ದೇಶ-ವಿದೇಶ
ಗೆಳತಿಯ ಕೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ
ಯುವಕನೊಬ್ಬ ಸಣ್ಣ ಜಗಳಕ್ಕೆ ಗೆಳತಿಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಣೆಯಲ್ಲಿ ನಡೆದಿದೆ. 20 ವರ್ಷದ ದಿವ್ಯಾ ನಿಗೋಟ್ ಕೊಲೆಯಾದ ಯುವತಿ. ಬೀಡ್ ಜಿಲ್ಲೆಯ 21 ವರ್ಷದ ಗಣೇಶ್ ಕೇಲ್ ಕೊಲೆಗೈದ ಬಳಿಕ ಆತ್ಮಹತ್ಯೆ ಮಾಡಿಕೊಂಡಾತ. ಇಬ್ಬರೂ ಪುಣೆಯ ರೂಬಿ ಹಾಲ್ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಯುವಕ ಟೆಕ್ನಿಷಿಯನ್ ಆಗಿದ್ದ, ಯುವತಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ದಿವ್ಯಾ ಕುಟುಂಬವು ನಾಪತ್ತೆ ದೂರು ದಾಖಲಿ ಸಿತ್ತು. ಪೊಲೀಸರು
ದೇಶದ ಜಿಡಿಪಿ 8.2%ಕ್ಕೆ ಏರಿಕೆ ಎಂದ ಕೇಂದ್ರ: ಸಿ ಗ್ರೇಡ್ ನೀಡಿದ ಐಎಂಎಫ್
ಕೇಂದ್ರ ಸರ್ಕಾರವು 2025-26ರ ಆರ್ಥಿಕ ವರ್ಷದ 2ನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಭಾರತದ ಜಿಡಿಪಿ 8.2%ಗೆ ಬೆಳವಣಿಗೆಯಾಗಿದೆ ಎಂದು ಹೇಳಿಕೊಂಡಿದೆ. ಆದರೆ ಈ ಜಿಡಿಪಿ ದತ್ತಾಂಶಗಳಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಿ ಗ್ರೇಡ್ ಕೊಟ್ಟಿದೆ. ಕೇಂದ್ರ ಸರ್ಕಾರವು ಎಲ್ಲವೂ ಸುಭದ್ರವಾಗಿವೆ. ಆರ್ಥಿಕತೆ
ಸಂಗಾತಿಯ ಕೊಲೆಗೈದಾತ ಪೊಲೀಸ್ ಕಸ್ಟಡಿಯಲ್ಲಿ ಹೃದಯಾಘಾತದಿಂದ ಸಾವು
ಲಿವ್-ಇನ್ ಸಂಗಾತಿಯ ಕೊಂದಾತ ಪೊಲೀಸ್ ಕಸ್ಟಡಿಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೌರಾಷ್ಟ್ರದಲ್ಲಿ ನಡೆದಿದೆ. ಮಧ್ಯಪ್ರದೇಶ ಮೂಲದ ನರೇಂದ್ರ ಸಿಂಗ್ ಧ್ರುವೇಲ್ ಸಂಗಾತಿಯ ಕೊಂದು ಪೊಲೀಸ್ ವಶದಲ್ಲಿರುವಾಗ ಮೃತಪಟ್ಟಿದ್ದಾನೆ. ಸೌರಾಷ್ಟ್ರದ ಸೆರಾಮಿಕ್ ಕಾರ್ಖಾನೆಯ ಕಾರ್ಮಿಕ ವಸತಿಗೃಹದಲ್ಲಿ ಈ ಜೋಡಿ ಮೂರು ತಿಂಗಳಿನಿಂದ ವಾಸವಿತ್ತು.
ಶಾಲೆಯಲ್ಲಿ ನಾಲ್ಕು ವರ್ಷದ ಮಗುವನ್ನು ಹೊಡೆದು ತುಳಿದು ಕೊಂದ ಸಹಾಯಕಿ
ಹೈದರಾಬಾದ್‌ನ ಜೀಡಿಮೆಟ್ಲಾದ ಶಾಪುರ್ ನಗರದಲ್ಲಿ ಮಹಿಳಾ ಸಹಾಯಕ ಸಿಬ್ಬಂದಿ ಶಾಲೆಯಲ್ಲಿ 4 ವರ್ಷದ ನರ್ಸರಿ ಮಗುವನ್ನು ನೆಲಕ್ಕೆ ತಳ್ಳಿ ಹೊಡೆದು ತುಳಿದು ಕೊಲೆ ಮಾಡಿದ್ದಾಳೆ. ಈ ಘಟನೆಯು ಎಲ್ಲ ಪೋಷಕರನ್ನು ಬೆಚ್ಚಿ ಬೀಳಿಸಿದ್ದು, ಶಾಲೆಯೊಳಗೆ ಮಕ್ಕಳ ಸುರಕ್ಷತೆ ಬಗ್ಗೆ ಆತಂಕವೊಡ್ಡಿದೆ. ಮಗುವನ್ನು
ಜಾತಿ ಪ್ರೀತಿಗೆ ಮಗಳ ಪ್ರಿಯಕರನ ಕೊಲೆಗೈದ ಪೋಷಕರು: ಶವವನ್ನೇ ಮದುವೆಯಾದ ಯುವತಿ
ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಬೇರೆ ಜಾತಿ ಎಂಬ ಕಾರಣಕ್ಕೆ ಯುವತಿ ಪ್ರೀತಿಸುತ್ತಿದ್ದ ಹುಡುಗನನ್ನು ಆಕೆಯ ಮನೆಯವರು ಹೊಡೆದು ಕೊಂದರೆ ಸಾವಿನಿಂದ ಆಘಾತಗೊಂಡ ಯುವತಿ ಆತನ ಶವವನ್ನೇ ಮದುವೆಯಾಗಿ ಆತನ ಮನೆಯಲ್ಲೇ ಇರುವ ನಿರ್ಧಾರ ಮಾಡಿದ್ದಾಳೆ. 20 ವರ್ಷದ ಸಕ್ಷಮ್ ಟಾಟೆ ಕೊಲೆಯಾದ ಯುವಕ.
ರಷ್ಯಾದ ನೌಕಾಪಡೆಯ `ವಿರಾಟ್’ ಮೇಲೆ ದಾಳಿ!
ಇಸ್ತಾನ್‌ಬುಲ್: ರಷ್ಯಾದ ನೌಕಾಪಡೆಯ ನೆರಳಿನಂತೆ ಕಾರ್ಯ ನಿರ್ವಹಿಸುವ ಹಡಗಿನ ಮೇಲೆ ಅಪರಿಚಿತರು ಮಾನವ ರಹಿತ ದೋಣಿ ಬಳಸಿ ಸ್ಫೋಟಗೊಳಿಸಿದ ಘಟನೆ ಟರ್ಕಿಯ ಕಪ್ಪು ಸಮುದ್ರದ ಕರಾವಳಿಯಲ್ಲಿ ನಡೆದಿದೆ. ಶುಕ್ರವಾರ ಮುಂಜಾನೆ ತಡರಾತ್ರಿ ಟರ್ಕಿಯ ಕಪ್ಪು ಸಮುದ್ರ ಕರಾವಳಿಯಲ್ಲಿ ರಷ್ಯಾದ ಹಡಗು ವಿರಾಟ್
ಚಂಡಮಾರುತ ಹೊಡೆತಕ್ಕೆ ಶ್ರೀಲಂಕಾದಲ್ಲಿ 123 ಬಲಿ, 130 ಮಂದಿ ನಾಪತ್ತೆ
ದಿಟ್ವಾ ಚಂಡಮಾರುತದ ಪರಿಣಾಮ ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ ಶ್ರೀಲಂಕಾದಲ್ಲಿ ಮೃತಪಟ್ಟವರ ಸಂಖ್ಯೆ 123ಕ್ಕೆ ಏರಿಕೆಯಾಗಿದ್ದು, 130 ಮಂದಿ ಕಾಣೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ಶನಿವಾರ ತಿಳಿಸಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಲ್ಲಿ ಮನೆಗಳು ನಾಶವಾದ ನಂತರ
ಟ್ರಂಪ್ ತೆರಿಗೆ ಬರೆ ನಡುವೆ ಭಾರತದ ಜಿಡಿಪಿ ದಾಖಲೆಯ ಶೇ. 8.2ಕ್ಕೆ ಜಿಗಿತ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಹೇರಿಕೆ ಸೇರಿದಂತೆ ಹಲವು ಸವಾಲುಗಳ ನಡುವೆ ಭಾರತದ ಆರ್ಥಿಕ ಅಭಿವೃದ್ಧಿ ದರ ವರ್ಷದ ಎರಡನೇ ತ್ರೈಮಾಸಿಕದಲ್ಲಿ ದಾಖಲೆಯ ಶೇ.8.2 ಏರಿಕೆ ದಾಖಲಿಸಿದೆ. ಕೇಂದ್ರ ಸರ್ಕಾರ ಶುಕ್ರವಾರ ಅಧಿಕೃತವಾಗಿ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಪ್ರಸಕ್ತ
77 ಅಡಿ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ!
ಗೋವಾದ ಕೆನಕೋನಾದಲ್ಲಿ ನೂತನವಾಗಿ ನಿರ್ಮಿಸಿದ 77 ಅಡಿ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದಾರೆ. ಕೆನಕೋನಾದಲ್ಲಿನ ಶುಕ್ರವಾರ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಲಿ ಜೀವೋತ್ತಮ ಮಠದಲ್ಲಿ ನಿರ್ಮಿಸಲಾದ ಶ್ರೀರಾಮನ 77 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿ ಕಾರಿನ ಮೇಲೆ ಉರುಳಿ ಒಂದೇ ಕುಟುಂಬದ 7 ಜನ ಸಾವು
ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿ ಕಾರಿನ ಮೇಲೆ ಉರುಳಿ ಒಂದೇ ಕುಟುಂಬದ ಏಳು ಜನ ಮೃತಪಟ್ಟಿದ್ದಾರೆ. ಅತಿ ವೇಗವಾಗಿ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿದೆ. ಲಾರಿಯಲ್ಲಿದ್ದ ಜಲ್ಲಿಕಲ್ಲು ಕಾರಿನ ಮೇಲೆ




