Menu

ರಷ್ಯಾ-ಉಕ್ರೇನ್‌ ಯುದ್ಧ ಶೀಘ್ರ ಕೊನೆ: ಟ್ರಂಪ್‌

ದೀರ್ಘಕಾಲದಿಂದ ನಡೆಯುತ್ತಿರುವ ರಷ್ಯಾ- ಉಕ್ರೇನ್‌ ನಡುವಿನ ಯುದ್ಧ ಶೀಘ್ರ ಕೊನೆಯಾಗುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಫ್ಲೋರಿಡಾದ ತನ್ನ ಖಾಸಗಿ ನಿವಾಸದಲ್ಲಿ ಟ್ರಂಪ್‌ ಮಹತ್ವದ ಸಭೆ ನಡೆಸಿದ ಬಳಿಕ ಈ ಹೇಳಿಕೆ ನೀಡಿದ್ದಾರೆ. ನಾವು ಎರಡೂ ಕಡೆಯವರೊಂದಿಗೆ ಬಹಳ ಹತ್ತಿರವಾಗಿದ್ದೇವೆ. ಯುದ್ಧವನ್ನು ಕೊನೆಗೊಳಿಸುವ ಕರಡು ಒಪ್ಪಂದ ಬಹುತೇಕ ಪೂರ್ಣಗೊಂಡಿದೆ ಎಂದು ತಿಳಿಸಿದರು. ಝೆಲೆನ್ಸ್ಕಿ ಜೊತೆ ಸಭೆ ನಡೆಸುವ ಮೊದಲು ಟ್ರಂಪ್‌

ನಾಯಿ ಕಚ್ಚಿದ್ದ ಎಮ್ಮೆ ಸಾವು: ಮೊಸರು ಸೇವಿಸಿದ್ದವರಿಗೆ ರೇಬೀಸ್‌ ಆತಂಕ

ನಾಯಿ ಕಚ್ಚಿದ್ದರಿಂದ ಮೃತಪಟ್ಟ ಎಮ್ಮೆಯ ಹಾಲಿನಿಂದ ತಯಾರಿಸಲಾಗಿದ್ದ ಮೊಸರನ್ನು ಸೇವಿಸಿರುವ ಇನ್ನೂರಕ್ಕೂ ಹೆಚ್ಚು ಮಂದಿಗೆ ರೇಬೀಸ್‌ ಭೀತಿಯುಂಟಾಗಿದೆ. ಉತ್ತರ ಪ್ರದೇಶದ ಬುಡೌನ್‌ ಜಿಲ್ಲೆಯ ಪಿಪ್ರೌಲಿ ಗ್ರಾಮದಲ್ಲಿ ಡಿಸೆಂಬರ್ 23ರಂದು ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಪುಣ್ಯತಿಥಿ ನಡೆದಿತ್ತು. ಅಲ್ಲಿ ಊಟಕ್ಕೆ ಬಳಸಿದ್ದ ಮೊಸರನ್ನು ನಾಯಿ

ಆಂಧ್ರದಲ್ಲಿ ರೈಲಿನ ಎರಡು ಬೋಗಿ ಬೆಂಕಿಗಾಹುತಿ, ಒಬ್ಬರ ಸಾವು

ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ಯಲಮಂಚಿಲಿ ಬಳಿ ಟಾಟಾನಗರ್-ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿನ ಎರಡು ಏಸಿ ಬೋಗಿಗಳು ಮಧ್ಯರಾತ್ರಿ ಬೆಂಕಿಯಲ್ಲಿ ಸುಟ್ಟು ಹೋಗಿವೆ. ಘಟನೆಯಲ್ಲಿ ವಿಜಯವಾಡ ನಿವಾಸಿ 70 ವರ್ಷದ ಚಂದ್ರಶೇಖರ್ ಸುಂದರಂ ಎಂಬವರು ಪ್ರಾಣ ಕಳೆದುಕೊಂಡಿದ್ದಾರೆ. ಒಂದು ಬೋಗಿಯಲ್ಲಿ 82 ಪ್ರಯಾಣಿಕರು ಮತ್ತು

ಆಂಧ್ರದ ಗಣಿಗಾರಿಕೆ ಪರ್ಮಿಟ್‌, ಕರ್ನಾಟಕ ಭೂ ಒತ್ತುವರಿ: ಜನಾರ್ದನ ರೆಡ್ಡಿ ರೆಡ್ಡಿಗೆ ಮತ್ತೆ ಗಣಿ ಸಂಕಷ್ಟ

ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಆಂಧ್ರದ ಗಣಿಗಾರಿಕೆ ಪರವಾನಗಿ ಪಡೆದುಕೊಂಡು ಕರ್ನಾಟಕದ ಭೂಮಿಯನ್ನೇ ಒತ್ತುವರಿ ಮಾಡಿಕೊಂಡಿರುವುದು ಸಾಬೀತಾಗಿದೆ. ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ನಡೆಸಿದ ಸರ್ವೆಯಲ್ಲಿ ಈ ವಿಚಾರ ಬಯಲಾಗಿದೆ. ಹೀಗಾಗಿ ಜನಾದನ ರೆಡ್ಡಿಗೆ ಮತ್ತೆ ಗಣಿ ಸಂಕಷ್ಟ ಎದುರಾಗಿದೆ.

ಪ್ರೀತಿಸಿ ಲಿವ್‌ ಇನ್‌ ಟುಗೆದರ್‌ ಬಳಿಕ ಮದುವೆ: ಕೆಲವೇ ಗಂಟೆಗಳಲ್ಲಿ ವಿಚ್ಛೇದನ

ಎರಡ್ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಲಿವ್‌ ಇನ್‌ ಟುಗೆದರ್‌ ಬಳಿಕ ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ವಿಚ್ಛೇದನ ಪಡೆದುಕೊಂಡ ಪ್ರಕರಣ ಪುಣೆಯಲ್ಲಿ ನಡೆದಿದೆ. ಮದುವೆ ಆಗಿ 24 ಗಂಟೆಯೊಳಗೆ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ದಂಪತಿ ವಿಚ್ಛೇದನ ಪಡೆದಿದ್ದಾರೆ. ಮದುವೆಯಾದ ಕೂಡಲೇ

ಸ್ವದೇಶಿ ಎಂಆರ್‌ಐ ಸ್ಕ್ಯಾನರ್‌ ಅಭಿವೃದ್ಧಿಪಡಿಸಿದ ಬೆಂಗಳೂರು ಸ್ಟಾರ್ಟಪ್‌ ಕಂಪನಿ

ಬೆಂಗಳೂರು ಮೂಲದ ಸ್ಟಾರ್ಟಪ್‌ ಕಂಪನಿವೋಕ್ಸೆಲ್‌ಗ್ರಿಡ್‌ ಮೊದಲ ಸ್ವದೇಶಿ ಎಂಆರ್‌ಐ ಸ್ಕ್ಯಾನರ್‌ ಅಭಿವೃದ್ಧಿಪಡಿಸಿ, ಪುಣೆಯ ಚಂದ್ರಪುರದ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಅಳವಡಿಸಿದೆ. ವೋಕ್ಸೆಲ್‌ಗ್ರಿಡ್‌ ಕಂಪನಿ 12 ವರ್ಷಗಳ ಶ್ರಮದಲ್ಲಿ ಈ ಯಂತ್ರವನ್ನು ಅಭಿವೃದ್ಧಿಪಡಿಸಿದೆ. ಕಂಪನಿಗೆ ಕೇಂದ್ರ ಸರ್ಕಾರ ಮತ್ತು ಝೋಹೋ ಸಂಸ್ಥೆ ನೆರವು ನೀಡಿವೆ.

ಚಲಿಸುತ್ತಿದ್ದ ಕಾರಿನಲ್ಲೇ ಸಿಇಒ ಸೇರಿ ಮೂವರಿಂದ ಮಹಿಳಾ ಮ್ಯಾನೇಜರ್ ಮೇಲೆ ಗ್ಯಾಂಗ್‌ ರೇಪ್‌

ಡ್ರಾಪ್‌ ನೆಪದಲ್ಲಿ ಕರೆದು ಚಲಿಸುತ್ತಿದ್ದ ಕಾರಿನಲ್ಲೇ ಕಂಪನಿ ಸಿಇಒ ಸೇರಿದಂತೆ ಮೂವರು ಮಹಿಳಾ ಮ್ಯಾನೇಜರ್ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಪ್ರಕರಣ ರಾಜಸ್ಥಾನದ ಉದಯ್‌ಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಜಿಕೆಎಂ ಕಂಪನಿಯೂ ಮಹಿಳಾ ಸ್ನೇಹಿ ಮಾನದಂಡದ ವಿಚಾರದಲ್ಲಿ 5ರಲ್ಲಿ 4.7 ರೇಟಿಂಗ್

ಜ. 5 ರಿಂದ ದೇಶಾದ್ಯಂತ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನ

ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ವಿಬಿ ಜಿ-ರಾಮ್  ಜಿ ಎಂದು ಬದಲಾಯಿಸಲಾಗಿದ್ದು,  ಜನವರಿ ಐದರಿಂದ ದೇಶಾದ್ಯಂತ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನವನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ

ರೇಪ್‌ ಮಾಡಿ ಮಗುವಿನ ಕೊಲೆಗೈದ ಮಕ್ಕಳನ್ನು “ರಾಜಾ ಬೇಟಾ” ಎಂದು ಮುದ್ದಿಸುವ ತಾಯಂದಿರ ವಿರುದ್ಧ ಪಂಜಾಬ್- ಹರಿಯಾಣ ಹೈಕೋರ್ಟ್ ಕಿಡಿ

ಪಂಜಾಬ್‌, ಹರಿಯಾಣ ಪ್ರದೇಶಗಳಲ್ಲಿ ಅತ್ಯಾಚಾರಿ ಗಂಡುಮಕ್ಕಳನ್ನು ಕುಟುಂಬದ ಸದಸ್ಯರು ಹಾಗೂ ತಾಯಂದಿರುವ ‘ರಾಜಾ ಬೇಟಾ’ ಎಂದು ಕುರುಡಾಗಿ ಮುದ್ದಿಸುವುದು ಸಾಮಾನ್ಯ, ದುಷ್ಟ, ವಿಕೃತ ವ್ಯಕ್ತಿಗಳನ್ನು ಪುರುಷತ್ವ ಅಳಿಯುವ ತನಕ ಜೈಲಲ್ಲಿ ಕೊಳೆಯುವಂತೆ ಮಾಡಬೇಕು ಎಂದು ಪಂಜಾಬ್- ಹರಿಯಾಣ ಹೈಕೋರ್ಟ್ ಹೇಳಿದೆ. ಐದು

ರಷ್ಯಾ ಸೇನೆಯಿಂದ ಕೀವ್‌ ಮೇಲೆ ಕ್ಷಿಪಣಿ, ಡ್ರೋನ್‌ ದಾಳಿ

ನಾಲ್ಕು ವರ್ಷಗಳನ್ನು ಸಂಘರ್ಷದಲ್ಲೇ ಕಳೆದ ಉಕ್ರೇನ್ ಮತ್ತು ರಷ್ಯಾ ನಡುವಿನ ಉದ್ವಿಗ್ನತೆ ಇನ್ನೂ ಮುಂದುವರಿದಿದ್ದು, ಶನಿವಾರ ಮುಂಜಾನೆ ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ಮೇಲೆ ದೊಡ್ಡ ಪ್ರಮಾಣದ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿವೆ. ಕೀವ್‌ ನಗರದ ಆಯಕಟ್ಟಿನ ಪ್ರದೇಶಗಳಲ್ಲಿ