Menu

ಶಿವಲಿಂಗದ ಮೇಲೆ ಯುಪಿ ಸಿಎಂ ಮನೆ: ನೆಲಸಮಕ್ಕೆ ಅಖಿಲೇಶ್ ಆಗ್ರಹ

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧಿಕೃತ ನಿವಾಸದ ಕೆಳಗೆ ಶಿವಲಿಂಗವಿದೆ ಮತ್ತು ಅದನ್ನು ಉತ್ಖನನ ಮಾಡಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್  ಹೇಳಿದ್ದಾರೆ. ಲಕ್ನೋದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, ಲಕ್ನೋದ ಮುಖ್ಯಮಂತ್ರಿ ನಿವಾಸದ ಕೆಳಗೆ ಶಿವಲಿಂಗವಿದೆ. ಅದನ್ನು ಸಹ ಉತ್ಖನನ ಮಾಡಬೇಕು ಎಂದು ಆಗ್ರಹ ಮಾಡಿದರು. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಪುರಾತತ್ವ ಸ್ಥಳಗಳ ಸಮೀಕ್ಷೆಗಳಿಂದ ಉಂಟಾಗಿರುವ ರಾಜಕೀಯ ಉದ್ವಿಗ್ನತೆಯ ಮಧ್ಯೆ ಅಖಿಲೇಶ್

ಖ್ಯಾತ ನಟಿಯ ಕಾರು ಹರಿದು ಒಬ್ಬ ಕಾರ್ಮಿಕ ಸಾವು, ಹಲವರಿಗೆ ಗಾಯ

ಮರಾಠಿ ಚಿತ್ರದ ಖ್ಯಾತ ನಟಿ ಕಾರು ಹರಿದ ಪರಿಣಾಮ ಒಬ್ಬ ಕಾರ್ಮಿಕ ಮೃತಪಟ್ಟು ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಮುಂಬೈನಲ್ಲಿ ಸಂಭವಿಸಿದೆ. ಮರಾಠಿ ಚಿತ್ರದ ಖ್ಯಾತ ನಟಿ ಉರ್ಮಿಳಾ ಕೊತಾರೆ ಕಾಂಡಿವಿಲ್ಲಿ ಬಳಿ ಶೂಟಿಂಗ್ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಈ

6 ದಿನದಿಂದ ಬೋರ್ ವೆಲ್ ನಲ್ಲಿ ಸಿಲುಕಿರುವ 3 ವರ್ಷದ ಬಾಲಕಿ!

6 ದಿನಗಳ ಕಳೆದರೂ ತೆರೆದ ಕೊಳವೆ ಬಾವಿಯಲ್ಲಿ ಸಿಲುಕಿರುವ 3 ವರ್ಷದ ಬಾಲಕಿ ರಕ್ಷಣೆಗೆ ಪ್ರಯತ್ನಗಳು ಮುಂದುವರಿಯುತ್ತಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಕಟ್ ಪುತಲಿ ಎಂಬಲ್ಲಿ ಸೋಮವಾರ 3 ವರ್ಷದ ಬಾಲಕಿ ಚೇತನಾ 700 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದು,

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಂಚಭೂತಗಳಲ್ಲಿ ಲೀನ

ದೇಶಕಂಡ ಅಪರೂಪದ ರಾಜಕಾರಣಿ ಹಾಗೂ ದೇಶದ ಶ್ರೇಷ್ಠ ಅರ್ಥ ಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರ ಅಂತ್ಯ ಸಂಸ್ಕಾರ ಇಂದು ದೆಹಲಿಯ ನಿಗಮ ಬೋಧ್ ಘಾಟ್‌ನಲ್ಲಿ ನಡೆದಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಮತ್ತು ಸಿಖ್ ಧರ್ಮದ ಸಂಪ್ರದಾಯದಂತೆ ಸಿಂಗ್ ಅವರ ಅಂತಿಮ ಸಂಸ್ಕಾರ

ಮನಮೋಹನ್ ಸಿಂಗ್ ಸ್ಮಾರಕ ನಿರ್ಮಾಣಕ್ಕೆ ಭೂಮಿ ನೀಡಲು ಕೇಂದ್ರ ಒಪ್ಪಿಗೆ

ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರ ಸ್ಮಾರಕ ನಿರ್ಮಾಣಕ್ಕೆ ಭೂಮಿ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಸ್ಮಾರಕಕ್ಕೆ ವಿಚಾರವಾಗಿ ಕೇಂದ್ರ ಗೃಹ ಸಚಿವಾಲಯ ಪ್ರಕಟಣೆ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಮುಖ್ಯಸ್ಥರಿಂದ ಮನಮೋಹನ್

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತಿಮ ಯಾತ್ರೆ: ಅಂತಿಮ ನಮನ ಸಲ್ಲಿಸಿದ ಸಿಎಂ ಡಿಸಿಎಂ!

ಮಾಜಿ ಪ್ರಧಾನಿ ಹಾಗೂ ಆರ್ಥಿಕ ತಜ್ಞ ಡಾ.ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ದೆಹಲಿಯ ನಿಗಮಬೋಧ್ ಘಾಟ್‌ನಲ್ಲಿ ನೆರವೇರಲಿದೆ. ಅಂತ್ಯಕ್ರಿಯೆಗೆ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮನಮೋಹನ್ ಸಿಂಗ್ ನಿಧನಕ್ಕೆ ಇಡೀ ದೇಶವೇ ಕಂಬನಿ

6 ಬಾರಿ ಛಡಿಯೇಟು ಹೊಡೆದುಕೊಂಡ ಬಿಜೆಪಿ ನಾಯಕ ಅಣ್ಣಾಮಲೈ!

ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಶುಕ್ರವಾರ ಬೆಳಿಗ್ಗೆ ಕೊಯಮತ್ತೂರಿನಲ್ಲಿ ಛಾಟಿಯಿಂದ ಹೊಡೆದುಕೊಂಡು ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದಾರೆ. ಕೊಯಮತ್ತೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯದಲ್ಲಿ ಡಿಎಂಕೆ ಪಕ್ಷದ ಆಡಳಿತದಿಂದ ಕಾನೂನು ಮತ್ತು ಸುರಕ್ಷತೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದ ಅಣ್ಣಾಮಲೈ ಶುಕ್ರವಾರ ಬೆಳಿಗ್ಗೆ ೬ ಬಾರಿ

ಮನಮೋಹನ್ ಸಿಂಗ್ ನಿಂದಿಸಿದ್ದ ಪಾಕ್ ಪ್ರಧಾನಿಗೆ ಮೋದಿ ತರಾಟೆ!

ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನಿಂದಿಸಿದ್ದ 2013ರಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರನ್ನು ನರೇಂದ್ರ ಮೋದಿ ಸಾರ್ವಜನಿಕವಾಗಿಯೇ ಟೀಕಿಸಿದ್ದರು. ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಪತ್ರಕರ್ತರ ಜತೆಗೆ ನಡೆಸಿದ ಸಭೆಯಲ್ಲಿ ಷರೀಫ್ ಅವರು ಪ್ರಧಾನಿ ಸಿಂಗ್ ಅವರನ್ನು `ಹಳ್ಳಿಯ ಮಹಿಳೆ’

ದೇಣಿಗೆ ಸಂಗ್ರಹದಲ್ಲಿ ಬಿಜೆಪಿ ನಂ.1, ಕಾಂಗ್ರೆಸ್ ಹಿಂದಿಕ್ಕಿದ ಬಿಆರ್ ಎಸ್!

ದೇಣಿಗೆ ಪಡೆಯುವ ರಾಜಕೀಯ ಪಕ್ಷಗಳ ಪಟ್ಟಿಯಲ್ಲಿ ಬಿಜೆಪಿ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ಕಾಂಗ್ರೆಸ್ ಹಿಂದಿಕ್ಕಿದ ಕೆಸಿ ಚಂದ್ರಶೇಖರ್ ನೇತೃತ್ವದ ಬಿಆರ್ ಎಸ್ ಪಕ್ಷ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. 2023-24ನೇ ಸಾಲಿನಲ್ಲಿ ರಾಜಕೀಯ ಪಕ್ಷಗಳಿಗೆ 20 ಸಾವಿರ ಕೋಟಿ ರೂ. ದೇಣಿಗೆ ಮೊತ್ತ

ಮನೆಯಲ್ಲೇ ಪ್ರಜ್ಞಾಹೀನರಾದ ಮನಮೋಹನ್ ಸಿಂಗ್: ಕೊನೆ ಕ್ಷಣಗಳ ಬಗ್ಗೆ ವೈದ್ಯರು ಹೇಳಿದ್ದೇನು?

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ದಿಢೀರನೆ ಪ್ರಜ್ಞೆ ಕಳೆದುಕೊಂಡಿದ್ದರಿಂದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು ಎಂದು ದೆಹಲಿಯ ಏಮ್ಸ್ ವೈದ್ಯರು ತಿಳಿಸಿದ್ದಾರೆ. 92 ವರ್ಷದ ಮನಮೋಹನ್ ಸಿಂಗ್ ಹಲವು ದಿನಗಳಿಂದ ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಗುರುವಾರ ರಾತ್ರಿ ಏಕಾಏಕಿ ಪ್ರಜ್ಞಾಹೀನರಾಗಿದ್ದರಿಂದ