Menu

ಬೀದಿನಾಯಿಗಳ ಮೇಲಿನ ಪತ್ನಿಯ ಪ್ರೀತಿ: ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಪತಿ

ಅಹಮದಾಬಾದ್‌ನಲ್ಲಿ ಮಹಿಳೆಯೊಬ್ಬರು ಬೀದಿ ನಾಯಿಗಳ ಮೇಲೆ ಅತಿಯಾದ ಪ್ರೀತಿ ತೋರಿಸುತ್ತಾ, ಅವುಗಳನ್ನು ಮನೆಯೊಳಗೆ ಕರೆತಂದು ಬೆಡ್‌ರೂಂ ಹಾಸಿಗೆಯಲ್ಲಿ ಮಲಗಿಸುತ್ತಿರುವುದಕ್ಕೆ ರೋಸಿ ಹೋದ ಪತಿ ವಿಚ್ಛೇದನ ಕೋರಿ ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ ಒಂದರಂದು ನಡೆಸಲಿದೆ. ಅಹಮದಾಬಾದ್‌ನ ದಂಪತಿ 2006ರಲ್ಲಿ ವಿವಾಹವಾಗಿದ್ದು, ಪತ್ನಿಯು ಬೀದಿ ನಾಯಿಗಳ ಮೇಲೆ ತೋರುವ ಅತಿಯಾದ ಪ್ರೀತಿ ಮತ್ತು ಅತಿರೇಕದ ವರ್ತನೆಯೇ ದಾಂಪತ್ಯ ಜೀವನದ ವೈಮನಸ್ಯಕ್ಕೆ ಕಾರಣವಾಗಿದೆ ಎಂದು ಪತಿ ದೂರಿದ್ದಾರೆ.

ದುಬೈನಿಂದ ತಂದ ನಿಷೇಧಿತ ಇ-ಸಿಗರೇಟ್‌ ನೆಲಮಂಗಲದಲ್ಲಿ ಜಪ್ತಿ, ಆರೋಪಿಗಳು ಅರೆಸ್ಟ್‌

ದುಬೈನಿಂದ ತಂದ ನಿಷೇಧಿತ ಇ-ಸಿಗರೇಟ್‌ಗಳನ್ನು ಸಾಗಿಸುತ್ತಿದ್ದ ಗ್ಯಾಂಗ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. 50 ಲಕ್ಷ ರೂ. ಬೆಲೆಬಾಳುವ ಇ-ಸಿಗರೇಟ್‌ಗಳನ್ನು ಜಪ್ತಿ ಮಾಡಲಾಗಿದ್ದು, 3 ಕಾರು ಗಳು, ಮೊಬೈಲ್ ಫೋನ್‌ಗಳು ಸೇರಿದಂತೆ ಒಟ್ಟು 60 ಲಕ್ಷಕ್ಕೂ ಹೆಚ್ಚು

ಔತಣಕೂಟದಲ್ಲಿ ತಿನ್ನುತ್ತಿದ್ದಾಗ ಮಾಂಸ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು

ತೆಲಂಗಾಣದ ನಾಗರ್ಕುರ್ನೂಲ್ ಜಿಲ್ಲೆಯ ಬೊಂಡಲಪಲ್ಲಿ ಗ್ರಾಮದಲ್ಲಿ ಕುರಿಮಾಂಸದ ಕರಿ ತಿನ್ನುವಾಗ ಗಂಟಲಲ್ಲಿ ಮಾಂಸದ ತುಂಡು ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಒಬ್ಬರು ಹೊಸ ಮನೆ ಕಟ್ಟಿದ್ದು, ಆ ಸಂತೋಷಕ್ಕೆ ಭೋಜನ ಕೂಟ ಏರ್ಪಡಿಸಿದ್ದರು. ಹೊಸ ಮನೆ ನಿರ್ಮಾಣದ ಸಂದರ್ಭದಲ್ಲಿ ಶ್ರಮಿಸಿದ ಕೆಲಸಗಾರರು

ಬಾಬರಿ ಮಸೀದಿ ಧ್ವಂಸಕ್ಕೆ ಪ್ರತೀಕಾರ: ಡಿ.6ಕ್ಕೆ ದೇಶದ ಹಲವೆಡೆ ಬಾಂಬ್‌ ಸ್ಫೋಟ ಸಂಚು

ಬಾಬರಿ ಮಸೀದಿ ಧ್ವಂಸಕ್ಕೆ ಪ್ರತೀಕಾರವಾಗಿ ಡಿಸೆಂಬರ್ 6 ರಂದು ದೆಹಲಿಯ 6 ಕಡೆ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಲು ಉಗ್ರರು ಸಂಚು ರೂಪಿಸಿದ್ದರು ಎಂಬ ವಿಚಾರ ಬಯಲಾಗಿದೆ. ದೆಹಲಿ ಕೆಂಪುಕೋಟೆ ಬಳಿ ಕಾರು ಬಾಂಬ್‌ ಸ್ಫೋಟ

32 ಕಾರುಗಳ ಸರಣಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಉಗ್ರರು: ವರದಿ

ನವದೆಹಲಿ: ಕೆಂಪುಕೋಟೆಯಲ್ಲಿ ಕಾರು ಸ್ಫೋಟ ಪ್ರಕರಣದ ಉಗ್ರರು 32 ಕಾರುಗಳನ್ನು ಸ್ಫೋಟಗೊಳಿಸಲು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸೇಡು ತೀರಿಸಿಕೊಳ್ಳಲು 16ನೇ ವರ್ಷಾಚರಣೆ ದಿನ ಸರಣಿ ಕಾರು ಸ್ಫೋಟ

ಮೇಕೆದಾಟು ವಿರುದ್ಧ ತಮಿಳುನಾಡು ಅರ್ಜಿ ಸುಪ್ರೀಂನಿಂದ ವಜಾ, ನಮಗೆ ಸಿಕ್ಕ ನ್ಯಾಯ: ಡಿಕೆ ಶಿವಕುಮಾರ್

“ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದು, ನ್ಯಾಯ ಪೀಠದಿಂದ ನಮಗೆ ನ್ಯಾಯ ಸಿಕ್ಕಂತಾಗಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್  ಪ್ರತಿಕ್ರಿಯೆ ನೀಡಿದರು. ಮೇಕೆದಾಟು ಯೋಜನೆ ಡಿಪಿಆರ್ ವಿರೋಧಿಸಿ ತಮಿಳುನಾಡು ಸುಪ್ರೀಂ ಕೋರ್ಟಿನಲ್ಲಿ

ಮೇಕೆದಾಟು ಯೋಜನೆಗೆ ತಮಿಳುನಾಡಿನ ತಕಾರರು ಅರ್ಜಿ ವಜಾ

ನವದೆಹಲಿ: ಮೇಕದಾಟು ಯೋಜನೆಗೆ ತಮಿಳುನಾಡು ರಾಜ್ಯ ಸರ್ಕಾರ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಕರ್ನಾಟಕಕ್ಕೆ ಮಹತ್ವದ ಗೆಲುವು ಲಭಿಸಿದೆ. ಕಾವೇರಿ ನದಿ ನೀರು ಪೋಲಾಗದೇ ಇರಲು ಹಾಗೂ ಬೆಂಗಳೂರು ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು ಕರ್ನಾಟಕ

ದೆಹಲಿ ಕಾರು ಬಾಂಬರ್‌ ಡಾ.ಉಮರ್‌ ನಬಿ: ಡಿಎನ್‌ಎ ಪರೀಕ್ಷೆಯಿಂದ ದೃಢ

ದೆಹಲಿ ಕಾರು ಬಾಂಬ್‌ ಸ್ಫೋಟದಲ್ಲಿ ಭಾಗಿಯಾಗಿದ್ದು ಡಾಕ್ಟರ್ ಉಮರ್ ನಬಿ ಎಂಬುದು ದೇಹದ ಡಿಎನ್ಎ ಪರೀಕ್ಷೆಯಿಂದ ಖಚಿತವಾಗಿದೆ. ಸ್ಫೋಟಕ್ಕೆ ಬಳಸಲಾದ i20 ಕಾರಿನಲ್ಲಿ ಕಂಡುಬಂದ ದೇಹದಿಂದ ಸಂಗ್ರಹಿಸಲಾದ ಡಿಎನ್ಎ ಮಾದರಿಯನ್ನು ಡಾ. ಉಮರ್ ಅವರ ಕುಟುಂಬ ಸದಸ್ಯರ ಡಿಎನ್ಎ ಮಾದರಿಯೊಂದಿಗೆ ಪರಿಶೀಲಿಸಿದಾಗ

ಕರ್ನಾಟಕದಲ್ಲಿ ವ್ಯಾಪಾರ, ಬಂಡವಾಳ ಹೂಡಿಕೆಗೆ ಸಿಂಗಾಪುರ ಉತ್ಸುಕ: ಡಿಸಿಎಂ

“ಬೆಂಗಳೂರಿನಲ್ಲಿ ಸಿಂಗಪುರ ದೇಶವು ವ್ಯಾಪಾರ ವಹಿವಾಟು ನಡೆಸಲು ಹೆಚ್ಚು ಉತ್ಸುಕವಾಗಿದೆ. ತಂತ್ರಜ್ಞಾನ ಹಂಚಿಕೊಳ್ಳುವಿಕೆ ಸೇರಿದಂತೆ ಕೈಗಾರಿಕಾ ಪಾರ್ಕ್ ಆರಂಭಿಸುವ ಬಗ್ಗೆ ಸಿಂಗಾಪುರ ವಿದೇಶಾಂಗ ಸಚಿವರು ಚರ್ಚೆ ನಡೆಸಿದರು” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ. ಸಿಂಗಾಪುರ ವಿದೇಶಾಂಗ, ವಾಣಿಜ್ಯ ಮತ್ತು ಕೈಗಾರಿಕೆ

ಕೆಂಪುಕೋಟೆಯಲ್ಲಿ ಮೃತಪಟ್ಟವರ 8 ಶವಗಳ ಗುರುತು ಪತ್ತೆ

ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ರಾತ್ರಿ ಕಾರು ಸ್ಫೋಟಗೊಂಡ ಪ್ರಕರಣದಲ್ಲಿ ಮೃತಪಟ್ಟವರ 8 ಶವದ ಗುರುತು ಪತ್ತೆ ಹಚ್ಚಲಾಗಿದೆ. ಮೆಟ್ರೋ ನಿಲ್ದಾಣದ ಸಮೀಪ ಸೋಮವಾರ ಸಂಜೆ ನಡೆದ ಭಾರಿ ಕಾರು ಸ್ಫೋಟದಲ್ಲಿ ಮೃತಪಟ್ಟವರ ದೇಹಗಳು ಛಿದ್ರವಿದ್ರಗೊಂಡಿದ್ದರಿಂದ ಗುರುತು ಪತ್ತೆಹಚ್ಚುವುದು ಕಷ್ಟವಾಗಿತ್ತು. ಸ್ಫೋಟದಲ್ಲಿ