Menu

ತೆಲಂಗಾಣ ಸುರಂಗ ಕುಸಿತ: 16 ದಿನದ ಬಳಿಕ ಒಂದು ಶವ ಪತ್ತೆ

ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿತದಲ್ಲಿ 16 ದಿನಗಳ ಬಳಿಕ ಒಬ್ಬ ಕಾರ್ಮಿಕನ ಶವ ಪತ್ತೆಯಾಗಿದ್ದು, ಇನ್ನೂ 7 ಕಾರ್ಮಿಕರು ಪತ್ತೆಯಾಗಿಲ್ಲ. ಪತ್ತೆಯಾಗಿರುವ ಮೃತ ಕಾರ್ಮಿಕನನ್ನು ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ತೆಲಂಗಾಣ ಸಿಎಂ ಎ.ರೇವಂತ್ ರೆಡ್ಡಿ ಹಾಗೂ ನೀರಾವರಿ ಸಚಿವ ಎನ್ ಉತ್ತಮ್ ಕುಮಾರ್ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಸ್ಥರಿಗೆ 25 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಶ್ರೀಶೈಲಂ ಆಣೆಕಟ್ಟಿನ ಹಿಂಭಾಗದ

11.6 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಾಗಣೆ: ಬೆಂಗಳೂರಿನ ಯುವಕ ಗೋವಾದಲ್ಲಿ ಅರೆಸ್ಟ್‌

11.6ಕೋಟಿ ರೂ. ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ಆರೋಪದಡಿ ಗೋವಾದ ಪೊಲೀಸರು ಬೆಂಗಳೂರು ಮೂಲದ 23 ವರ್ಷದ ಯುವಕನನ್ನು ಬಂಧಿಸಿ  11 ಕೆಜಿಗಿಂತ ಹೆಚ್ಚು ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಮಾದಕ ದ್ರವ್ಯ ವಿರುದ್ಧ ಕಾರ್ಯಾಚರಣೆ ಇತಿಹಾಸದಲ್ಲಿ ಒಂದೇ ದಿನದಲ್ಲಿ ಇಷ್ಟೊಂದು ಡೊಡ್ಡ ಪ್ರಮಾಣದಲ್ಲಿ

ಜರ್ನಲಿಸ್ಟ್‌, ಆರ್​ಟಿಐ ಕಾರ್ಯಕರ್ತನ ಹತ್ಯೆ

ಉತ್ತರ ಪ್ರದೇಶದ ಸೀತಾಪುರದ ಲಕ್ನೋ-ದೆಹಲಿ ಹೆದ್ದಾರಿಯಲ್ಲಿ ದುಷ್ಕರ್ಮಿಗಳು ಪತ್ರಕರ್ತನ ಬೈಕ್‌ಗೆ ಡಿಕ್ಕಿ ಹೊಡೆದು ಬಳಿಕ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೃತ ರಾಘವೇಂದ್ರ ಬಾಜ್‌ಪೈ ಉತ್ತರ ಪ್ರದೇಶದ ಹಿಂದಿ ದಿನಪತ್ರಿಕೆಯ ಸ್ಥಳೀಯ ವರದಿಗಾರ. ರಾಘವೇಂದ್ರ ಆರ್​ಟಿಐ ಕಾರ್ಯಕರ್ತ ಕೂಡ ಆಗಿದ್ದರು. ದುಷ್ಕರ್ಮಿಗಳು ಮೊದಲು

ಬಿಜೆಪಿ ಪರ ಕೆಲಸ ಮಾಡುವ ಕೆಲಸ ಮಾಡುವವರು ಕಾಂಗ್ರೆಸ್ ನಲ್ಲಿ ಇದ್ದಾರೆ: ರಾಹುಲ್ ಗಾಂಧಿ

ಬಿಜೆಪಿ ಪರವಾಗಿ ಗೌಪ್ಯವಾಗಿ ಕೆಲಸ ಮಾಡುತ್ತಿರುವ ಮುಖಂಡರು ಕಾಂಗ್ರೆಸ್ ನಲ್ಲಿ ಇದ್ದಾರೆ. ಅಂತಹವರು ಸುಧಾರಿಸಿಕೊಳ್ಳದೇ ಇದ್ದರೆ ಪಕ್ಷದಿಂದ ಉಚ್ಛಾಟನೆ ಮಾಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ಅಹಮದಾಬಾದ್ ನಲ್ಲಿ ಶನಿವಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಗುಜರಾತ್ ನಲ್ಲಿ

ಕ್ಷೇತ್ರ ಪುನರ್ವಿಂಗಣೆ ವಿವಾದ: 7 ರಾಜ್ಯಗಳ ಸಭೆ ಕರೆದ ತಮಿಳುನಾಡು

ಕೇಂದ್ರ ಸರ್ಕಾರದ ಕ್ಷೇತ್ರ ಪುನರ್ವಿಂಗಣೆ ಪ್ರಸ್ತಾಪದ ಹಿಂದಿನ ರಾಜಕೀಯ ಉದ್ದೇಶಗಳ ಕುರಿತು ಚರ್ಚೆ ನಡೆಸಲು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ 7 ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. ಮಾರ್ಚ್ ೨೨ರಂದು ಚೆನ್ನೈನಲ್ಲಿ ನಡೆಯಲಿರುವ ರಾಜಕೀಯ ಪಕ್ಷಗಳ ಜಂಟಿ ಕ್ರಿಯಾ ಸಮಿತಿ ರಚನೆ

ಸಚಿವ ಜೈಶಂಕರ್‌ ಮೇಲೆ ಖಲಿಸ್ತಾನಿ ಉಗ್ರರಿಂದ ದಾಳಿ ಯತ್ನ

ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರ ಮೇಲೆ ಖಲಿಸ್ತಾನಿ ಉಗ್ರರು ಲಂಡನ್‌ನಲ್ಲಿ ದಾಳಿಗೆ ಯತ್ನಿಸಿರುವ ಘಟನೆ ನಡೆದಿದೆ. ಚಾಥಮ್ ಹೌಸ್ ಚಿಂತಕರ ಚಾವಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಕಾರಿನಿಂದ ಇಳಿಯುತ್ತಿದ್ದ ಜೈಶಂಕರ್ ಅವರ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಚಾಥಮ್ ಹೌಸ್

ಕ್ರಿಮಿನಲ್‌ ಕೇಸ್ ನಲ್ಲಿ ಜನಪ್ರತಿನಿಧಿಗಳು ಭಾಗಿ: ವಿಚಾರಣೆಗೆ ಸುಪ್ರೀಂ ಒಪ್ಪಿಗೆ

ನವದೆಹಲಿ: ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿರುವ ಜನಪ್ರತಿನಿಧಿಗಳನ್ನು ರಾಜಕಾರಣದಿಂದ ನಿಷೇಧಿಸುವ ಕುರಿತಂತೆ ಕೈಗೊಳ್ಳಬೇಕಾದ ತೀರ್ಮಾನದ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಒಪ್ಪಿಗೆ ಸೂಚಿಸಿದೆ. ಕ್ರಿಮಿನಲ್‌ ಪ್ರಕರಣದಲ್ಲಿ ಶಿಕ್ಷೆಗೆ ಅನುಸಾರವಾಗಿ ಯಾವುದೇ ಜನಪ್ರತಿನಿಧಿಗಳ ಅನರ್ಹತೆಯ ಅವಧಿಯನ್ನು ಕಡಿಮೆ ಮಾಡಿದ ಅಥವಾ ನಿಷೇಧಿಸಿರುವ ಬಗ್ಗೆ

ರಿಲಯನ್ಸ್‌ಗೆ 24,000 ಕೋಟಿ ರೂ. ದಂಡದ ಬರೆ

ಮುಂಬೈ: ರಿಲಾಯನ್ಸ್ ಕಂಪನಿಗೆ ಭಾರೀ ಪೆಟ್ಟು ನೀಡಿರುವ ಪೆಟ್ರೋಲಿಯಂ ಸಚಿವಾಲಯ 24 ಸಾವಿರ ಕೋಟಿ ರೂಪಾಯಿ ಪಾವತಿಸಲು ಸೂಚಿಸಿ ನೊಟೀಸ್ ಜಾರಿಗೊಳಿಸಿದೆ. ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿಯ ನೆರೆಯ ಬ್ಲಾಕಿಂದ ನೈಸರ್ಗಿಕ ಅನಿಲವನ್ನು ಉತ್ಪಾದಿಸಿ ಮಾರಾಟ ಮಾಡುವುದರಿಂದ ಬಂದ ಲಾಭಕ್ಕಾಗಿ ಸರ್ಕಾರ ರಿಲಯನ್ಸ್

ಭಾರತದ ಮೇಲೆ ಪ್ರತಿ ಸುಂಕ ಹೇರಿಕೆ: ಡೊನಾಲ್ಡ್ ಟ್ರಂಪ್ ಸುಳಿವು

ವಾಷಿಂಗ್ಟನ್: ಭಾರತ ಮತ್ತು ಇತರ ರಾಷ್ಟ್ರಗಳು ಅಮೆರಿಕದಿಂದ ರಫ್ತು ಆಗುವ ಉತ್ಪನ್ನಗಳ ಮೇಲೆ ವಿಧಿಸಿರುವ ಸುಂಕದ ಪ್ರಮಾಣ “ಅತ್ಯಂತ ಅನ್ಯಾಯ” ಆಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಸುಂಕ ಹೇರಿಕೆ ಜಾರಿ ಮಾಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಅಧ್ಯಕ್ಷರಾಗಿ

ಮಾರ್ಚ್ 21ರೊಳಗೆ ಬಿಜೆಪಿ ಹೊಸ ರಾಷ್ಟ್ರೀಯ ಅಧ್ಯಕ್ಷರ ನೇಮಕ

ಮಾರ್ಚ್ 21ರೊಳಗೆ ಭಾರತೀಯ ಜನತಾ ಪಕ್ಷಕ್ಕೆ ಮುಂದಿನ ರಾಷ್ಟ್ರೀಯ ಅಧ್ಯಕ್ಷರ ನೇಮಕವಾಗುವ ಸಾಧ್ಯತೆಯಿದೆ. ಮಾರ್ಚ್ 21ರಿಂದ 23ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಆರ್‌ಎಸ್‌ಎಸ್ ಸಭೆಗೂ ಮೊದಲು ಬಿಜೆಪಿಗೆ ಹೊಸ ರಾಷ್ಟ್ರೀಯ ಅಧ್ಯಕ್ಷರ ನೇಮಕ ನಡೆಯಲಿದೆ. ದೆಹಲಿ ವಿಧಾನಸಭಾ ಚುನಾವಣೆಯ ಗೆಲುವಿನ ನಂತರ ಬಿಜೆಪಿ