Menu

ಅರ್ಹ ಭಾರತೀಯರಿಗೆ ಸರ್ಕಾರಿ ಸೌಲಭ್ಯ: ಪ್ರಧಾನಿ ಮೋದಿ

10 ಕೋಟಿ ನಕಲಿ ಮತದಾರರನ್ನು ಹೊರಹಾಕಲಾಗಿದ್ದು, ಅರ್ಹ ಭಾರತೀಯರಿಗೆ ನೇರವಾಗಿ ಸರ್ಕಾರಿ ಸೌಲಭ್ಯಗಳು ತಲುಪಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಂಗಳವಾರ ರಾಷ್ಟ್ರಪತಿ ಭಾಷಣದ ಮೇಲೆ ಅಭಿನಂದನಾ ಭಾಷಣ ಮಾಡಿದ ಅವರು, ದೇಶದಲ್ಲಿ 10 ಕೋಟಿ ನಕಲಿ ಮತದಾರರನ್ನು ಪಟ್ಟಿಯಿಂದ ಹೊರಹಾಕಲಾಗಿದೆ. ಇದರಿಂದ 3 ಲಕ್ಷ ಕೋಟಿ ರೂ. ಅಕ್ರಮವಾಗಿ ಅನರ್ಹರ ಪಾಲಾಗುತ್ತಿದ್ದ ಹಣ ರಕ್ಷಿಸಲಾಗಿದೆ ಎಂದರು. ಬಡವರ ಬಗ್ಗೆ ಮಾತನಾಡುತ್ತಿದ್ದರೆ ಕೆಲವರಿಗೆ ಬೋರಿಂಗ್ ಆಗಿ ಕಾಣುತ್ತದೆ. ಕೆಲವರಿಗೆ

ನಾಳೆ ಕುಂಭಮೇಳದಲ್ಲಿ ಪ್ರಧಾನಿ ಮೋದಿ ಪವಿತ್ರಾ ಸ್ನಾನ!

ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ದಿನವಾದ ಬುಧವಾರವೇ ಪ್ರಧಾನಿ ನರೇಂದ್ರ ಮೋದಿ ಕುಂಭಮೇಳದಲ್ಲಿ ಪವಿತ್ರಾ ಸ್ನಾನ ಮಾಡಲಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಗೆ ಬುಧವಾರ ತೆರಳಲಿರುವ ಮೋದಿ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ. ಪ್ರಧಾನಿ ಮೋದಿ ಬೆಳಗ್ಗೆ 10:05 ಕ್ಕೆ ಪ್ರಯಾಗ್‌ರಾಜ್

205 ಭಾರತೀಯ ವಲಸಿಗರನ್ನು ವಾಪಸ್ ಕಳುಹಿಸಿದ ಅಮೆರಿಕ

ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಹೋಗಿದ್ದ 205 ಭಾರತೀಯರನ್ನು ಸೇನಾ ವಿಮಾನದ ಮೂಲಕ ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ. ಟೆಕ್ಸಾಸ್ ನಿಂದ ಸೋಮವಾರ ರಾತ್ರಿ ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ವಿಮಾನ ಭಾರತದ ಕಡೆ ಹೊರಟಿದೆ. ಅಕ್ರಮ ವಲಸಿಗರ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು,

ತೆಲಂಗಾಣದಲ್ಲಿ ಶೇ.56ರಷ್ಟು ಹಿಂದುಳಿದ ವರ್ಗ: ಜಾತಿ ವರದಿ

ಇತ್ತೀಚೆಗೆ ಮುಕ್ತಾಯಗೊಂಡ ಜಾತಿ ಗಣತಿಯ ವರದಿಯ ಪ್ರಕಾರ ತೆಲಂಗಾಣದಲ್ಲಿ ಒಟ್ಟು ಜನಸಂಖ್ಯೆಯ ಶೇ.56.33 ಜನ ಹಿಂದುಳಿದ ವರ್ಗಗಳಿಗೆ ಸೇರಿದವರು ಎಂದು ಸಚಿವ ಉತ್ತಮ್ ಕುಮಾರ್ ರೆಡ್ಡಿ ಬಹಿರಂಗಪಡಿಸಿದ್ದಾರೆ. ಇದರಲ್ಲಿ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಗಳ ಸದಸ್ಯರು

ಕೆಲಸದ ಅವಧಿ ವಾರಕ್ಕೆ 90 ಗಂಟೆಗೆ ಹೆಚ್ಚಿಸುವ ಪ್ರಸ್ತಾವನೆ ಇಲ್ಲವೆಂದ ಕೇಂದ್ರ

ದೇಶದಲ್ಲಿ ಕೆಲಸದ ಅವಧಿಯನ್ನು ವಾರಕ್ಕೆ 70 ಹಾಗೂ 90 ಗಂಟೆಗೆ ಹೆಚ್ಚಿಸುವ ಬಗ್ಗೆ ಯಾವ ಪ್ರಸ್ತಾವನೆಗಳೂ ನಮ್ಮ ಮುಂದೆ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಲೋಕಸಭೆಗೆ ನೀಡಿದ ಲಿಖಿತ

ಉಪ್ಪಿಟ್ಟು ಬದಲು ಬಿರಿಯಾನಿ ಕೊಡಿ: ಅಂಗನವಾಡಿ ಬಾಲಕನ ಬೇಡಿಕೆ ವೈರಲ್!

ಅಂಗನವಾಡಿಯಲ್ಲಿ ಉಪ್ಪಿಟ್ಟು ಕೊಡುವ ಬದಲು ಬಿರಿಯಾನಿ ಮತ್ತು ಚಿಕನ್ ಫ್ರೈ ಕೊಡುವಂತೆ ಬಾಲಕ ಮನವಿ ಮಾಡಿದ ವೀಡಿಯೋ ವೈರಲ್ ಆಗಿದ್ದು, ಕೇರಳ ಸರ್ಕಾರ ಪ್ರತಿಕ್ರಿಯೆ ನೀಡಿದೆ. ಬಾಲಕನ ಮನವಿಗೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪ್ರತಿಕ್ರಿಯಿಸಿದ್ದು, ಅಂಗನವಾಡಿ ಮಕ್ಕಳಿಗೆ ನೀಡಲಾಗುತ್ತಿರುವ

ಮೃತರ ಸಂಖ್ಯೆ ಮುಚ್ಚಿಡಲು ಶವ ನದಿಗೆಸೆದು ತ್ರಿವೇಣಿ ಸಂಗಮ ಮಲಿನ: ಸಂಸದೆ ಜಯಾ ಬಚ್ಚನ್‌

ಕುಂಭಮೇಳದಲ್ಲಿ  ಸಂಭವಿಸಿರುವ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ ಮುಚ್ಚಿಡಲು ಸರ್ಕಾರ, ಶವಗಳನ್ನು ನದಿಗೆ ಎಸೆದಿದೆ. ಇದರಿಂದ ತ್ರಿವೇಣಿ ಸಂಗಮ ಮಲಿನವಾಗಿದೆ ಎಂದು ಎಸ್ಪಿ ಸಂಸದೆ ಜಯಾ ಬಚ್ಚನ್‌ ಹೇಳಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ. ಕಾಲ್ತುಳಿತ ದುರಂತ ಸಂಸತ್ ಅಧಿವೇಶನದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿದ್ದು,

ಜಿಮೇಲ್ ಖಾತೆ ಎಐ ಮೂಲಕ ಹ್ಯಾಕ್ ಎಚ್ಚರಿಕೆ ನೀಡಿದ ಗೂಗಲ್‌

2.5 ಬಿಲಿಯನ್ (250 ಕೋಟಿ) ಬಳಕೆದಾರರ ಜಿಮೇಲ್ ಖಾತೆಗಳನ್ನು ಎಐ ಮೂಲಕ ಹ್ಯಾಕ್ ಮಾಡಬಹುದಾಗಿದೆ ಎಂದು ಗೂಗಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಫೋರ್ಬ್ಸ್ ವರದಿಯ ಪ್ರಕಾರ, ಸೈಬರ್ ವಂಚಕರು ಗೂಗಲ್ ಬೆಂಬಲದ ಹೆಸರಿನಲ್ಲಿ ಕರೆ ಮಾಡುವ ಮೂಲಕ ವಂಚನೆ ಮಾಡುತ್ತಿದ್ದಾರೆ. ಯಾವುದೇ

ಕುಂಭಮೇಳದಲ್ಲಿ ಸಾವಿರಾರು ಭಕ್ತರ ಸಾವು: ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಆರೋಪ

ಕುಂಭಮೇಳದಲ್ಲಿ ಸಾವಿರಾರು ಜನರು ಮೃತಪಟ್ಟಿದ್ದಾರೆ ಎಂದು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ರಾಜ್ಯಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಸೋಮವಾರ ಆರಂಭವಾದ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಕುಂಭಮೇಳದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಕುಂಭಮೇಳದಲ್ಲಿ ಸಾವಿರಾರು ಜನರು ಮೃತಪಟ್ಟಿದ್ದು, ಅವರಿಗೆ

ಎಥೆನಾಲ್ ಪ್ರಭಾವ: ಸಕ್ಕರೆ ಉತ್ಪಾದನೆ ಶೇ. 12ರಷ್ಟು ಕುಸಿತ

ನವದೆಹಲಿ: 2025ನೇ ಸಾಲಿನಲ್ಲಿ ಭಾರತದ ಸಕ್ಕರೆ ಉತ್ಪಾದನೆಯು ಗಮನಾರ್ಹ ಕುಸಿತವಾಗುವ ನಿರೀಕ್ಷೆಯಿದೆ ಎಂದು ಸೆಂಟ್ರಮ್ ವರದಿ ಹೇಳಿದೆ. ಹಿಂದಿನ ವರ್ಷದಲ್ಲಿ ಉತ್ಪಾದನೆಯಾಗಿದ್ದ 31.8 ಎಂಎಂಟಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಇದು 27 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ಗಿಂತ ಕಡಿಮೆಯಾಗುವ ಮುನ್ಸೂಚನೆಗಳಿವೆ