Wednesday, February 26, 2025
Menu

ಮೆಂಟಲ್ ಹೆಲ್ತ್ ಮ್ಯಾಟರ್ಸ್ ಇದು: ಎಲ್‌ ಅಂಡ್‌ ಟಿ ಅಧ್ಯಕ್ಷರ ವಿರುದ್ಧ ಹರಿ ಹಾಯ್ದ ದೀಪಿಕಾ ಪಡುಕೋಣೆ

ಲಾರ್ಸೆನ್ ಮತ್ತು ಟೂಬ್ರೊ ಅಧ್ಯಕ್ಷ ಎಸ್‌ಎನ್ ಸುಬ್ರಹ್ಮಣ್ಯನ್ ನೌಕರರು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕೆಂದು ನೀಡಿರುವ ಹೇಳಿಕೆಯನ್ನು ನಟಿ ದೀಪಿಕಾ ಪಡುಕೋಣೆ ಖಂಡಿಸಿದ್ದಾರೆ. ಈ ಹಿಂದೆ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆಂದು ಹೇಳಿ ಇನ್ಫೋಸಿಸ್‌ ನಾರಾಯಣ ಮೂರ್ತಿ ಟೀಕೆಗೆ ಗುರಿಯಾಗಿದ್ದರು. ಇದೀಗ ಮತ್ತೋರ್ವ ಉದ್ಯಮಿ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಇದು ದೊಡ್ಡ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರ ಎಂದಿದ್ದಾರೆ ಪಡುಕೋಣೆ. ಪತ್ರಕರ್ತೆ ಫಾಯೆ ಡಿಸೋಜಾ ಅವರ

ಪರೀಕ್ಷೆ ತಪ್ಪಿಸಿಕೊಳ್ಳಲು ಶಾಲೆಗೆ ಬಾಂಬ್‍ ಬೆದರಿಕೆ: ವಿದ್ಯಾರ್ಥಿಯ ಬಂಧನ

ದೆಹಲಿಯ ಶಾಲೆಗಳಿಗೆ ಬಾಂಬ್‍ ಬೆದರಿಕೆ ಮೇಲ್‍ ಮಾಡಿದ್ದ ಕಾಲೇಜೊಂದರ 12ನೇ ತರಗತಿಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿದ್ಯಾರ್ಥಿಯು ತಾನು ಈ ಹಿಂದೆಯೂ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ದಕ್ಷಿಣ ಡಿಸಿಪಿ ಅಂಕಿತ್ ಚೌಹಾಣ್ ತಿಳಿಸಿದ್ದಾರೆ. ವಿದ್ಯಾರ್ಥಿಯು ಪರೀಕ್ಷೆಯಿಂದ ತಪ್ಪಿಸಿಕೊಳ್ಳುವ

ಮಂಗಳೂರಲ್ಲಿ ಅಕ್ರಮ ವಾಸವಿದ್ದ ಬಾಂಗ್ಲಾದೇಶಿ ಸೆರೆ

ಮಂಗಳೂರಿನ ಮುಕ್ಕ ಗ್ರಾಮದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಯನ್ನು ರಾಜ್ಯ ಆಂತರಿಕ ಭದ್ರತಾ ವಿಭಾಗ ಮತ್ತು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ನಿವಾಸಿ ಅನರುಲ್ ಶೇಖ್​ (25) ಬಂಧಿತ. ಅನರುಲ್ ಶೇಖ್ ಮೂರು ವರ್ಷಗಳ ಹಿಂದೆ ಅಂತಾರಾಷ್ಟ್ರಿಯ ಗಡಿರೇಖೆ

ದುಬಾರಿ ಆಗಲಿದೆ ಸಕ್ಕರೆ ಬೆಲೆ!

ನವದೆಹಲಿ: ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಕ್ಕರೆ ಉತ್ಪಾದನೆಯು ಶೇ.16 ರಷ್ಟು ಕಡಿಮೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅದರ ಬೆಲೆ ತುಟ್ಟಿಯಾಗುವುದು ಖಚಿತವಾಗಿದೆ. ಸಕ್ಕರೆಯ ಕನಿಷ್ಠ ಮಾರಾಟ ದರವನ್ನು ಹೆಚ್ಚಿಸುವ ಬಗ್ಗೆ ಸರ್ಕಾರ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ವಾಹನ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಚಿತ ಚಿಕಿತ್ಸೆ ಘೋಷಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ!

ದೇಶಾದ್ಯಂತ ವಾಹನ ಅಪಘಾತದಲ್ಲಿ ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆಯನ್ನು ಮಾರ್ಚ್ ನಿಂದ ಆರಂಭಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರಸ್ತುತ ಅಪಘಾತಕ್ಕೊಳಗಾದ ವ್ಯಕ್ತಿಗೆ ಗರಿಷ್ಠ 1.5

ತಿರುಪತಿ ಕಾಲ್ತುಳಿತದಲ್ಲಿ ಬಳ್ಳಾರಿ ಮಹಿಳೆ ಸಾವು

ತಿರುಪತಿ-ತಿರುಮಲದಲ್ಲಿ ಸಂಭವಿಸಿರುವ ಕಾಲ್ತುಳಿತದಲ್ಲಿ ಮೃತಪಟ್ಟವರಲ್ಲಿ ಬಳ್ಳಾರಿ ಮೂಲದ ಓರ್ವ ಮಹಿಳೆ ಸೇರಿ ಕೂಡ ಸೇರಿದ್ದಾರೆ. ಬಳ್ಳಾರಿಯ ನಿರ್ಮಲಾ (50) ಮೃತಪಟ್ಟವರು. ಉಳಿದಂತೆ ಮೃತರಲ್ಲಿ ವಿಶಾಖಪಟ್ಟಣದ ರಜನಿ (47), ಲಾವಣ್ಯ (40), ಶಾಂತಿ (34) ಆಂಧ್ರದ ನರಸೀಪಟ್ಟಣಂ ನಿವಾಸಿ ಬೊದ್ದೇಟಿ ನಾಯ್ಡುಬಾಬು ಹಾಗೂ

ಕೋಲಾರದ ನಾಲ್ವರು ತಮಿಳುನಾಡಿನಲ್ಲಿ ಅಪಘಾತಕ್ಕೆ ಬಲಿ

ತಮಿಳುನಾಡಿನ ರಾಣಿಪೇಟೆಯಲ್ಲಿ ಕೆಎಸ್ಸಾರ್ಟಿಸಿ ಬಸ್‌ ಮತ್ತು ಟ್ಯಾಂಕರ್‌ ಡಿಕ್ಕಿಯಾಗಿ ಕೋಲಾರ ಶ್ರೀನಿವಾಸಪುರ ಸೀಗೆಹಳ್ಳಿಯ ನಾಲ್ವರು ಬಲಿಯಾಗಿದ್ದಾರೆ. ಮಾರುಕಟ್ಟೆಗೆ ತರಕಾರಿ ಒಯ್ಯುತ್ತಿದ್ದ ಟ್ಯಾಂಕರ್‌ ಇದಾಗಿದ್ದು, ಭೀಕರ ಅಪಘಾತದಲ್ಲಿ ಮೃತಪಟ್ಟ ನಾಲ್ವರನ್ನು ಕ್ಯಾಂಟರ್ ಚಾಲಕ ಮಂಜುನಾಥ್, ಕ್ಲೀನರ್ ಶಂಕರ್, ಸಹಾಯಕ ಸೋಮಶೇಖರ್, ವೆಂಕಟೇಶ್ ನಗರ ಗ್ರಾಮದ

ಲಾಸ್‌ ಏಂಜಲೀಸ್‌ನಲ್ಲಿ ಕಾಳ್ಗಿಚ್ಚು ಆರ್ಭಟಕ್ಕೆ ಐವರು ಬಲಿ

ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಭೀಕರ ಕಾಳ್ಗಿಚ್ಚು ಕಾ ಣಿಸಿಕೊಂಡಿದ್ದು, ಐವರು ಬಲಿಯಾಗಿದ್ದಾರೆ. ಐದು ಎಕರೆ ಪ್ರದೇಶದಲ್ಲಿ ಕಾಳ್ಗಿಚ್ಚು ಆವರಿಸಿದ್ದು, ಪ್ರಾಣಿ, ಪಕ್ಷಿಗಳು ಬೆಂಕಿಗೆ ಆಹುತಿಯಾಗಿವೆ. ಇಡೀ ಪ್ರದೇಶ ಬೆಂಕಿ ಮತ್ತು  ದಟ್ಟ ಹೊಗೆಯಿಂದ ಆವೃತವಾಗಿದೆ. ಲಾಸ್‌ ಏಂಜಲೀಸ್‌ ಪಕ್ಕದ ಪೆಸಿಫಿಕ್‌ ಪ್ಯಾಲಿಸೈಡ್ಸ್‌

ತಿರುಪತಿಯಲ್ಲಿ ಭಕ್ತರ ನೂಕುನುಗ್ಗಲಿಂದ ಕಾಲ್ತುಳಿತಕ್ಕೆ ಬಲಿಯಾದವರ ಸಂಖ್ಯೆ 7ಕ್ಕೆ ಏರಿಕೆ

ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ  ವೈಕುಂಠ ಏಕಾದಶಿ ಪ್ರಯುಕ್ತ  ವಿಷ್ಣು ನಿವಾಸಂನಲ್ಲಿ ಶುಕ್ರವಾರದಿಂದ 10 ದಿನ ವೈಕುಂಠ ದ್ವಾರ ಸರ್ವದರ್ಶನಕ್ಕಾಗಿ ಟೋಕನ್‌ ಪಡೆಯಲು ಭಕ್ತರು ನೂಕು ನುಗ್ಗಲು ಉಂಟು ಮಾಡಿದ್ದರಿಂದ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ

ಮಳೆ ಪ್ರವಾಹದಿಂದ ತತ್ತರಿಸುತ್ತಿದೆ ಮರುಭೂಮಿ ಸೌದಿ ಅರೇಬಿಯಾ

ಮರುಭೂಮಿ ಸೌದಿ ಅರೇಬಿಯಾದಲ್ಲಿ ಮಂಗಳವಾರದಿಂದ ಭಾರಿ ಮಳೆಯಾಗುತ್ತಿದ್ದು, ಪ್ರವಾಹದಿಂದ ತತ್ತರಿಸಿ ಹೋಗಿದೆ. ಜೆಡ್ಡಾ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶ, ಮೆಕ್ಕಾ ಮತ್ತು ಮದೀನಾದಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿ ಪ್ರವಾಹದಿಂದ ಕಂಗೆಟ್ಟಿದೆ. ಹಲವು ನಗರ ಪ್ರದೇಶಗಳು ಜಲಾವೃತಗೊಂಡು ಜನ ತತ್ತರಿಸಿ