ದೇಶ-ವಿದೇಶ
ಉದ್ಯೋಗ ವಂಚನೆ: 266 ಭಾರತೀಯರು ಸ್ವದೇಶಕ್ಕೆ ವಾಪಸ್
ನವದೆಹಲಿ: ಉದ್ಯೋಗ ಕೊಡಿಸುವ ನೆಪದಲ್ಲಿ ಕರೆದೊಯ್ದು ಆಗ್ನೇಯ ಏಷ್ಯಾ ದೇಶಗಳಲ್ಲಿ ಸೈಬರ್ಕ್ರೈಂ ಕೇಂದ್ರದಲ್ಲಿ ಕೆಲಸಕ್ಕಾಗಿ ಇರಿಸಿಕೊಂಡಿದ್ದ 266ಕ್ಕೂ ಹೆಚ್ಚು ಭಾರತೀಯರನ್ನು ಬಿಡುಗಡೆಗೊಳಿಸಿ ಭಾರತಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಸಚಿವಾಲಯದ ವಕ್ತಾರ ರಣ್ಧೀರ್ ಜೈಸ್ವಾಲ್, “ಐಎಎಫ್ ವಿಮಾನದಲ್ಲಿ ೨೬೬ ಭಾರತೀಯರನ್ನು ಭಾರತ ಸರ್ಕಾರ ಸುರಕ್ಷಿತವಾಗಿ ಕರೆತಂದಿದೆ. ಇವರನ್ನೆಲ್ಲಾ ಆಗ್ನೇಯ ಏಷ್ಯಾ ದೇಶಗಳಲ್ಲಿನ ಸೈಬರ್ ಕ್ರೈಂ ಕೇಂದ್ರಗಳಿಂದ ಬಿಡುಗಡೆ ಮಾಡಲಾಗಿದೆ. ಸೋಮವಾರ
ಒತ್ತೆಯಾಳುಗಳನ್ನೇ ಗುರಾಣಿಯಂತೆ ಬಳಕೆ: ಪಾಕಿಸ್ತಾನ ರೈಲು ಹೈಜಾಕ್ ನ 30 ಗಂಟೆಯ ರೋಚಕ ಕಾರ್ಯಾಚರಣೆ
ಪಾಕಿಸ್ತಾನಿ ಸೇನೆ 30 ಗಂಟೆಗಳ ರೋಚಕ ಕಾರ್ಯಾಚರಣೆ ನಡೆಸುವ ಮೂಲಕ ಬಂಡುಕೋರರು ಹೈಜಾಕ್ ಮಾಡಿದ್ದ ರೈಲು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆಯ ರೋಚಕ ಮಾಹಿತಿ ಒಂದೊಂದಾಗಿ ಹೊರಗೆ ಬರುತ್ತಿದೆ. ಬಲೂಚಿಸ್ತಾನ್ ಲಿಬರಲ್ ಆರ್ಮಿ 30 ಪಾಕ್ ಸೈನಿಕರನ್ನು ಕೊಂದು ಜಾಫರ್ ರೈಲನ್ನು ಹೈಜಾಕ್
ಉಕ್ರೇನ್‌ಗೆ ನೆರವು ಸ್ಥಗಿತಗೊಳಿಸಿ ಅಸಹಾಯಕ ಸ್ಥಿತಿಗೆ ದೂಡಿದ ಅಮೆರಿಕ
ಕಳೆದ ವರ್ಷದವರೆಗೆ ಅಮೆರಿಕ ನೀಡುತ್ತಿದ್ದ ನೆರವು ಈಗ ಬಂದ್ ಆಗಿದ್ದು, ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸುವುದಾಗಿ ಹೇಳುತ್ತಿದ್ದ ಟ್ರಂಪ್ ಇದೀಗ ಯೋಚಿಸುತ್ತಿರುವ ದಿಕ್ಕೇ ಬದಲಾಗಿದೆ. ಉಕ್ರೇನ್‌ಗೆ ಈವರೆಗೆ ಕೊಟ್ಟಿರುವ ಮಿಲಿಟರಿ ಸಹಾಯಕ್ಕೆ ಬೆಲೆ ಕಟ್ಟುತ್ತಿದ್ದಾರೆ. ಇದು
ಪಾಕಿಸ್ತಾನ ಸೇನೆಯಿಂದ ಮಿಂಚಿನ ಕಾರ್ಯಾಚರಣೆ: 27 ಬಂಡುಕೋರರ ಹತ್ಯೆ; 150 ಒತ್ತೆಯಾಳುಗಳ ರಕ್ಷಣೆ!
ರೈಲು ಹೈಜಾಕ್ ಮಾಡಿದ್ದ 27 ಬಲೂಚಿಸ್ತಾನದ ಬಂಡುಕೋರರನ್ನು ಹತ್ಯೆ ಮಾಡಿದ ಪಾಕಿಸ್ತಾನದ ಸೇನೆ 150 ಒತ್ತೆಯಾಳುಗಳನ್ನು ರಕ್ಷಿಸಿದೆ. ಪಾಕಿಸ್ತಾನ ಪೇಶಾವರಕ್ಕೆ ಹೊರಟ್ಟಿದ್ದ ಜಾಫರ್ ರೈಲನ್ನು ನಿನ್ನೆ ಅಪಹರಿಸಿದ್ದ ಬಂಡುಕೋರರು ಬಲೂಚಿಸ್ತಾನಕ್ಕೆ ಕೊಂಡೊಯ್ದಿದ್ದರು. ಮಂಗಳವಾರ ರಾತ್ರಿ ಪೂರ್ಣ ಪ್ರಮಾಣದ ಸೇನೆ ಬಳಸಿ ಮಿಂಚಿನ
ಸಂತಾನ ಕೋರಿ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಪೂಜೆ ಮಾಡಿಸಿದ್ರಾ ಕತ್ರಿನಾ ಕೈಫ್
ನಟಿ ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಆದಿ ಸುಬ್ರಹ್ಮಣ್ಯದ ಸರ್ಪ ಸಂಸ್ಕಾರ ಯಾಗಶಾಲೆಯಲ್ಲಿ ಸರ್ಪ ಸಂಸ್ಕಾರ ಪೂಜೆ ನೆರವೇರಿಸಲು ಕತ್ರಿನಾ ಆಗಮಿಸಿದ್ದರು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮದುವೆಯಾಗದವರು, ಮಕ್ಕಳಾಗದವರು ಹೆಚ್ಚಾಗಿ ಭೇಟಿ ನೀಡಿ ಪ್ರಾರ್ಥಿಸುತ್ತಾರೆ.
ಪಾಕಿಸ್ತಾನದಲ್ಲಿ ಪ್ರಯಾಣಿಕ ರೈಲು ಹೈಜಾಕ್: ಬಂಡುಕೋರರ ಹಿಡಿತದಲ್ಲಿ 400 ಪ್ರಯಾಣಿಕರು
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಬಂಡುಕೋರರು ಪ್ರಯಾಣಿಕ ರೈಲನ್ನು ಹೈಜಾಕ್ ಮಾಡಿ ನೂರಾರು ಪ್ರಯಾಣಿಕರನ್ನು ಒತ್ತೆಯಾಳನ್ನಾಗಿ ಮಾಡಿಕೊಂಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಿ ಪ್ರತ್ಯೇಕ ರಾಷ್ಟ್ರವಾಗಿ ಘೋಷಿಸುವಂತೆ ಆಗ್ರಹಿಸಿ ಬಲೂಚಿಸ್ತಾನ ಲಿಬರಲ್ ಆರ್ಮಿ [ಬಿಎಲ್ ಎ] ರೈಲನ್ನು ಹೈಜಾಕ್ ಮಾಡಿದ್ದು, ಪಾಕಿಸ್ತಾನ
ವಿಶ್ವದ 20 ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತ 13 ನಗರಗಳು!
ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತ ವಿಶ್ವದ ಟಾಪ್ 5 ನಗರಗಳಲ್ಲಿ ಸ್ಥಾನ ಪಡೆದಿದ್ದು, ಸಮಾಧಾನಕರ ವಿಷಯ ಅಂದರೆ 3ರಿಂದ 5ನೇ ಸ್ಥಾನಕ್ಕೆ ಜಾರಿದೆ. ಮಂಗಳವಾರ ಪ್ರಕಟವಾದ ಸ್ವಿಸ್ ವಾಯು ಗುಣಮಟ್ಟದ ತಂತ್ರಜ್ಞಾನ ಕಂಪನಿ ಐಕ್ಯೂಏರ್ನ ವಿಶ್ವ ವಾಯು ಗುಣಮಟ್ಟ ವರದಿ 2024
ಆಮದು ಸುಂಕ ಇಳಿಸಲು ಒಪ್ಪಿಕೊಂಡಿಲ್ಲ: ಅಮೆರಿಕಕ್ಕೆ ಭಾರತ ತಿರುಗೇಟು
ಅಮೆರಿಕದ ವಸ್ತುಗಳ ಮೇಲಿನ ಆಮದು ಸುಂಕ ಇಳಿಸುವುದಾಗಿ ಒಪ್ಪಿಕೊಂಡಿಲ್ಲ ಎಂದು ಭಾರತ ಸ್ಪಷ್ಟನೆ ನೀಡುವ ಮೂಲಕ ಡೊನಾಲ್ಡ್ ಟ್ರಂಪ್ ಗೆ ಪರೋಕ್ಷವಾಗಿ ತಿರುಗೇಟು ನೀಡಿದೆ. ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಅಧಿಕಾರ ಸ್ವೀಕರಿಸಿದ ನಂತರ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಡೊನಾಲ್ಡ್
ಕಾಡುಗಳಲ್ಲಿ ಅಗ್ನಿ ಆಕಸ್ಮಿಕ, ತರದಿರಲಿ ಸೂತಕ
ಸ್ಥಳೀಯ ಸಮುದಾಯಗಳು ಮತ್ತು ಆಧುನಿಕ ಅಗ್ನಿಶಾಮಕ ತಂತ್ರಗಳ ನಡುವಿನ ಸಹಯೋಗವು ಹೆಚ್ಚು ಪರಿಣಾಮಕಾರಿ ಬೆಂಕಿ ತಡೆಗಟ್ಟುವ ತಂತ್ರಗಳಿಗೆ ಕಾರಣವಾಗಬಹುದು. ಸ್ಥಳೀಯ ಬುಡಕಟ್ಟುಗಳು ಮತ್ತು ಅವರ ಅರಣ್ಯ ಪರಿಸರಗಳ ನಡುವಿನ ನಿಕಟ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದು ಕಾಡಿನ ಬೆಂಕಿಯನ್ನು ಪರಿಹರಿಸಲು ನಿರ್ಣಾಯಕವಾಗಿದೆ. ಭಾರತದಲ್ಲಿ
133 ಅಕ್ಕಿಮೇಲೆ ರಾಷ್ಟ್ರಗೀತೆ ಬರೆದ ಐಶ್ವರ್ಯ: ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರ್ಪಡೆ
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹುಲಿಗುಡ್ಡ ಗ್ರಾಮದ ಯುವತಿ ಐಶ್ವರ್ಯ 32 ನಿಮಿಷ 20 ಸೆಕೆಂಡ್ ಗಳಲ್ಲಿ 133 ಅಕ್ಕಿಗಳ ಮೇಲೆ ಕನ್ನಡದಲ್ಲಿ ರಾಷ್ಟ್ರಗೀತೆ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿ ದಾಖಲೆ ನಿರ್ಮಾಣ ಮಾಡಿದ್ದಾರೆ. ಪಟ್ಟಣದ ಸಂಜೀವ್ ಬಿ.ಇಡಿ




