Menu

ಮೂವರು ಅಧಿಕಾರಿಗಳ ವಜಾಗೊಳಿಸಲು ಏರ್‌ ಇಂಡಿಯಾಗೆ ಡಿಜಿಸಿಎ ಆದೇಶ

ಏರ್‌ ಇಂಡಿಯಾ ಸಂಸ್ಥೆ ಮೂವರು ಹಿರಿಯ ಅಧಿಕಾರಿಗಳನ್ನು ತಕ್ಷಣವೇ ಕೆಲಸದಿಂದ ತೆಗೆದು ಹಾಕುವಂತೆ ನಾಗರಿಕ ವಿಮಾನಯಾನ ನಿಯಂತ್ರಕ ಆದೇಶಿಸಿದೆ.
ವಿಮಾನ ಸಿಬ್ಬಂದಿಯ ವೇಳಾಪಟ್ಟಿ ಮತ್ತು ರೋಸ್ಟರಿಂಗ್‌ಗೆ ಸಂಬಂಧಿಸಿದ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ವಿಭಾಗೀಯ ಉಪಾಧ್ಯಕ್ಷ ಸೇರಿದಂತೆ ಮೂವರು ಹಿರಿಯ ಅಧಿಕಾರಿಗಳನ್ನು ತಕ್ಷಣ ತೆಗೆದುಹಾಕುವಂತೆ ಡಿಜಿಸಿಎ ಹೇಳಿದೆ.

ಮೂವರು ಅಧಿಕಾರಿಗಳ ವಿರುದ್ಧ ತ್ವರಿತವಾಗಿ ಆಂತರಿಕ ತನಿಖೆ ನಡೆಸಬೇಕು. ಇಲ್ಲದಿದ್ದರೆ ವಿಮಾನಯಾನ ಸಂಸ್ಥೆಯು ತನ್ನ ಕಾರ್ಯಾಚರಣೆಯ ಅನುಮತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಸೇರಿದಂತೆ ಕಠಿಣ ಕ್ರಮ ಎದುರಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿದೆ.

ವಿಮಾನಯಾನ ಸಂಸ್ಥೆಯ ದೇಶೀಯ ಮತ್ತು ಅಂತರರಾಷ್ಟ್ರೀಯ ಸಿಬ್ಬಂದಿ ನಿಯೋಜನೆಯನ್ನು ಮೇಲ್ವಿಚಾರಣೆ ಮಾಡುವ ಏರ್ ಇಂಡಿಯಾದ ಇಂಟಿಗ್ರೇಟೆಡ್ ಆಪರೇಷನ್ಸ್ ಕಂಟ್ರೋಲ್ ಸೆಂಟರ್ ಲೆಕ್ಕಪರಿಶೋಧನೆಯ ಬಳಿಕ ಡಿಜಿಸಿಎ ಈ ಕ್ರಮಕ್ಕೆ ಮುಂದಾಗಿದೆ. ಡಿಜಿಸಿಎ ಹೊರಡಿಸಿದ ಶೋಕಾಸ್ ನೋಟಿಸ್‌ನಂತೆ ಮೇ 16 ಮತ್ತು ಮೇ 17 ರಂದು ಬೆಂಗಳೂರಿನಿಂದ ಲಂಡನ್ ಹೀಥ್ರೂಗೆ ಏರ್ ಇಂಡಿಯಾ ನಿರ್ವಹಿಸುವ ಎರಡು ವಿಮಾನಗಳು ಗರಿಷ್ಠ ಹಾರಾಟದ ಕರ್ತವ್ಯ ಸಮಯ ಮಿತಿ 10 ಗಂಟೆಗಳನ್ನು ಮೀರಿತ್ತು ಎಂದು ಹೇಳಿದೆ.

ಶೋಕಾಸ್‌ ನೋಟಿಸ್‌ನಲ್ಲಿ ಇನ್ನೂ ಹಲವು ಪ್ರಶ್ನೆಗಳನ್ನು ಡಿಜಿಸಿಎ ಕೇಳಿದ್ದು 7 ದಿನಗಳ ಒಳಗಡೆ ಉತ್ತರಿಸಬೇಕೆಂದು ಏರ್‌ ಇಂಡಿಯಾಗೆ ಸೂಚಿಸಿದೆ.

Related Posts

Leave a Reply

Your email address will not be published. Required fields are marked *