ದೇಶ-ವಿದೇಶ
ಪಂಚರಾಜ್ಯ ಚುನಾವಣೆ: ಏಪ್ರಿಲ್ 9ರಿಂದ 29ರವರೆಗೆ ಮತದಾನ
ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಮ್ ರಾಜ್ಯಗಳು ಹಾಗೂ ಪುದುಚೆರಿ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಚುನಾವಣಾ ಆಯೋಗವು ಪ್ರಕಟಿಸಿದೆ. ಅಸ್ಸಾಮ್, ಕೇರಳ, ಪುದುಚೆರಿಯಲ್ಲಿ ಏಪ್ರಿಲ್ 9ರಂದು ಮತದಾನ ನಡೆಯಲಿದೆ. ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಎರಡು ಹಂತದಲ್ಲಿ ನಡೆಯಲಿದೆ. ಉಳಿದ ನಾಲ್ಕು ಕಡೆ ಒಂದೇ ಹಂತದಲ್ಲಿ ಮತದಾನವಾಗಲಿದೆ. ಮೇ 4ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ ಎಂದು
ಇರಾನ್-ಇಸ್ರೇಲ್ ಸಂಘರ್ಷ: ದುಬೈ ಏರ್‌ಪೋರ್ಟ್ ಬಳಿ ಡ್ರೋನ್ ದಾಳಿ
ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇಂದು (ಸೋಮವಾರ) ಇರಾನ್ ಡ್ರೋನ್ ದಾಳಿ ನಡೆಸಿದ್ದು, ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ಡ್ರೋನ್ ಇಂಧನ ಟ್ಯಾಂಕ್‌ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಕಾಣಿಸಿಕೊಂಡಿದ್ದು, ತುರ್ತು ಪರಿಹಾರ ತಂಡಗಳು ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.
ಮೀನು ಫ್ರೈ ಕದ್ದ ಇಲಿಗಳು: ಸ್ನೇಹಿತ ತಿಂದನೆಂದು ಕಲ್ಲಿಂದ ಜಜ್ಜಿ ಕೊಲೆ
ತವಾದಲ್ಲಿ ಫ್ರೈ ಮಾಡಿಟ್ಟಿದ್ದ ಮೀನನ್ನು ಇಲಿಗಳು ತಿಂದು ಮುಗಿಸಿದ್ದು, ಸ್ನೇಹಿತನೇ ತಿಂದಿದ್ದಾನೆಂದು ಭಾವಿಸಿ ಸಿಟ್ಟಿಗೆದ್ದ ಸ್ನೇಹಿತರಿಬ್ಬರು ಆತನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ಮುಂಬೈನ ಗೋರೆಗಾಂವ್ ನಲ್ಲಿ ನಡೆದಿದೆ. ಕೊಲೆಯಾದವನನ್ನು ಅಫ್ಸರ್ ಎಂದು ಗುರುತಿಸಲಾಗಿದೆ, ಆತನ ಸ್ನೇಹಿತರಾದ ಸುರೇಶ್ ಮತ್ತು
ಮೊಜ್ತಾಬಾ ಖಮೇನಿ ಸುಳಿವು ನೀಡಿದವರಿಗೆ 92.47 ಕೋಟಿ ರೂ.: ಅಮೆರಿಕ
ಅಮೆರಿಕ ಸೇನೆಯಿಂದ ಇರಾನ್ ನಾಯಕ ಅಲಿ ಖಮೇನಿ ಹತ್ಯೆ ಬಳಿಕ ಆ ಸ್ಥಾನಕ್ಕೆ ಏರಿದ ಮೊಜ್ತಾಬಾ ಖಮೇನಿಯನ್ನು ಮುಗಿಸಲು ಮುಂದಾಗಿರುವ ಅಮೆರಿಕ ಅವರ ಸುಳಿವು ನೀಡಿದವರಿಗೆ 10 ಮಿಲಿಯನ್ ಡಾಲರ್ (92.47 ಕೋಟಿ ರೂಪಾಯಿ) ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಅಮೆರಿಕದ
ಲಿವ್-ಇನ್‌ನಲ್ಲಿದ್ದಾತ ಬೇರೆಯವಳೊಂದಿಗೆ ಮದುವೆ: ವೀಡಿಯೊ ಮಾಡಿಟ್ಟು ಮಹಿಳೆ ಸುಸೈಡ್
ನಾಲ್ಕು ವರ್ಷ ನನ್ನ ಜೊತೆ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಪೊಲೀಸ್ ಕಾನ್‌ಸ್ಟೆಬಲ್ ಬೇರೆ ಮಹಿಳೆಯನ್ನು ಮದುವೆಯಾಗುತ್ತಿರುವುದಾಗಿ ಆರೋಪಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ಆಕೆ ವೀಡಿಯೊ ಮಾಡಿಟ್ಟು, ತಾಜ್‌ಗಂಜ್ ಪೊಲೀಸ್ ಠಾಣೆಯ ಜೆ.ವಿ. ಗೌತಮ್ ನಾಲ್ಕು ವರ್ಷಗಳಿಂದ
ತೈಲ ಬೆಲೆ ಏರಿಕೆಯಾದರೆ ಅಮೆರಿಕಕ್ಕೆ ಹಣದ ಸುರಿಮಳೆ: ಟ್ರಂಪ್
ಅಮೆರಿಕ ವಿಶ್ವದ ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರ, ತೈಲ ಬೆಲೆ ಏರಿಕೆಯಾದರೆ ಅಮೆರಿಕ ಬಹಳಷ್ಟು ಲಾಭ ಗಳಿಸಲಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟ್ರೂಥ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಅವರು, ತೈಲ ಬೆಲೆಗಳು ಏರಿದಾಗ ನಾವು ಬಹಳ ಹಣ ಗಳಿಸುತ್ತೇವೆ.
ರಾಜ್ಯಸಭೆ ಚುನಾವಣೆ: ಒಡಿಶಾ ಕಾಂಗ್ರೆಸ್ ಶಾಸಕರು ಬಿಡದಿಗೆ ಶಿಫ್ಟ್
ಮಾರ್ಚ್ ೧೬ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿಯಿಂದ ಒಡಿಶಾದ ಕಾಂಗ್ರೆಸ್ ಶಾಸಕರನ್ನು ಬಿಡದಿಯಲ್ಲಿರುವ ವಂಡರ್ ಲಾ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ. ಒಡಿಶಾದ ಕಾಂಗ್ರೆಸ್ ಶಾಸಕರನ್ನು ಸುರಕ್ಷಿತವಾಗಿ ಇರಿಸಲು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿಗೆ ಕರೆಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿಯ ‘ಆಪರೇಷನ್
ಎಲ್‌ಪಿಜಿ ವ್ಯತ್ಯಯ: ಕಾರ್ಪೋರೇಟ್ ಕಂಪೆನಿಗಳಿಗೂ ತಟ್ಟಿದ ಬಿಸಿ
ಉದ್ಯೋಗಿಗಳಿಗೆ ದಿನವೂ ಅಡುಗೆ ಮಾಡಿಕೊಡಬೇಕಾದ ಕಾರ್ಪೊರೇಟ್ ಕಂಪನಿಗಳ ಕೆಫೆಟೇರಿಯಾಗಳಿಗೆ ಕಮರ್ಷಿಯಲ್ ಗ್ಯಾಸ್ ಸಿಗದ ಕಾರಣ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ನೀಡಲು ಮುಂದಾಗಿದೆ. ಎಚ್ಸಿಎಲ್ಟೆಕ್ ಕಂಪನಿಯು ಎರಡು ದಿನದ ಮಟ್ಟಿಗೆ ವರ್ಕ್ ಫ್ರಂ ಹೋಮ್ ಕೊಟ್ಟಿದೆ. ಇರಾನ್- ಇಸ್ರೇಲ್
ಇರಾನ್ ನಾಯಕ ಮೊಜ್ತಬಾ ಖಮೇನಿ ಹತ್ಯೆ ಎಚ್ಚರಿಕೆಯಿತ್ತ ಟ್ರಂಪ್
ಅಯತೊಲ್ಲಾ ಅಲಿ ಖಮೇನಿಯನ್ನು ಇಸ್ರೇಲ್- ಅಮೆರಿಕ ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಿದ ಬಳಿಕ ಅಲ್ಲಿನ ನೂತನ ನಾಯಕನಾಗಿ ಮೊಜ್ತಬಾ ಖಮೇನಿ ಆಯ್ಕೆ ಆಗಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ವಿರೋಧ ವ್ಯಕ್ತಪಡಿಸಿ ಹತ್ಯೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಬೇಡಿಕೆಗಳಿಗೆ
ಇರಾನ್-ಇಸ್ರೇಲ್ ಸಂಘರ್ಷ: ಹರ್ಮುಜ್ ಜಲಸಂಧಿಯಲ್ಲಿ ಭಾರತದ ತೈಲ ಟ್ಯಾಂಕರ್‌ಗಳಿಗೆ ಇರಾನ್ ಅನುಮತಿ
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಜೊತೆ ಮಾತುಕತೆ ನಡೆಸಿದ ಬಳಿಕ ಇರಾನ್ ಭಾರತೀಯ ತೈಲ ಟ್ಯಾಂಕರ್‌ಗಳಿಗೆ ಹರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿ ಸಿಕ್ಕಿದೆ. ಇದರಿಂದ ಭಾರತಕ್ಕೆ ತೈಲ ಪೂರೈಕೆಯ ಸಮಸ್ಯೆಗೆ




