Menu

ಆದಂಪುರ ವಾಯುಸೇನಾ ನೆಲೆಗೆ ಪ್ರಧಾನಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪಂಜಾಬ್‌ನ ಆದಂಪುರ ವಾಯುಸೇನಾ ನೆಲೆಗೆ ಭೇಟಿ ನೀಡಿ ಯೋಧರೊಂದಿಗೆ ಸಂವಾದ ನಡೆಸಿದರು. ಆದಂಪುರ ವಾಯುನೆಲೆಯು ಭಾರತೀಯ ವಾಯುಸೇನೆಯ ಪ್ರಮುಖ ಕೇಂದ್ರವಾಗಿದ್ದು, ಉತ್ತರ ಭಾರತದ ಭದ್ರತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಭೇಟಿಯ ಮೂಲಕ ಪ್ರಧಾನಿ ಮೋದಿ ಸಶಸ್ತ್ರ ಪಡೆಗಳ ಧೈರ್ಯವನ್ನು ಗೌರವಿಸಿ, ರಾಷ್ಟ್ರದ ಭದ್ರತೆಗಾಗಿ ಅವರ ಕೊಡುಗೆಯನ್ನು  ಕೊಂಡಾಡಿದರು. ಪ್ರಧಾನಿಯವರನ್ನು ವಾಯುಸೇನೆಯ ಉನ್ನತ ಅಧಿಕಾರಿಗಳು ಸ್ವಾಗತಿಸಿದರು. ಆಪರೇಷನ್ ಸಿಂಧೂರ್‌ನ ಬಗ್ಗೆ ಮೋದಿ ಸಮಗ್ರ ಮಾಹಿತಿಯನ್ನು

ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಮೂವರು ಉಗ್ರರು ಹತ

ಜಮ್ಮು ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ಮಂಗಳವಾರ ಉಗ್ರರು ಹಾಗೂ ಸೇನಾಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಮೂವರು ಉಗ್ರರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ನಾಲ್ವರು ಭಯೋತ್ಪಾದಕರು ಹಾಗೂ ಭಾರತದ ಭದ್ರತಾ ಪಡೆ ನಡುವಿನ ಹೋರಾಟದಲ್ಲಿ ಲಷ್ಕರ್-ಎ-ತಯ್ಬಾ ಸಂಘಟನೆಯ ಒಬ್ಬ ಉಗ್ರ ಹತನಾಗಿದ್ದಾನೆ.

ಪಿಎಂಒ ಅಧಿಕಾರಿ ಸೋಗಿನಲ್ಲಿ INS ವಿಕ್ರಾಂತ್ ಮಾಹಿತಿ ಕೇಳಿದ್ದ ವ್ಯಕ್ತಿಯ ಬಂಧನ

ಪ್ರಧಾನಮಂತ್ರಿ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡು ನೌಕಾಪಡೆಯ ಐಎನ್‌ಎಸ್‌ ವಿಕ್ರಾಂತ್ ಹಡಗಿನ ಬಗ್ಗೆ ಮಾಹಿತಿ ಕೇಳಿದ್ದ ಕೇರಳದ ವ್ಯಕ್ತಿಯನ್ನು ಪೊಲೀಸರು ಕೊಚ್ಚಿಯಲ್ಲಿ ಬಂಧಿಸಿದ್ದಾರೆ. ಕೇರಳದ ಕೋಝಿಕೋಡ್ ಎಲ್ತೂರ್ ನಿವಾಸಿ ಮುಜೀಬ್ ರೆಹಮಾಮ್ ಬಂಧಿತ ಆರೋಪಿ. ತಾನು ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿ

ಪಾರ್ಲಿಮೆಂಟ್ ಸಭೆ ಕರೆಯುವಂತೆ ಪ್ರಧಾನಿಗೆ ಪತ್ರ, ರೆಸ್ಪಾನ್ಸ್ ಇಲ್ಲ: ಮಲ್ಲಿಕಾರ್ಜುನ ಖರ್ಗೆ

ಭಾರತ -ಪಾಕಿಸ್ತಾನ ಮಧ್ಯೆ ಯುದ್ಧ ಬಿಕ್ಕಟ್ಟು ಪರಿಸ್ಥಿತಿಯಲ್ಲಿ  ನಮ್ಮ ಪಕ್ಷ ಮತ್ತು ಘಟಬಂಧನ್ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದೆ. ಈ ವಿಚಾರದ ಬಗ್ಗೆ ಚರ್ಚೆಗೆ ಬೇಗನೇ ಪಾರ್ಲಿಮೆಂಟ್ ಸಭೆ ಕರೆಯಿರಿ ಮಾತಾಡೋಣ ಅಂತ ಪ್ರಧಾನಿಗೆ ಪತ್ರ ಬರೆದಿದ್ದೇವೆ.ಆದರೆ ಪ್ರಧಾನಿ ಅವರಿಂದ

ಅಮೃತಸರದಲ್ಲಿ ನಕಲಿ ಮದ್ಯ ಸೇವಿಸಿ 14 ಕಾರ್ಮಿಕರ ಸಾವು

ಪಂಜಾಬ್‌ನ ಅಮೃತಸರ ಜಿಲ್ಲೆಯ ಗ್ರಾಮಗಳಲ್ಲಿ ಇಟ್ಟಿಗೆ ಗೂಡುಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದವರು ನಕಲಿ ಮದ್ಯ ಸೇವಿಸಿದ ಪರಿಣಾಮವಾಗಿ 14 ಮಂದಿ ಮೃತಪಟ್ಟಿದ್ದಾರೆ. ಭಂಗಲಿ, ಪಾತಾಳಪುರಿ, ಮರಾರಿ ಕಲಾನ್, ಥೆರೆವಾಲ್ ಮತ್ತು ತಲ್ಯಾಂಡಿ ಘುಮಾನ್ ಗ್ರಾಮಗಳಲ್ಲಿ ಈ ಸಾವು ಸಂಭವಿಸಿವೆ. ಅಗ್ಗದ ದರದಲ್ಲಿ

ಆಫ್ರಿಕಾದಲ್ಲಿ ಭಯೋತ್ಪಾದಕರ ದಾಳಿಗೆ ನೂರಕ್ಕೂ ಹೆಚ್ಚು ಜನ ಸಾವು

ಆಫ್ರಿಕಾದ ಸಹೇಲ್‌ನ ಜಿಹಾದಿ ಹಿಂಸಾಚಾರ ಪೀಡಿತ ಪ್ರದೇಶ ಬುರ್ಕಿನಾ ಫಾಸೊದಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, 100ಕ್ಕೂ ಹೆಚ್ಚು ಜನರು, ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಜಿಬೋ ನಗರ ಮತ್ತು ಸಮೀಪದ ಮಿಲಿಟರಿ ನೆಲೆಗಳ ಮೇಲೆ ಈ ದಾಳಿ ನಡೆದಿದೆ. ದಾಳಿಯ ಹೊಣೆಯನ್ನು ಅಲ್-ಖೈದಾ

ಜಮ್ಮುವಿಗೆ ಇಂಡಿಗೋ, ಏರ್ ಇಂಡಿಯಾ ವಿಮಾನ ಹಾರಾಟ ರದ್ದು

ಇಂಡಿಗೋ ಮತ್ತು ಏರ್ ಇಂಡಿಯಾ ಇಂದು ಶ್ರೀನಗರ, ಜಮ್ಮು, ಅಮೃತಸರ, ಚಂಡೀಗಢ ಮತ್ತು ಇತರ ಮೂರು ಗಡಿ ನಗರಗಳಿಗೆ ವಿಮಾನಗಳನ್ನು ರದ್ದುಗೊಳಿ ಸಿರುವುದಾಗಿ ಹೇಳಿದೆ. ಜಮ್ಮು, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮ್‌ನಗರ, ಚಂಡೀಗಢ ಮತ್ತು ರಾಜ್‌ಕೋಟ್‌ಗಳಿಗೆ ದ್ವಿಮುಖ ವಿಮಾನ ಕಾರ್ಯಾಚರಣೆ

ಪಹಲ್ಗಾಮ್ ಸಂತ್ರಸ್ತರಿಗೆ ನ್ಯಾಯ ಕೊಡಿಸಿದ್ದೇವೆ: ಭಾರತೀಯ ಸೇನಾಧಿಕಾರಿಗಳು

ಪಾಕಿಸ್ತಾನದ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿ ಪೆಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಟ್ಟಿದ್ದೇವೆ ಎಂದು ಭಾರತೀಯ ಸೇನಾಧಿಕಾರಿಗಳು ಹೇಳಿದ್ದಾರೆ. ನವದೆಹಲಿಯಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮೇ 9ರಂದು ಆರಂಭಿಸಿದ ಪಾಕಿಸ್ತಾನದ ಮೇಲಿನ ಯುದ್ಧದ ವಿವರಗಳನ್ನು ನೀಡಿದ ಭಾರತೀಯ ಸೇನಾಧಿಕಾರಿಗಳು, ಪಾಕಿಸ್ತಾನದ ಪಿಎಲ್-15

ಇಸ್ರೊದಿಂದ ಪಾಕ್‌ ಏರ್‌ಡಿಫೆನ್ಸ್ ಸಿಸ್ಟಂ ಕಾರ್ಯಾಚರಣೆ ಬಗ್ಗೆ ಸೇನೆಗೆ ಮಾಹಿತಿ

ಸೇನೆಯು 9 ಉಗ್ರನೆಲೆಗಳನ್ನು ನಾಶ ಮಾಡಿದ್ದರ ಯಶಸ್ಸಿನಲ್ಲಿ ದೇಶದ ಹೆಮ್ಮೆಯ ಇಸ್ರೊ ಪಾಲು ಕೂಡ ಇದೆ. ಭಾರತೀಯ ವಾಯುಸೇನೆಯ ಪೈಲಟ್‌ಗಳಿಗೆ ಇಸ್ರೊ ಸಹಾಯ ಮಾಡಿದೆ. ಪಾಕಿಸ್ತಾನದ ಏರ್‌ಡಿಫೆನ್ಸ್ ಸಿಸ್ಟಂಗಳು ಆ್ಯಕ್ಟಿವ್ ಆಗಿದ್ದವೋ ಇಲ್ಲವೋ ಎಂಬ ಮಾಹಿತಿಗಳನ್ನು ಸೇನೆಗೆ ಇಸ್ರೊ ನೀಡುತ್ತಿತ್ತು ಎಂದು

ಕಾಂಗ್ರೆಸ್ ಪಕ್ಷದ ಐಟಿ ಸೆಲ್ ಪಾಕಿಸ್ತಾನಿ ಉಗ್ರರ ಸ್ಲೀಪರ್ ಸೆಲ್: ಆರ್‌. ಅಶೋಕ

ಈಗ ಏಕಾಏಕಿ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂದು ಬಿಂಬಿಸುವ ಮ್ಯಾಪ್ ಟ್ವೀಟ್ ಮಾಡಿರುವ ಕರ್ನಾಟಕದ ಕಾಂಗ್ರೆಸ್‌ ಪಕ್ಷ ಮತ್ತೊಮ್ಮೆ ಪಾಪಿ ಪಾಕಿಸ್ತಾನದ ಮೇಲೆ ತನಗೆ ಎಷ್ಟು ಪ್ರೀತಿ ಇದೆ ಎಂದು ತೋರಿಸಿದೆ. ಒಟ್ಟಿನಲ್ಲಿ ಕರ್ನಾಟಕದ ಕಾಂಗ್ರೆಸ್ ಪಕ್ಷದ ಐಟಿ ಸೆಲ್ ಪಾಕಿಸ್ತಾನಿ