ದೇಶ-ವಿದೇಶ
ಮಾಜಿ ಆರ್ ಬಿಐ ಗವರ್ನರ್ ಶಶಿಕಾಂತ್ ದಾಸ್ ಪ್ರಧಾನಿ ಪ್ರಿನ್ಸಿಪಾಲ್ ಸೆಕ್ರೆಟರಿ ಆಗಿ ನೇಮಕ
ರಿಸರ್ಬ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ಶಶಿಕಾಂತ್ ದಾಸ್ ಅವರನ್ನು ಪ್ರಧಾನಿ ಅವರ ಪ್ರಿನ್ಸಿಪಾಲ್ ಸೆಕ್ರೆಟರಿ ಆಗಿ ನೇಮಕ ಮಾಡಲಾಗಿದೆ. ಕೇಂದ್ರ ಸಂಪುಟ ನೇಮಕಾತಿ ಸಮಿತಿ ಶನಿವಾರ ಈ ಆದೇಶ ಹೊರಡಿಸಿದ್ದು, ಪ್ರಧಾನಿ ಆರ್ಥಿಕ ಸಲಹೆಗಾರರಲ್ಲಿ ಒಬ್ಬರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದೆ. ಇದೇ ವೇಳೆ ನೀತಿ ಆಯೋಗದ ಸಿಇಒ ಸುಬ್ರಹ್ಮಣ್ಯಂ ಅವರ ಅಧಿಕಾರಾವಧಿಯನ್ನು ಒಂದು ವರ್ಷದ ಮಟ್ಟಿಗೆ ವಿಸ್ತರಿಸಲಾಗಿದೆ. 1987ರ ಐಎಎಸ್ ಬ್ಯಾಚ್ ನ ಸುಬ್ರಹ್ಮಣ್ಯಂ ಐಎಎಸ್
ಕೇರಳದಲ್ಲಿ ಜಿಎಸ್ ಟಿ ಅಧಿಕಾರಿ ಸೇರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಸೋದರಿ ಹಾಗೂ ತಾಯಿಯ ಜೊತೆ ಜಿಎಸ್ ಟಿ ಹೆಚ್ಚುವರಿ ಕಮಿಷನರ್ ಅವರ ಶವ ಕೊಳೆತ ಸ್ಥಿತಿಯಲ್ಲಿ ಕೇರಳದ ಕೊಚ್ಚಿಯ ಮನೆಯೊಂದರಲ್ಲಿ ಪತ್ತೆಯಾಗಿದೆ. ಜಾರ್ಖಂಡ್ ಮೂಲದ 44 ವರ್ಷದ ಮನೀಶ್ ವಿಜಯ್ ಸುಂಕ ಇಲಾಖೆಯಲ್ಲಿ ಹೆಚ್ಚುವರಿ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಿಜಯ್,
ತೆಲಂಗಾಣದಲ್ಲಿ ಸುರಂಗ ಕುಸಿದು ಸಿಲುಕಿರುವ 30 ಕಾರ್ಮಿಕರು!
ಸುರಂಗ ಮಾರ್ಗ ಕುಸಿದು ಬಿದ್ದ ಪರಿಣಾಮ 30 ಕಾರ್ಮಿಕರು ಸಿಲುಕಿರುವ ಘಟನೆ ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ. ಶ್ರೀಶೈಲ ಡ್ಯಾಮ್ ಬಳಿ ನೀರು ಸೋರಿಕೆ ಆಗುತ್ತಿದೆ ಎಂಬ ಕಾರಣಕ್ಕೆ ದುರಸ್ಥಿ ಕಾರ್ಯಕ್ಕೆ ಕಾರ್ಮಿಕರು ತೆರಳಿದ್ದಾಗ ಸುರಂಗದ ಒಂದು ಭಾಗ ಕುಸಿದಿದೆ
ದಿಲ್ಲಿ ಸರ್ಕಾರದ 7 ಸಚಿವರಲ್ಲಿ 5 ಮಂದಿಯ ಮೇಲಿದೆ ಕ್ರಿಮಿನಲ್ ಕೇಸು!
ದೆಹಲಿಯಲ್ಲಿ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ಏಳು ಸಚಿವರಲ್ಲಿ ಮುಖ್ಯಮಂತ್ರಿ ಸೇರಿದಂತೆ ಐವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಹೇಳಿದೆ. ೨೦೨೫ರ ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಸಚಿವರು ಸಲ್ಲಿಸಿದ ಅಫಿಡವಿಟ್ಗಳನ್ನು ಆಧರಿಸಿ ಈ ಅಧ್ಯಯನ
ಭಾರತದ ಚುನಾವಣೆಗೆ ಅಮೆರಿಕದ ಹಣ ಯಾಕೆ: ಶ್ವೇತಪತ್ರ ಹೊರಡಿಸಲು ಕಾಂಗ್ರೆಸ್ ಆಗ್ರಹ
ನವದೆಹಲಿ: ಭಾರತದಲ್ಲಿ ಮತದಾನವನ್ನು ಉತ್ತೇಚಿಸುವ ನಿಟ್ಟಿನಲ್ಲಿ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಅಮೆರಿಕ ಸರ್ಕಾರದ ನೆರವಿನ ಕುರಿತು ಮೋದಿ ಸರ್ಕಾರವು ಶ್ವೇತಪತ್ರ ಹೊರಡಿಸಲಿ ಎಂದು ಕಾಂಗ್ರೆಸ್ ಗುರುವಾರ ಆಗ್ರಹಿಸಿದೆ. ಭಾರತದಲ್ಲಿ ನಡೆಯುವ ಮತದಾನಕ್ಕೆ ನಾವು 182 ಕೋಟಿ (21 ದಶಲಕ್ಷ ಡಾಲರ್)
ನ್ಯಾಯಾಧೀಶರ ವಿರುದ್ಧ ದೂರು ವಿಚಾರಣೆಗೆ ಅನುಮತಿ: ಲೋಕಪಾಲ ಆದೇಶಕ್ಕೆ ಸುಪ್ರೀಂ ತಡೆ
2013ರ ಲೋಕಾಯುಕ್ತ ಹಾಗೂ ಲೋಕಪಾಲ ಕಾಯ್ದೆಯಲ್ಲಿ ಹೈಕೋರ್ಟ್ ಹಾಲಿ ಜಡ್ಜ್‌ಗಳು ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಲಾಗಿದೆ. ಆದರೂ ಲೋಕಪಾಲರು ಹೈಕೋರ್ಟ್ ಜಡ್ಜ್‌ಗಳ ವಿರುದ್ಧ ವಿಚಾರಣೆಗೆ ಅನುಮತಿ ನೀಡುತ್ತಿರುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೈಕೋರ್ಟ್ ಹಾಲಿ ನ್ಯಾಯಾಧೀಶರ ವಿರುದ್ಧದ ದೂರುಗಳ
ತಂಗಿಯನ್ನು ಆರನೇ ಮದುವೆಯಾಗಲು ಒಪ್ಪದ್ದಕ್ಕೆ ಸ್ನೇಹಿತನ ಕೊಲೆ
ಮಧ್ಯಪ್ರದೇಶದ ಭೋಪಾಲ್ನಲ್ಲಿ ಐದು ಮಹಿಳೆಯರನ್ನು ವಿವಾಹವಾಗಿದ್ದ ವ್ಯಕ್ತಿಯೊಬ್ಬ ಸ್ನೇಹಿತನ ತಂಗಿಯನ್ನು ಮದುವೆಯಾಗಲು ಬಯಸಿದಾಗ ನಿರಾಕರಿಸಿದ್ದಕ್ಕೆ ಆತನನ್ನೇ ಕೊಲೆ ಮಾಡಿದ್ದಾನೆ. ಸ್ನೇಹಿತ ಸಂದೀಪ್ ಪ್ರಜಾಪತಿ ಕೊಲೆಯಾದವ. ಕೊಲೆ ಆರೋಪಿ ವಿಕಾಸ್ ಜೈಸ್ವಾಲ್ ಅಲಿಯಾಸ್ ಅವಕೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯ ನಂತರ ತಲೆಮರೆಸಿಕೊಂಡಿದ್ದ
ಗಂಗಾರಾಮ್ ಆಸ್ಪತ್ರೆಯಲ್ಲಿ ಸೋನಿಯಾ ಗಾಂಧಿಗೆ ಚಿಕಿತ್ಸೆ
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 78 ವರ್ಷ ದಾಟಿದ ಸೋನಿಯಾ ಗಾಂಧಿ ಅವರು ವಯೋ ಸಹಜ ಆರೋಗ್ಯ ಸಮಸ್ಯೆ ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಕಿತ್ಸೆಯಿಂದ ಸದ್ಯ ಚೇತರಿಸಿಕೊಂಡಿದ್ದು, ನಿಗದಿತ
ಚಾಂಪಿಯನ್ಸ್ ಟ್ರೋಫಿ: ಗಿಲ್ ಸತತ 2ನೇ ಶತಕದೊಂದಿಗೆ ಬಾಂಗ್ಲಾವನ್ನು ಮಣಿಸಿದ ಭಾರತ
ಶುಭಮನ್ ಗಿಲ್ ಸಿಡಿಸಿದ ಶತಕದ ಮೂಲಕ ಭಾರತ ತಂಡ 6 ವಿಕೆಟ್ ಗಳಿಂದ ಬಾಂಗ್ಲಾದೇಶ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ದುಬೈನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡವನ್ನು 49.4 ಓವರ್
ಹಿಮಾಚಲ ಪ್ರದೇಶದಲ್ಲಿ ಪ್ರಕೃತಿ ವಿಕೋಪ: ಅಧ್ಯಯನ ವರದಿ ಎಚ್ಚರಿಕೆ
ಚಂಡೀಗಢ: ರಮಣೀಯ ಭೂದೃಶ್ಯಗಳನ್ನು ಹೊಂದಿರುವ ಹಿಮಾಚಲದ ಅರ್ಧ ರಾಜ್ಯವು ನೈಸರ್ಗಿಕ ಪ್ರಕೋಪಗಳಿಂದ ಜರ್ಝರಿತವಾಗುವ ಅಪಾಯ ಹಿಂದೆಂದಿಗಿಂತ ಈಗ ಹೆಚ್ಚಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ (ರೋಪರ್) ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ಹಿಮಾಚಲ ಪ್ರದೇಶದ ಶೇ. 40 ರಷ್ಟು ಪ್ರದೇಶವು ಭೂಕುಸಿತ, ಪ್ರವಾಹ




