ದೇಶ-ವಿದೇಶ
ರುದ್ರಪ್ರಯಾಗದಲ್ಲಿ ಭೀಕರ ಮಳೆ: ಹಲವರು ನಾಪತ್ತೆ, ಅವಶೇಷಗಳಡಿ ಸಿಲುಕಿರುವ ಭೀತಿ
ಉತ್ತರಾಖಂಡದ ರುದ್ರಪ್ರಯಾಗ ಮತ್ತು ಚಮೋಲಿ ಜಿಲ್ಲೆಗಳ ಹಲವೆಡೆ ಮೇಘಸ್ಫೋಟ ಸಂಭವಿಸಿ, ಹಲವಾರು ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಲ್ಲದೆ ಎರಡರಿಂದ ಮೂರು ಕುಟುಂಬ ನಾಪತ್ತೆಯಾಗಿವೆ. ಅವಶೇಷಗಳಡಿ ಸಿಲುಕಿ ದಂಪತಿ ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ, ರಸ್ತೆಗಳು ಬಂದ್ ಆಗಿವೆ. ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದೆ. 200 ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಎರಡರಿಂದ ಮೂರು ಕುಟುಂಬಳ ನಾಪತ್ತೆಯಾಗಿದ್ದು ಹುಡುಕಾಟ ನಡೆಯುತ್ತಿದೆ. ರಕ್ಷಣಾ ಕಾರ್ಯಾಚರಣೆಗೆ ಸೇನೆಯು 12 ಹೆಲಿಕಾಪ್ಟರ್‌ಗಳನ್ನು ಬಳಸುತ್ತಿದೆ, ಸಂತ್ರಸ್ತರಿಗೆ ಆಹಾರ ಮತ್ತು ವೈದ್ಯಕೀಯ
ಕಳ್ಳರೆಂದು ಭಾವಿಸಿ ಗೂಗಲ್ ಮ್ಯಾಪ್ ತಂಡದ ಸದಸ್ಯರಿಗೆ ಗ್ರಾಮಸ್ಥರಿಂದ ಥಳಿತ
ಉತ್ತರ ಪ್ರದೇಶದ ಘಟಂಪುರದಲ್ಲಿ ಗೂಗಲ್ ಮ್ಯಾಪ್ ತಂಡದ ಸದಸ್ಯರನ್ನು ಕಳ್ಳರೆಂದು ಭಾವಿಸಿ ಹಳ್ಳಿಯವರು ಥಳಿಸಿದ್ದಾರೆ. ಬಿರ್ಹಾರ್ ಔಟ್‌ಪೋಸ್ಟ್ ಪ್ರದೇಶದ ಮಹೋಲಿಯಾ ಗ್ರಾಮದ ಗ್ರಾಮಸ್ಥರು ಗೂಗಲ್ ಮ್ಯಾಪ್ ಕ್ಯಾಮೆರಾ ಅಳವಡಿಸಲಾದ ಕಾರನ್ನು ಕಳ್ಳರ ಕಾರು ಎಂದು ಭಾವಿಸಿದ್ದರಿಂದ ಈ ಎಡವಟ್ಟು ನಡೆದಿದೆ. ಗ್ರಾಮಸ್ಥರು
100 ರೂಪಾಯಿಗೆ ಗರ್ಭಕಂಠದ ಕ್ಯಾನ್ಸರ್ ಪತ್ತೆ ಹಚ್ಚುವ ಕಿಟ್
ಮಹಿಳೆಯರಲ್ಲಿ ಅತ್ಯಂತ ಮಾರಕ ಕಾಯಿಲೆಯಾಗಿ ಗರ್ಭಕಂಠದ ಕ್ಯಾನ್ಸರ್ ವ್ಯಾಪಿಸುತ್ತಿದ್ದು, ಇದಕ್ಕೆ ಸಂಬಂಧಿಸಿದ ಪರೀಕ್ಷೆಗಳು ದುಬಾರಿಯಾಗಿದ್ದು, ಹೆಚ್ಚಿನ ಸಮಯ ಕೂಡ ತೆಗೆದುಕೊಳ್ಳುತ್ತದೆ. ಆದರೆ ಈಗ ಏಮ್ಸ್ ವೈದ್ಯರು ಕೇವಲ 100 ರೂ.ಗೆ ಲಭ್ಯವಾಗುವ ಎರಡು ಗಂಟೆಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಅನ್ನು ಪತ್ತೆಹಚ್ಚುವ ಡಯಾಗ್ನಿಸ್ಟಿಕ್
ಭೀಕರ ಮಳೆ, ಭೂಕುಸಿತ: ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಮೃತರ ಸಂಖ್ಯೆ 35ಕ್ಕೆ ಏರಿಕೆ
ಜಮ್ಮುವಿನಲ್ಲಿ ಧಾರಾಕಾರ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಭೂ ಕುಸಿತವಾಗಿದ್ದು, ಕತ್ರಾ ಜಿಲ್ಲೆಯಲ್ಲಿರುವ ವೈಷ್ಣೋದೇವಿ ಯಾತ್ರಾ ರಸ್ತೆ ಮಾರ್ಗದಲ್ಲಿ ಭೂಕುಸಿತಕ್ಕೆ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಕತ್ರಾದ ಅರ್ಧಕುವರಿ ಸಮೀಪ ಅವಶೇಷಗಳಿಂದ ಮೂವತ್ತೈದು ಮೃತದೇಹಗಳನ್ನು ಈವರೆಗೆ ಹೊರತೆಗೆಯಲಾಗಿದೆ ಎಂದು ವೈಷ್ಣೋದೇವಿ ದೇವಾಲಯ ಮಂಡಳಿಯ
ಸಾಲದ ಸುಳಿ: ಮಗುವಿಗೆ ವಿಷವುಣಿಸಿ ಆತ್ಮಹತ್ಯೆ ಮಾಡಿಕೊಂಡ ದಂಪತಿ
ನಾಲ್ಕು ವರ್ಷದ ಮಗನಿಗೆ ವಿಷವುಣಿಸಿದ ಬಳಿಕ ಉದ್ಯಮಿ ಹಾಗೂ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಹಜಹಾನ್ಪುರದಲ್ಲಿ ನಡೆದಿದೆ. ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ದುರ್ಗಾ ಎನ್‌ಕ್ಲೇವ್ ಕಾಲೊನಿಯಲ್ಲಿ ಮಗು ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದು, ಪೋಷಕರಾದ ಸಚಿನ್ ಗ್ರೋವರ್ ಮತ್ತು ಪತ್ನಿ
ಹೈದರಾಬಾದ್ ನಲ್ಲಿ ಅಗ್ನಿ ದುರಂತಕ್ಕೆ 17 ಮಂದಿ ಬಲಿ
ಹೈದರಾಬಾದ್‌ನ ಚಾರ್ಮಿನಾರ್ ಬಳಿಯ ಕಟ್ಟಡವೊಂದರಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಎಂಟು ಮಕ್ಕಳು ಮತ್ತು ಐದು ಮಹಿಳೆಯರು ಸೇರಿದಂತೆ ಕನಿಷ್ಠ 17 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ದುರಂತಕ್ಕೆ ಕಾರಣ ಇನ್ನೂ ದೃಢಪಟ್ಟಿಲ್ಲ, ಶಾರ್ಟ್ ಸರ್ಕ್ಯೂಟ್ ದುರಂತಕ್ಕೆ ಕಾರಣವಾಗಿರ
ಅಂದು ರಸ್ತೆಯಲ್ಲಿದ್ದ ಅನಾಥ ಹೆಣ್ಣು ಮಗುವೇ ಇಂದು ಸಾಕು ತಾಯಿಯ ಕೊಲೆಗಾರ್ತಿ
ರಸ್ತೆಯಲ್ಲಿ ದಿಕ್ಕಿಲ್ಲದೆ ಅನಾಥವಾಗಿ ಬಿದ್ದಿದ್ದ ಮೂರು ವರ್ಷದ ಹೆಣ್ಣುಮಗುವನ್ನು ತಂಂದು ಸಾಕಿ ಬೆಳೆಸಿದ ಮಹಿಳೆಯನ್ನು ಅದೇ ಬಾಲಕಿ ಕೊಲೆ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. 54 ವರ್ಷದ ರಾಜಲಕ್ಷ್ಮೀ ಕೌರ್ ಕೊಲೆಯಾದ ಮಹಿಳೆ. ರಾಜಲಕ್ಷ್ಮೀ 10 ವರ್ಷ ಸಾಕಿ ಬೆಳೆಸಿದ ಬಾಲಕಿಗೆ
ಕಕ್ಷೆ ಸೇರಲು ವಿಫಲಗೊಂಡ ಇಸ್ರೋದ EOS-09 ಉಪಗ್ರಹ
ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಇಂದು ಬೆಳಗ್ಗೆ ಉಡಾವಣೆಯಾಗಿದ್ದ ಇಸ್ರೋದ EOS-09 ಉಪಗ್ರಹ ನಿರ್ದಿಷ್ಟ ಕಕ್ಷೆ ಸೇರುವಲ್ಲಿ ವಿಫಲವಾಗಿದೆ. ಬೆಳಗ್ಗೆ 5:59ಕ್ಕೆ EOS-09 ರೇಡಾರ್ ಇಮೇಜಿಂಗ್ ಉಪಗ್ರಹ ನಭಕ್ಕೆ ಚಿಮ್ಮಿತ್ತು. 1,696 ಕಿಲೋಗ್ರಾಂ ತೂಕದ EOS-09 ರೇಡಾರ್ ಇಮೇಜಿಂಗ್ ಉಪಗ್ರಹವು
ಉಗ್ರರ ವಿರುದ್ಧ ಜಾಗತಿಕ ಪ್ರಚಾರಕ್ಕೆ ಶಶಿ ತರೂರ್ ನೇತೃತ್ವದ 7 ಸಂಸದ ನಿಯೋಗ ರಚನೆ: ಕಾಂಗ್ರೆಸ್ ಆಕ್ಷೇಪ
ನವದೆಹಲಿ: ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಿ ಉಗ್ರರ ವಿರುದ್ಧ ಹೋರಾಟ ಬಣ್ಣಿಸಲು ಕೇಂದ್ರ ಸರ್ಕಾರ 7 ಸಂಸದರ ನಿಯೋಗ ರಚಿಸಿದ್ದು, ಕಾಂಗ್ರೆಸ್ ನ ಸಂಸದ ಶಶಿ ತರೂರ್ ಗೆ ಪ್ರಮುಖ ಜವಾಬ್ದಾರಿ ವಹಿಸಿ ಅಚ್ಚರಿ ಮೂಡಿಸಿದೆ.
ಭಾರತದ ಹಲವೆಡೆ ದಾಳಿಗೆ ಸಂಚು ರೂಪಿಸಿದ್ದ ಇಬ್ಬರು ಐಸಿಸ್ ಉಗ್ರರ ಬಂಧನ
ನವದೆಹಲಿ: ಮಹಾರಾಷ್ಟ್ರದ ಪುಣೆಯ ಐಸಿಸ್ ಮಾಡ್ಯೂಲ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಇಬ್ಬರು ಭಯೋತ್ಪಾದಕರನ್ನು ಇಂಡೋನೇಷ್ಯಾದಲ್ಲಿ ಬಂಧಿಸಿದೆ. ಅಬ್ದುಲ್ಲಾ ಫಯಾಜ್ ಶೇಖ್ ಮತ್ತು ತಲ್ಹಾ ಲಿಯಾಕತ್ ಖಾನ್ ಇಬ್ಬರನ್ನೂ ಇಂಡೋನೇಷ್ಯಾದಲ್ಲಿ ಬಂಧಿಸಲಾಗಿದೆ. ಇಬ್ಬರನ್ನು ಭಾರತಕ್ಕೆ ಕಳುಹಿಸಲಾಗಿದ್ದು, ಮುಂಬೈನಲ್ಲಿ ಬಂಧಿಸಲಾಗಿದೆ. ಅವರನ್ನು ಶೀಘ್ರದಲ್ಲೇ




