ದೇಶ-ವಿದೇಶ
ಕಾಂಗೊದಲ್ಲಿ ನಿಗೂಢ ಕಾಯಿಲೆಗೆ 50 ಮಂದಿ ಬಲಿ, ಸೋಂಕು ತಗುಲಿದ 48 ಗಂಟೆಯಲ್ಲಿ ಸಾವು!
ಆಫ್ರಿಕಾ ಖಂಡದ ಕಾಂಗೊದಲ್ಲಿ ಕಾಣಿಸಿಕೊಂಡ ನಿಗೂಢ ಕಾಯಿಲೆಗೆ 50 ಮಂದಿ ಅಸುನೀಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸೋಂಕು ಕಾಣಿಸಿಕೊಂಡ 48 ಗಂಟೆಗಳಲ್ಲಿ ಜನರು ಸಾಯುತ್ತಿರುವುದು ಚಿಂತೆಗೀಡು ಮಾಡಿದ್ದು, ಘಟನಾ ಸ್ಥಳಕ್ಕೆ ವಿಶ್ವ ಆರೋಗ್ಯ ಸಂಸ್ಥೆ ತಜ್ಞರು ಹಾಗೂ ಸ್ಥಳೀಯ ವೈದ್ಯರು ಬೀಡು ಬಿಟ್ಟಿದ್ದು ರೋಗ ಲಕ್ಷಣಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ. ಜನವರಿ 21 ರಂದು ಮೊದಲ ಬಾರಿ ಈ ಸೋಂಕು ಕಾಣಿಸಿಕೊಂಡಿದ್ದು, ಇದುವರೆಗೆ 419 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು,
ಶಿವರಾತ್ರಿ ಪುಣ್ಯಸ್ನಾನದೊಂದಿಗೆ ಮಹಾಕುಂಭ ಮೇಳ ಇಂದು ಸಂಪನ್ನ!
ಲಕ್ನೋ:ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವು ಬುಧವಾರ ಮಹಾಶಿವರಾತ್ರಿ ದಿನದಂದೇ ಸಂಪನ್ನಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕೊನೆಯ ಅಮೃತಸ್ನಾನ ಮಾಡಲು ಭಕ್ತರು ಕೋಟ್ಯಂತರ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಮಹಾಕುಂಭ ಮೇಳ ಇಂದು ಕೊನೆಗೊಳ್ಳುವುದರಿಂದ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ವಿಶೇಷ ಮಾರ್ಗಸೂಚಿಗಳನ್ನು ಕೂಡ ಜಾರಿ ಮಾಡಲಾಗಿದೆ.ಇಲ್ಲಿಯವರೆಗೆ 63
ನಮ್ಮ ಪ್ರಯಾಣಿಕರ ಸುರಕ್ಷತೆಗೆ ನಮ್ಮ ಬಸ್‌ಗಳಲ್ಲಿ ಭದ್ರತಾ ಸಿಬ್ಬಂದಿ: ಮಹಾರಾಷ್ಟ್ರ ಸಚಿವ ಪ್ರತಾಪ್ ಸರ್ನಾಯಕ್
ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕರ್ನಾಟಕಕ್ಕೆ ಸಂಚರಿಸುವ ರಾಜ್ಯ ಸಾರಿಗೆ ನಿಗಮದ ಬಸ್ಸುಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ತಿಳಿಸಿದ್ದಾರೆ. ರಾಜ್ಯ ಸಾರಿಗೆ ಬಸ್ಸುಗಳ ಸಿಬ್ಬಂದಿ ಮೇಲೆ ಕರ್ನಾಟಕ ಗಡಿಯಲ್ಲಿ ನಡೆದ
ಬೆಂಗಳೂರಿನಲ್ಲಿ ಮಾರ್ಚ್ 1ರಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
ಮಾರ್ಚ್ 1ರಿಂದ 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(BIFFes)ಆರಂಭವಾಗಲಿದ್ದು, 60 ದೇಶಗಳಿಂದ 200ಕ್ಕೂ ಹೆಚ್ಚು ಚಲನಚಿತ್ರ ಪ್ರದರ್ಶನಗೊಳ್ಳಲಿವೆ. ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಥೀಮ್‌ನಡಿಯಲ್ಲಿ ಚಲನಚಿತ್ರೋತ್ಸವ ನಡೆಯಲಿದೆ ಎಂದು ಚಿತ್ರೋತ್ಸವ ಸಮಿತಿ ಅಧ್ಯಕ್ಷೆ ಬಿ.ಬಿ.ಕಾವೇರಿ ಹೇಳಿದ್ದಾರೆ. ಮಾರ್ಚ್ 1 ರ ಸಂಜೆ
ಡಿನೋಟಿಫಿಕೇಷನ್ ಪ್ರಕರಣ: ಸಚಿವ ಹೆಚ್‌ಡಿಕೆ ಅರ್ಜಿ ವಜಾಗೊಳಿಸಿದ ಸುಪ್ರೀಂ
ಹಲಗೆವಡೇರಹಳ್ಳಿಯಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಜಮೀನು ಡಿನೋಟಿಷಿಕೇಷನ್ ಸಂಬಂಧ ಕುಮಾರಸ್ವಾಮಿ ವಿರುದ್ಧದ ಪ್ರಕರಣದಲ್ಲಿ ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಹೈಕೋರ್ಟ್ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಕುಮಾರಸ್ವಾಮಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ
ಮದ್ಯ ನೀತಿಯಿಂದ ಸರ್ಕಾರಕ್ಕೆ 2000 ಕೋಟಿ ನಷ್ಟ: ಸಿಎಜಿ ವರದಿ ಪ್ರತಿಭಟಿಸಿದ ಆಪ್ 15 ಶಾಸಕರ ಅಮಾನತು!
ಆಮ್ ಆದ್ಮಿ ಪಕ್ಷದ ಮದ್ಯ ನೀತಿಯಿಂದ ರಾಜ್ಯ ಸರ್ಕಾರಕ್ಕೆ 2002 ಕೋಟಿ ರೂ. ನಷ್ಟವುಂಟಾಗಿದೆ ಎಂದು ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಕರ ವರದಿಯನ್ನು ದೆಹಲಿ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲಾಯಿತು. ಮಂಗಳವಾರ ಆರಂಭಗೊಂಡ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಸಿಎಜಿ ವರದಿಯನ್ನು
ವಿವಾದಿತ ಅಮೆರಿಕ ಅಭಿವೃದ್ಧಿ ಸಂಸ್ಥೆಯಿಂದ 2000 ಉದ್ಯೋಗಿಗಳ ವಜಾ
ನ್ಯೂಯಾರ್ಕ್: ಇತರ ದೇಶಗಳಿಗೆ ಅಮೆರಿಕದ ನೆರವು ನಿಲ್ಲಿಸಿರುವ ಅಧ್ಯಕ್ಷ ಟ್ರಂಪ್, ಇದೀಗ, ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯ (ಯುಎಸ್ ಏಡ್) ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಯುಎಸ್‌ಏಡ್ ವೆಬ್ಸೈಟಲ್ಲಿ 2 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ಪ್ರಕಟಿಸಲಾಗಿದೆ. ಸಿಬ್ಬಂದಿಗೆ ಬಲವಂತದ ರಜೆ: ಇದರ
ದಿಲ್ಲಿ ಅಸೆಂಬ್ಲಿ: ಸದನದಿಂದ ಎಎಪಿ ಶಾಸಕರ ಅಮಾನತು
ದೆಹಲಿ ವಿಧಾನಸಭೆ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಭಾಷಣದ ಸಮಯದಲ್ಲಿ ಘೋಷಣೆ ಕೂಗಿದ್ದಕ್ಕೆ ವಿರೋಧ ಪಕ್ಷದ ನಾಯಕರಾದ ಅತಿಶಿ, ಮಾಜಿ ಸಚಿವ ಗೋಪಾಲ್ ರೈ ಮತ್ತು ಇತರ ಒಂಬತ್ತು ಮಂದಿ ಎಎಪಿ ಶಾಸಕರನ್ನು ವಿಧಾನಸಭಾ
ಬೆಳಗಾವಿ ಕಂಡಕ್ಟರ್ ವಿರುದ್ಧ ಪೋಕ್ಸೋ ಕೇಸ್ ವಾಪಸ್
ಬೆಳಗಾವಿಯಲ್ಲಿ ಕೆಎಸ್ಸಾರ್ಟಿಸಿ ಕಂಡಕ್ಟರ್ ಕನ್ನಡದಲ್ಲಿ ಹೇಳಿ ಎಂದ ಕಾರಣ ಮುಂದಿಟ್ಟುಕೊಂಡು ಹಲ್ಲೆ ನಡೆಸಿ ಬಳಿಕ ಪೋಕ್ಸೋ ಕೇಸ್ ದಾಖಲಿಸಿದ್ದ ದೂರುದಾರೆ ಕೇಸ್ ವಾಪಸ್ ಪಡೆದಿದ್ದಾರೆ. ಪೋಕ್ಸೋ ಕೇಸ್ ದಾಖಲು ಮಾಡಿದ್ದ ಸಂತ್ರಸ್ತೆಯ ತಾಯಿ ಈ ಕುರಿತು ವೀಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಗೆಳತಿ ಸೇರಿ ಕುಟುಂಬದ ಐವರನ್ನು ಕೊಲೆಗೈದು ವಿಷ ಸೇವಿಸಿದ ಯುವಕ
ಕೇರಳದ ತಿರುವನಂತಪುರದಲ್ಲಿ ಯುವಕನೊಬ್ಬ ತನ್ನ ಕುಟುಂಬ ಸದಸ್ಯರು ಹಾಗೂ ಪ್ರೇಯಸಿ ಸೇರಿದಂತೆ ಐವರನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 23 ವರ್ಷದ ಆರೋಪಿ ಪೆರುಮಾಳದ ನಿವಾಸಿ ಅಫಾನ್ ಪೊಲೀಸರಿಗೆ ಶರಣಾಗಿ ಐವರು ಕುಟುಂಬ ಸದಸ್ಯರು ಮತ್ತು ಗೆಳತಿ ಸೇರಿದಂತೆ ಐದು ಜನರನ್ನು




