ದೇಶ-ವಿದೇಶ
ಕಾರು ಸ್ಪೋಟ ತನಿಖೆ ಎನ್ಐಎ ಹೆಗಲಿಗೆ
ನವದೆಹಲಿ: ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ನಡೆದ ಕಾರು ಸ್ಫೋಟದ ತನಿಖೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಗೆ ವಹಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿ 25 ಕ್ಕೂ ಹೆಚ್ಚು ಜನರು ಗಾಯಗೊಂಡ ದೆಹಲಿ ಕೆಂಪು ಕೋಟೆ ಸ್ಫೋಟದ ತನಿಖೆಯನ್ನು ಎನ್ ಐಎ
ಇಸ್ಲಾಮಾಬಾದ್‌ನಲ್ಲಿ ಕಾರು ಸ್ಫೋಟಕ್ಕೆ ಐವರು ಬಲಿ
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಭಯಾನಕ ಕಾರು ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ. ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಭೀಕರ ಸ್ಫೋಟದ ಮರುದಿನವೇ ಈ ಸ್ಫೋಟ ನಡೆದ್ದು, 25 ಮಂದಿ ಗಾಯಗೊಂಡಿದ್ದಾರೆ. ಇಸ್ಲಾಮಾಬಾದ್‌ನ ನ್ಯಾಯಾಂಗ ಸಂಕೀರ್ಣದ ಹೊರಗಡೆ ನಿಲ್ಲಿಸಲಾಗಿದ್ದ ಕಾರಿನಲ್ಲಿ ಈ ಸ್ಫೋಟ
ದೆಹಲಿಯಲ್ಲಿ ಸ್ಫೋಟಗೊಂಡ ಕಾರಿನ ಮಾಲೀಕ ಅರೆಸ್ಟ್: 1000 ಸಿಸಿಟಿವಿಗಳ ಪರಿಶೀಲನೆ
ದೆಹಲಿಯ ಕೆಂಪು ಕೋಟೆ ಬಳಿ ಸ್ಫೋಟಗೊಂಡ ಕಾರಿನ ಮಾಲೀಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, 35ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸೋಮವಾರ ರಾತ್ರಿ ನಡೆದ ಈ ಘಟನೆಯಿಂದ ದೇಶವೇ
ಅಮೆರಿಕ ಜನತೆಗೆ ಗ್ಯಾರಂಟಿ ಘೋಷಿಸಿದ ಅಧ್ಯಕ್ಷ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಲ್ಲಿನ ಜನತೆಗೆ ಗ್ಯಾರಂಟಿ ಭಾಗ್ಯ ಘೋಷಿಸಿದ್ದಾರೆ. ಭಾರತ ಸೇರಿದಂತೆ ವ್ಯಾಪಾರಿ ಪಾಲುದಾರ ದೇಶಗಳ ಮೇಲೆ ಭಾರಿ ತೆರಿಗೆ ಹೇರಿದ್ದು, ಅದರಿಂದ ಸಂಗ್ರಹವಾಗುವ ಹಣವನ್ನು ಅಮೆರಿಕನ್ನರಿಗೆ ಹಂಚುವುದಾಗಿ ಟ್ರಂಪ್ ಭರವಸೆ ನೀಡಿದ್ದಾರೆ. ಶ್ರೀಮಂತರನ್ನು ಹೊರತುಪಡಿಸಿ ಎಲ್ಲರಿಗೂ 1.77
ಚಲಿಸುತ್ತಿದ್ದ ಕಾರು ಟೈರ್ ಸ್ಫೋಟ: ಬೆಂಕಿಯಲ್ಲಿ ಮಹಿಳೆ ಸಜೀವ ದಹನ
ರಸ್ತೆಯಲ್ಲಿ ಚಲಿಸುತ್ತಿದ್ದಾಗಲೇ ಕಾರಿನ ಟೈರ್ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿದ್ದು, ಕಾರಿನಲ್ಲಿದ್ದ ಮಹಿಳೆ ಸಜೀವ ದಹನಗೊಂಡಿದ್ದಾರೆ. ಮಹಾರಾಷ್ಟ್ರದ ಜಲಗಾಂವ್‌ನಿಂದ ಛತ್ರಪತಿ ಸಂಭಾಜಿ ನಗರಕ್ಕೆ ಹೋಗುವ ದಾರಿಯಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಟೈರ್ ಸ್ಫೋಟಗೊಂಡು ಕಾರಿಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಜನರು ಸ್ಥಳಕ್ಕೆ
ಫರಿದಾಬಾದ್ ನಲ್ಲಿ 2900 ಕೆಜಿ ಸ್ಫೋಟಕ ಪತ್ತೆ: ಭಾರೀ ಸಂಚು ವಿಫಲ
ಹರಿಯಾಣದ ಫರಿದಾಬಾದ್ ನ ಮನೆಯೊಂದರಲ್ಲಿ 360 ಕೆಜಿ ಸ್ಫೋಟಕ ಹಾಗೂ ಅಪಾರ ಪ್ರಮಾಣದ ರೈಫಲ್ಸ್ ಮತ್ತು ಮದ್ದುಗುಂಡುಗಳನ್ನು ಪತ್ತೆಯಾದ ಬೆನ್ನಲ್ಲೇ ಮತ್ತೊಂದು ಮನೆಯಲ್ಲಿ 2563 ಕೆಜಿ ಸ್ಫೋಟಕಗಳು ಪತ್ತೆಯಾಗಿವೆ. ಹರಿಯಾಣದ ಫರಿದಾಬಾದ್‌ನಲ್ಲಿ ವೈದ್ಯ ಡಾ, ಮುಜಾಮಿಲ್ ಶಕೀಲ್ ಗೆ ಎರಡೂ ಮನೆಗಳು
ಹರಿಯಾಣದಲ್ಲಿ 360 ಕೆಜಿ ಸ್ಫೋಟಕ ಪತ್ತೆ: ಇಬ್ಬರು ವೈದ್ಯರ ಬಂಧನ
ಹರಿಯಾಣದಲ್ಲಿ 360 ಕೆಜಿ ಸ್ಫೋಟಕ ಹಾಗೂ ಅಪಾರ ಪ್ರಮಾಣದ ರೈಫಲ್ಸ್ ಮತ್ತು ಮದ್ದುಗುಂಡುಗಳನ್ನು ಪೊಲೀಸರು ಪತ್ತೆ ಹಚ್ಚುವ ಮೂಲಕ ಭಾರೀ ಪ್ರಮಾಣದ ಸ್ಫೋಟದ ಸಂಚನ್ನು ವಿಫಲಗೊಳಿಸಿದ್ದಾರೆ. ಹರಿಯಾಣದ ಫರಿದಾಬಾದ್‌ನಲ್ಲಿ ಪೊಲೀಸರು 360 ಕೆ.ಜಿ ಅಮೋನಿಯಂ ನೈಟ್ರೇಟ್ ಸ್ಫೋಟಕ, ಎರಡು ರೈಫಲ್ ಹಾಗೂ
ತಿಂಗಳಿಗೆ 6 ಲಕ್ಷ ಪರಿಹಾರ ಕೇಳಿದ ಪತ್ನಿ: ತಿರಸ್ಕರಿಸಿದ ಕೋರ್ಟ್
ವಿಚ್ಛೇದನ ಪ್ರಕರಣವೊಂದರಲ್ಲಿ ಪ್ರತಿ ತಿಂಗಳು ಪತಿ ತನಗೆ 6 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಕೇಳಿದ ಮಹಿಳೆಯ ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ನವದೆಹಲಿಯಲ್ಲಿ ಕೌಟುಂಬಿಕ ನ್ಯಾಯಾಲಯದ ಕೋರ್ಟ್ ವಿಚಾರಣೆಯ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನ್ಯಾಯಾಧೀಶರ ನಿರ್ಧಾರಕ್ಕೆ ಅನೇಕರು ಶ್ಲಾಘನೆ
ರಾತ್ರಿ ಮಲಗಿದ್ದಾಗ ಮನೆ ಛಾವಣಿ ಕುಸಿದು ಐವರ ಸಾವು
ರಾತ್ರಿ ಮಲಗಿದ್ದಾಗ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ಐದು ಸದಸ್ಯರು ಮೃತಪಟ್ಟಿದ್ದಾರೆ. ಬಿಹಾರ ದಾನಾಪುರದ ದಿಯಾರಾ ಕಿಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮಾನಸ್ ನಯಾ ಪಣಾಪುರ 42 ಪಟ್ಟಿ ಎಂಬ ಸ್ಥಳದಲ್ಲಿ ಈ ದುರಂತ ನಡೆದಿದೆ. ಮನೆಯ ಮಾಲೀಕ ಬಬ್ಬು
ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಸ್ವಾಗತಿಸಿದ ಹೆಚ್‌ಡಿಕೆ
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಭಾರತೀಯ ರೈಲ್ವೆ ವಲಯದಲ್ಲಿ ಪರಿವರ್ತನಾತ್ಮಕ ಹೆಜ್ಜೆ ಆಗಿದ್ದು, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ರಾಷ್ಟ್ರದ ರೈಲ್ವೆ ವ್ಯವಸ್ಥೆ ಉತ್ಕೃಷ್ಟತೆಯತ್ತ ಸಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ




