್ಚುವರಿ ವ್ಯವಹಾರಿಕ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ವಿಜಯೇಂದ್ರ.ಎಚ್.ಟಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯವು ಸೆ.6 ವರೆಗೆ ಮತ್ತೆ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶಿಸಿದೆ.


