ದೇಶ-ವಿದೇಶ
ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ ತಂಡಕ್ಕೆ ಡಿಕೆಶಿ ಅಭಿನಂದನೆ
ಐದನೇ ಬಾರಿಗೆ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟ್ರೋಫಿಯನ್ನು ಗೆದ್ದ ಕರ್ನಾಟಕ ತಂಡಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಗುಜರಾತಿನ ವಡೋದರ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅಂತಿಮ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡ 36 ರನ್ ಗಳ ಅಂತರದಲ್ಲಿ ವಿದರ್ಭ ತಂಡವನ್ನು ಮಣಿಸಿರುವುದು ಸಂತೋಷದ ಸಂಗತಿ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸಂಘಟಿತ ಪ್ರದರ್ಶನದೊಂದಿಗೆ ಕರ್ನಾಟಕ ತಂಡ ಪ್ರಶಸ್ತಿ ಮುಡಿ ಗೇರಿಸಿಕೊಂಡಿದೆ ಎಂದು ಸಂತೋಷ
ಗೋವಾ ಪ್ಯಾರಾಗ್ಲೈಡಿಂಗ್: ಮಹಿಳಾ ಪ್ರವಾಸಿ, ಇನ್ಸ್ಟ್ರಕ್ಟರ್ ಸಾವು
ಉತ್ತರ ಗೋವಾದಲ್ಲಿ ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತದಲ್ಲಿ ಪ್ಯಾರಾಗ್ಲೈಡಿಂಗ್ ಮಹಿಳಾ ಪ್ರವಾಸಿ ಹಾಗೂ ಇನ್ಸ್ಟ್ರಕ್ಟರ್ ಮೃತಪಟ್ಟಿದ್ದಾರೆ. ಶನಿವಾರ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪುಣೆ ನಿವಾಸಿ ಶಿವಾನಿ ಡೇಬಲ್ ಮತ್ತು ಆಕೆಯ ಇನ್ಸ್ಟ್ರಕ್ಟರ್ ಸುಮಲ್ ನೇಪಾಲಿ ಮೃತಪಟ್ಟವರು. ಪ್ಯಾರಾಗ್ಲೈಡಿಂಗ್‌ಗಾಗಿ ಶಿವಾನಿ
ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 57 ದಿನದಲ್ಲೇ ತೀರ್ಪು ಪ್ರಕಟಿಸಿದ ಕೋಲ್ಕತಾ ಕೋರ್ಟ್
ಕೋಲ್ಕತ್ತಾದ ಆರ್‌ಜಿ ಕರ್ ಸರ್ಕಾರಿ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಸಂಜಯ್ ರಾಯ್ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದೆ. ಕಳೆದ ಆಗಸ್ಟ್ 9 ರಂದು ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ
ಭಾರತೀಯ ಆಟೋ ಕ್ಷೇತ್ರಕ್ಕೆ ಹಸಿರು ಬಲ; ಇವಿ ವಾಹನ ಮಾರಾಟ ಹೆಚ್ಚಳ
ನವದೆಹಲಿ: ಭಾರತೀಯ ಅಟೋಮೊಬೈಲ್ ಕ್ಷೇತ್ರವು ಪರಿಸರ ಸ್ನೇಹಿ ಹೆಜ್ಜೆಗಳ ಮೂಲಕ ಸುರಕ್ಷಿತ, ದಕ್ಷತೆ ಹಾಗೂ ಕ್ಷಮತೆಯ ಭವಿಷ್ಯಕ್ಕೆ ನಾಂದಿ ಹಾಡಿದ್ದು, ಮುಂಬರುವ ದಿನಗಳಲ್ಲಿ ದೇಶೀಯ ವಾಹನ ಕ್ಷೇತ್ರ ಅದ್ಭುತಗಳಿಗೆ ಸಾಕ್ಷಿಯಾಗಲಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ
ನೆಲಮಂಗಲ, ದೇವನಹಳ್ಳಿಯಲ್ಲಿ ಶೀಘ್ರ ರೈಲು ಟರ್ಮಿನಲ್
ಬೆಂಗಳೂರು ನಗರದ ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚುತ್ತಿರುವ ಕಾರಣ ನಗರ ಹೊರವಲಯದಲ್ಲಿ ಎರಡು ರೈಲ್ವೆ ಟರ್ಮಿನಲ್ಗಳನ್ನು ತೆರೆಯಲು ಕೇಂದ್ರ ರೈಲ್ವೆ ಇಲಾಖೆ ಮುಂದಾಗಿದೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಗರ್ಭಿಣಿಯರಿಗೆ 21,000, ಬಡ ಮಹಿಳೆಯರಿಗೆ 2500 ರೂ. ನೆರವು: ದೆಹಲಿ ಬಿಜೆಪಿ ಚುನಾವಣಾ ಪ್ರಣಾಳಿಕೆ ಘೋಷಣೆ
ಗರ್ಭಿಣಿಯರಿಗೆ 21 ಸಾವಿರ ರೂ. ನೆರವು, ಮೊದಲ ಮಗುವಿಗೆ 5000 ರೂ. 2ನೇ ಮಗುವಿಗೆ 6000 ರೂ. ನೆರವು ಅಲ್ಲದೇ ಹಿರಿಯ ಮಹಿಳೆಯರಿಗೆ ಮಾಸಿಕ 2000ದಿಂದ 3000 ರೂ.ವರೆಗೂ ನೆರವು ಘೋಷಿಸುವ ಮೂಲಕ ಬಿಜೆಪಿ ದೆಹಲಿ ಚುನಾವಣೆಯಲ್ಲಿ ಮಹಿಳಾ ಮತದಾರರ ಮೇಲೆ
ರಷ್ಯಾ ಸೇನೆಯಲ್ಲಿದ್ದ 12 ಭಾರತೀಯರು ಸಾವು: ಕೇಂದ್ರ
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಸೇನೆಯಲ್ಲಿದ್ದ 12 ಮಂದಿ ಭಾರತೀಯರು ಮೃತಪಟ್ಟಿದ್ದು, 16 ಮಂದಿ ನಾಪತ್ತೆಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾ ಸೇನೆಯಲ್ಲಿರುವ ಭಾರತೀಯರ ಪೈಕಿ 12 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ವಿದೇಶಾಂಗ
ಸುನಿಲ್ ಶೆಟ್ಟಿಗೆ ಪೂರ್ಣ ಪ್ರಮಾಣದ ತುಳು ಕಾಮಿಡಿ ಸಿನಿಮಾದಲ್ಲಿ ನಟಿಸುವಾಸೆಯಂತೆ
ಹುಟ್ಟೂರು ತುಳುನಾಡಿನ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ. ಜೈ ತುಳು ಸಿನಿಮಾದಲ್ಲಿ ಗೆಸ್ಟ್ ರೋಲ್ ಮಾಡುತ್ತಿದ್ದೇನೆ. ಮುಂದೊಂದು ದಿನ ಪೂರ್ಣ ಪ್ರಮಾಣದಲ್ಲಿ ತುಳು ಕಾಮಿಡಿ ಸಿನಿಮಾ ಮಾಡುವ ಆಸೆಯಿದೆ ಎಂದು ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೇಳಿದ್ದಾರೆ. ನಟ ರೂಪೇಶ್
ಗೋಧ್ರಾ ದುರಂತ: ಫೆ.13ರಿಂದ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್
ನವದೆಹಲಿ: ಗೋಧ್ರಾ ರೈಲು ದುರಂತ ಸಂಬಂಧ ಗುಜರಾತ್ ಸರ್ಕಾರ ಮತ್ತು ಆರೋಪಿಗಳು ಸಲ್ಲಿಸಿರುವ ಮೇಲ್ಮನವಿಗಳನ್ನು ಫೆಬ್ರವರಿ 13ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಮುಂದಿನ ವಿಚಾರಣೆಯ ದಿನ ಈ ವಿಷಯದಲ್ಲಿ ಯಾವುದೇ ಮುಂದೂಡಿಕೆ ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ
ಸೈಫ್ ಅಲಿ ಖಾನ್ ಪುತ್ರನ ಕೋಣೆಗೆ ನುಗ್ಗಿ 1 ಕೋಟಿ ಡಿಮ್ಯಾಂಡ್ ಮಾಡಿದ್ದ ದಾಳಿಕೋರ!
ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ 6 ಬಾರಿ ಇರಿದ ದಾಳಿಕೋರ ಸೈಫ್ 4 ವರ್ಷದ ಪುತ್ರನ ಕೋಣೆಗೆ ನುಗ್ಗಿ 1 ಕೋಟಿ ರೂ.ಗೆ ಡಿಮ್ಯಾಂಡ್ ಮಾಡಿದ್ದ ಎಂಬ ಸ್ಫೋಟಕ ವಿಷಯವನ್ನು ಮನೆಯ ಸಿಬ್ಬಂದಿ ಬಹಿರಂಗಪಡಿಸಿದ್ದಾರೆ. ಗುರುವಾರ ಮುಂಜಾನೆ ಸೈಫ್




