ದೇಶ-ವಿದೇಶ
ದೇಶಾದ್ಯಂತ ಏಕರೂಪದ ಟೋಲ್ ಪಾಸ್ ಜಾರಿಗೆ ಕೇಂದ್ರ ಚಿಂತನೆ!
ದೇಶಾದ್ಯಂತ ಕಾರು ಮಾಲೀಕರಿಗೆ ಏಕರೂಪದ ಟೋಲ್ ಪಾಸ್ ವ್ಯವಸ್ಥೆ ಜಾರಿ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ವಾಹನ ಚಾಲಕರಿಗೆ ಸಿಹಿಸುದ್ದಿ ನೀಡಲು ಮುಂದಾಗಿದೆ. ನೂತನ ನಿಯಮದ ಪ್ರಕಾರ ವಾಹನ ಸವಾರರು ವಾರ್ಷಿಕ 3000 ರೂ. ಪಾವತಿಸಿದರೆ ಎಷ್ಟು ಬಾರಿ ಬೇಕಾದರೂ ಟೋಲ್ ಗಳಲ್ಲಿ ಸಂಚರಿಸಬಹುದು. 30 ಸಾವಿರ ರೂ. ಪಾವತಿಸಿದರೆ ೧೫ ವರ್ಷಗಳವರೆಗೆ ಅಂದರೆ ಕಾರಿನ ಜೀವಿತಾವಧಿ ವರೆಗೆ ದೇಶಾದ್ಯಂತ ಪ್ರಯಾಣಿಸಬಹುದಾಗಿದೆ. ಈ ವ್ಯವಸ್ಥೆ ಅನುಷ್ಠಾನಗೋಳಿಸುವ
ದೆಹಲಿ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆ: ಬಿಜೆಪಿ-ಆಪ್ ನಡುವೆ ಪೈಪೋಟಿ
ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಅಂತ್ಯಗೊಂಡಿದ್ದು, ಚುನಾವಣಾ ಸಮೀಕ್ಷೆ ಪ್ರಕಾರ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳ ನಡುವೆ ಸಮಬಲದ ಹೋರಾಟ ನಡೆಯಲಿದೆ. ಕೆಲವು ಸಮೀಕ್ಷೆಗಳು ಆಮ್ ಬಹುಮತ ಪಡೆಯಲಿದೆ ಎಂದು ಹೇಳಿದ್ದರೆ, ಇನ್ನು ಕೆಲವು ಸಮೀಕ್ಷೆಗಳು ಬಿಜೆಪಿ ಪರ ಬ್ಯಾಟ್
ದೆಹಲಿ ವಿಧಾನಸಭಾ ಚುನಾವಣೆ: ಶೇ.57.70 ಮತದಾನ
ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಮಧ್ಯಾಹ್ನದ ನಂತರ ಚುರುಕುಗೊಂಡಿದ್ದು, ಮಧ್ಯಾಹ್ನ 5 ಗಂಟೆ ವೇಳೆಗೆ 57.70ರಷ್ಟು ಮತದಾನ ದಾಖಲಾಗಿದೆ. ದೆಹಲಿಯಲ್ಲಿ ಮಧ್ಯಾಹ್ನ 11 ಗಂಟೆಯವರೆಗೂ ನಿಧಾನಗತಿಯಲ್ಲಿ ನಡೆದ ಮತದಾನ ಮಧ್ಯಾಹ್ನದ ನಂತರ ಚುರುಕುಗೊಂಡಿದ್ದು, ಸಂಜೆ ವೇಳೆಗೆ ಉತ್ತಮ ಮತದಾನ
ಗ್ರೀಸ್ ನಲ್ಲಿ 300 ಬಾರಿ ಕಂಪಿಸಿದ ಭೂಮಿ: ಮನೆ ತೊರೆದ ಸಾವಿರಾರು ಮಂದಿ
ಗ್ರೀಸ್ ದೇಶದ ಏಜಿಯನ್ ಸಮುದ್ರದ ದ್ವೀಪದಲ್ಲಿ ಸುಮಾರು 300ಕ್ಕೂ ಹೆಚ್ಚು ಬಾರಿ ಭೂಕಂಪನ ಸಂಭವಿಸಿದ್ದರಿಂದ ಸಾವಿರಾರು ಜನರು ಮನೆ ತೊರೆದು ಸುರಕ್ಷಿತ ಪ್ರದೇಶಕ್ಕೆ ತೆರಳಿದ ಘಟನೆ ಮಂಗಳವಾರ ನಡೆದಿದೆ. ಮಂಗಳವಾರ ಬೆಳಿಗ್ಗೆಯಿಂದ ದ್ವೀಪ ಸಮೀಪದ ಸಮುದ್ರದಲ್ಲಿ ಸುಮಾರು 300 ಬಾರಿ ಭೂಮಿ
ಸಿಎಂ ಫಡ್ನವೀಸ್ ಕರೆದ ಸಭೆಗೆ ಶಿಂಧೆ ಗೈರು: ‘ಮಹಾ’ ಬಿರುಕು
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕರೆದಿದ್ದ ಸಭೆಗೆ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತೆ ಗೈರು ಹಾಜರಾಗಿದ್ದಾರೆ. ಉನ್ನತ ಹುದ್ದೆಯನ್ನು ನಿರಾಕರಿಸಿದ ಬಗ್ಗೆ ಶಿವಸೇನೆ ಮುಖ್ಯಸ್ಥ ಶಿಂಧೆ ಇನ್ನೂ ಅಸಮಾಧಾನಗೊಂಡಿದ್ದಾರೆ ಮತ್ತು ಪೋಷಕ ಮಂತ್ರಿಗಳ ನೇಮಕದ ಬಗ್ಗೆಯೂ ಭಿನ್ನಾಭಿಪ್ರಾಯವಿದೆ ಎಂಬ ಊಹಾಪೋಹಗಳ
ಗುಜರಾತಿನಲ್ಲಿ ಏಕರೂಪ ನಾಗರಿಕ ಸಂಹಿತಿ ಜಾರಿಗೆ ತಯಾರಿ
ನವದೆಹಲಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಜಿದ್ದಿ ಬಿದ್ದಿರುವ ಬಿಜೆಪಿ ಆಡಳಿತದ ರಾಜ್ಯಗಳ ಸಾಲಿಗೆ ಈಗ ಗುಜರಾತ್ ಸೇರ್ಪಡೆ ಆಗಿದೆ. ಉತ್ತರಾಖಂಡದಲ್ಲಿ ಈ ಸಂಹಿತೆ ಜಾರಿಗೆ ಬಂದ ಬೆನ್ನಲ್ಲಿಯೇ ಗುಜರಾತ್ಸರಕಾರವೂ ಅಂತಹುದೇ ಹೆಜ್ಜೆ ತುಳಿಯಲು ಮುಂದಾಗಿದೆ. ಏಕರೂಪ ನಾಗರಿಕ ಸಂಹಿತೆಯ
ಅಮೃತ ಸ್ನಾನ, ಗಂಗಾಪೂಜೆ ನೆರವೇರಿಸಿದ ಪ್ರಧಾನಿ ಮೋದಿ
ಮಹಾಕುಂಭ ಮೇಳ ನಡೆಯುತ್ತಿರುವ ಪ್ರಯಾಗ್ ರಾಜ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಅಮೃತ ಸ್ನಾನ ಮಾಡಿ ಗಂಗಾಪೂಜೆ ನೆರವೇರಿಸಿದ್ದಾರೆ. ಗಂಗಾನದಿಯಲ್ಲಿ ರುದ್ರಾಕ್ಷಿ ಹಿಡಿದು ಜಪ ಮಾಡಿದ್ದಾರೆ. 54 ದಿನಗಳ ಅಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 2ನೇ ಪ್ರಯಾಗ್‌ರಾಜ್ ಭೇಟಿಯಾಗಿದೆ.
ಮುಟ್ಟಾದಾಗ ಸ್ನಾನ ಮಾಡುವಂತಿಲ್ಲವೆಂದು ಬೇಸತ್ತ ಮಹಿಳೆ ವಿಚ್ಛೇದನಕ್ಕೆ ಅರ್ಜಿ
ಮುಟ್ಟಾದಾಗ ಕೊಠಡಿಯಲ್ಲೇ ಇರಬೇಕು, ಅಪ್ಪಿತಪ್ಪಿಯೂ ಸ್ನಾನ ಮಾಡುವಂತಿಲ್ಲ, ಯಾರನ್ನು ಮುಟ್ಟಿಸಿಕೊಳ್ಳುವಂತಿಲ್ಲ ಎಂಬ ಕಟ್ಟುಪಾಡುಗಳಿಂದ ಬೇಸತ್ತ ಮಹಿಳೆಯೊಬ್ಬರು ತನ್ನ ಮದುವೆಯನ್ನೇ ಅಂತ್ಯಗೊಳಿಸಿರುವ ಘಟನೆ ಭೋಪಾಲ್ನಲ್ಲಿ ನಡೆದಿದೆ. ಮನೆಯ ಈ ನಿಯಮಗಳಿಂದ ಬೇಸತ್ತ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪತಿ ಕೂಡ ತಾಯಿ ಹೇಳಿರುವ
ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ
ಚೆನ್ನೈನ ಕಿಲಂಬಕ್ಕಂ ಟರ್ಮಿನಸ್ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯನ್ನು ಆಟೋದಲ್ಲಿ ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಅಸ್ಸಾಂ ಮೂಲದ ಯುವತಿ ಬಸ್ಸಿಗಾಗಿ ಕಾಯುತ್ತಿದ್ದಾಗ ಆಟೋದಲ್ಲಿ ಬಂದ ಮೂವರು ಆಕೆಯನ್ನು ಅಪಹರಿಸಿದ್ದರು. ಆಟೋ ಚಾಲಕ ಸೇರಿ ಮೂವರು ಚಾಕು ತೋರಿಸಿ
ನಾಳೆ ದೆಹಲಿ ವಿಧಾನಸಭಾ ಚುನಾವಣೆ: ಬಿಜೆಪಿ- ಆಪ್ ನೇರ ಹಣಾಹಣಿ
ತೀವ್ರ ಕುತೂಹಲ ಕೆರಳಿಸಿರುವ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆ ನಾಳೆ ನಡೆಯಲಿದ್ದು, ಆಡಳಿತಾರೂಢ ಆಮ್ ಆದ್ಮಿ ಹಾಗೂ ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡಲಿದೆ. ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸತತ




