ದೇಶ-ವಿದೇಶ
ಕರ್ನಾಟಕ ಸೇರಿ ಹಲವು ರಾಜ್ಯಗಳ ರೈಲ್ವೆಯಲ್ಲಿ 209 ಮೆಗಾವ್ಯಾಟ್ ಸೌರ ಸ್ಥಾವರ ಸ್ಥಾಪನೆ
ನವದೆಹಲಿ: ಭಾರತೀಯ ರೈಲ್ವೆ ಕಳೆದೊಂದು ದಶಕದಿಂದ ಸೌರ ಶಕ್ತಿ ಉತ್ಪಾದನೆ ಮತ್ತು ಬಳಕೆಗೆ ಪ್ರಾಧಾನ್ಯತೆ ನೀಡುತ್ತಿದ್ದು, ದೇಶಾದ್ಯಂತ ಈವರೆಗೆ 2,249 ರೈಲು ನಿಲ್ದಾಣಗಳು ಮತ್ತು ಸೇವಾ ಕಟ್ಟಡಗಳಲ್ಲಿ 209 ಮೆಗಾವ್ಯಾಟ್ ಸೌರ ಸ್ಥಾವರಗಳನ್ನು ಸ್ಥಾಪಿಸಿದೆ. ಕಳೆದ ಹತ್ತು ವರ್ಷಗಳ ಹಿಂದೆ ಕೇವಲ 628 ಸೌರ ಘಟಕಗಳನ್ನು ಹೊಂದಿದ್ದ ಭಾರತೀಯ ರೈಲ್ವೆ ಇತ್ತೀಚಿನ ಐದು ವರ್ಷಗಳಲ್ಲಿ ಅದರ ಮೂರುಪಟ್ಟು ಸೌರ ಘಟಕಗಳನ್ನು ಸ್ಥಾಪಿಸಿ ಸವರ ಸಕ್ತಿ ಬಳಕೆಯಲ್ಲಿ ಮುನ್ನಡೆಯಲ್ಲಿದೆ. ಕರ್ನಾಟಕ ಸೇರಿದಂತೆ
25,000 ಶಿಕ್ಷಕರನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಮುಖಭಂಗ
ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ನೇಮಕ ಮಾಡಿದ್ದ 25 ಸಾವಿರ ಶಿಕ್ಷಕರ ನೇಮಕಾತಿಯನ್ನು ರದ್ದುಗೊಳಿಸಿ ಕೋಲ್ಕತಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಈ ಮೂಲಕ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಭಾರೀ ಮುಖಭಂಗ ಉಂಟಾಗಿದೆ. ಪಶ್ಚಿಮ ಬಂಗಾಳದ ಸ್ಕೂಲ್ ಸರ್ವಿಸ್
ಮ್ಯಾನ್ಮರ್ ನಲ್ಲಿ ಮತ್ತೆ ಕಂಪಿಸಿದ ಭೂಮಿ: 30000 ದಾಟಿದ ಸಾವಿನ ಸಂಖ್ಯೆ
ಕಳೆದ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪನದಿಂದ ತತ್ತರಿಸಿರುವ ಮ್ಯಾನ್ಮರ್ ನಲ್ಲಿ ಸಾವಿನ ಸಂಖ್ಯೆ 3000 ಮೀರಿದ್ದು, ಬುಧವಾರ ಮತ್ತೆ 5.6 ತೀವ್ರತೆಯ ಭೂಕಂಪನ ಸಂಭವಿಸಿದೆ. ಶುಕ್ರವಾರ ಸಂಭವಿಸಿದ 7.7 ಮತ್ತು 6.8 ತೀವ್ರತೆಯ ಭೂಕಂಪನದಿಂದ ಮ್ಯಾನ್ಮರ್ ಮತ್ತು ಬ್ಯಾಂಕಾಕ್ ತತ್ತರಿಸಿತ್ತು. ದುರಂತ
600 ಉದ್ಯೋಗಿಗಳನ್ನು ವಜಾಗೊಳಿಸಿದ ಝೊಮಾಟೊ
ಝೊಮಾಟೊದಲ್ಲಿ ಎಐ ಘಟಕದ ಪ್ರಾರಂಭಗೊಂಡ ಬಳಿಕ 600 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಈ ಬೆಳವಣಿಗೆ ಭವಿಷ್ಯದ ಉದ್ಯೋಗಾವಕಾಶಗಳು ಮತ್ತು ತಂತ್ರಜ್ಞಾನದ ಪ್ರಭಾವದ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಝೊಮಾಟೊ ಸಂಸ್ಥೆಯು ಗ್ರಾಹಕ ಸೇವೆ, ಡೇಟಾ ವಿಶ್ಲೇಷಣೆ ಮತ್ತು ಕಾರ್ಯಾಚರಣೆಗಳಂತಹ ವಿವಿಧ ವಿಭಾಗಗಳಲ್ಲಿ ಎಐ
ರೈಲಿನಿಂದ ಎಸೆದ ನೀರಿನ ಬಾಟಲಿ ಎದೆಗೆ ಬಡಿದು ಬಾಲಕ ಸಾವು
ಗುಜರಾತ್‌ನ ರಾಜ್‌ಕೋಟ್‌ನಲ್ಲಿ ರೈಲಿನಿಂದ ಪ್ರಯಾಣಿಕರು ಎಸೆದ ನೀರಿನ ಬಾಟಲಿ ಹಳಿ ಪಕ್ಕದಲ್ಲಿ ಆಟವಾಡುತ್ತಿದ್ದ ಬಾಲಕನ ಎದೆಗೆ ಬಡಿದು ಮೃತಪಟ್ಟಿದ್ದಾನೆ. 14 ವರ್ಷದ ಬಾದಲ್ ಸಂತೋಷ್‌ಭಾಯ್ ಠಾಕೂರ್ ಮೃತ ಬಾಲಕ. ಸ್ನೇಹಿತನ ಜೊತೆ ರೈಲ್ವೆ ಹಳಿ ಪಕ್ಕದಲ್ಲಿ ಆಟವಾಡುತ್ತಿದ್ದ ವೇಳೆ ಘಟನೆ ನಡೆದಿದೆ.
ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ
ಲೋಕಸಭೆಯಲ್ಲಿ ಬುಧವಾರ ಮಧ್ಯರಾತ್ರಿ ಸುದೀರ್ಘ ಚರ್ಚೆಯ ಬಳಿಕ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದೆ. ವಿವಾದಿತ ಮಸೂದೆ ಕುರಿತು ಸಂಸತ್‌ನಲ್ಲಿ 12 ಗಂಟೆ ಚರ್ಚೆ ನಡೆಯಿತು. ನಂತರ 2 ಗಂಟೆ ಮತದಾನ ನಡೆಯಿತು. ಮಧ್ಯರಾತ್ರಿ 2 ಗಂಟೆಗೆ ಮಸೂದೆಗೆ ಸದನ ಸಮ್ಮತಿಸಿದೆ. ಮಸೂದೆ
ಲೋಕಸಭೆಯಲ್ಲಿ ವಿವಾದಾಸ್ಪದ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ
ನವದೆಹಲಿ: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬುಧವಾರ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಸದಸ್ಯರ ಗದ್ದಲ, ಕೋಲಾಹಲದ ನಡುವೆ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ಲೋಕಸಭಾ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೇಂದ್ರ ಸಚಿವ ಕಿರಣ್ ರಿಜಿಜು ಅವರನ್ನು
ಶ್ರೀ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಲು ಕೇಂದ್ರಕ್ಕೆ ಡಿಕೆ ಶಿವಕುಮಾರ್ ಮನವಿ
ಜಾತಿ ಧರ್ಮಗಳ ತಾರತಮ್ಯವಿಲ್ಲದೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಸಮಾಜಕ್ಕೆ ಸಾವಿರಾರು ಮುತ್ತುರತ್ನ ಗಳನ್ನು ನೀಡಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ “ಭಾರತ ರತ್ನ” ಪುರಸ್ಕಾರ ನೀಡಿ ಗೌರವಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕೇಂದ್ರ ಸಚಿವ ರಾಜನಾಥ್ ಸಿಂಗ್ ಮೂಲಕ
ಅಮೆರಿಕಕ್ಕಾಗಿ ಇಡೀ ಜಗತ್ತಿನೊಂದಿಗೆ ಸುಂಕ ಯುದ್ಧಕ್ಕೆ ಸಿದ್ಧವೆಂದ ಟ್ರಂಪ್
ಅಮೆರಿಕದ ವಾಣಿಜ್ಯ ಹಿತಾಸಕ್ತಿಗಳಿಗಾಗಿ ಇಡೀ ಜಗತ್ತಿನೊಂದಿಗೆ ಸುಂಕ ಯುದ್ಧ ಮಾಡಲು ಸಿದ್ಧ ಎಂದು ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಏ.2ಅಮೆರಿಕದ ವಿಮೋಚನಾ ದಿನ ಎಂದು ಘೋಷಿಸಿರುವ ಟ್ರಂಪ್, ಅಮೆರಿಕ ದೊಂದಿಗೆ ವ್ಯವಹರಿಸುವ ಎಲ್ಲಾ ದೇಶಗಳ ಮೇಲೆ ಸುಂಕ ಹೆಚ್ಚಳ ಮಾಡುವುದಾಗಿ
ದೆಹಲಿಯಲ್ಲಿ ಕರ್ನಾಟಕ ಭವನ ನೂತನ ಕಟ್ಟಡ ಉದ್ಘಾಟನೆ ನಾಳೆ
ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ನೂತನ ಕರ್ನಾಟಕ ಭವನ(ಕಾವೇರಿ)ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನಾ ಸಮಾರಂಭವು ಬುಧವಾರ ಸಂಜೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತರಿದ್ದು, ಸಚಿವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿಸಿಎಂ




