ದೇಶ-ವಿದೇಶ
ಕೋಲಾರದ ನಾಲ್ವರು ತಮಿಳುನಾಡಿನಲ್ಲಿ ಅಪಘಾತಕ್ಕೆ ಬಲಿ
ತಮಿಳುನಾಡಿನ ರಾಣಿಪೇಟೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ಮತ್ತು ಟ್ಯಾಂಕರ್ ಡಿಕ್ಕಿಯಾಗಿ ಕೋಲಾರ ಶ್ರೀನಿವಾಸಪುರ ಸೀಗೆಹಳ್ಳಿಯ ನಾಲ್ವರು ಬಲಿಯಾಗಿದ್ದಾರೆ. ಮಾರುಕಟ್ಟೆಗೆ ತರಕಾರಿ ಒಯ್ಯುತ್ತಿದ್ದ ಟ್ಯಾಂಕರ್ ಇದಾಗಿದ್ದು, ಭೀಕರ ಅಪಘಾತದಲ್ಲಿ ಮೃತಪಟ್ಟ ನಾಲ್ವರನ್ನು ಕ್ಯಾಂಟರ್ ಚಾಲಕ ಮಂಜುನಾಥ್, ಕ್ಲೀನರ್ ಶಂಕರ್, ಸಹಾಯಕ ಸೋಮಶೇಖರ್, ವೆಂಕಟೇಶ್ ನಗರ ಗ್ರಾಮದ ರೈತ ಕೃಷ್ಣಪ್ಪ ಎಂದು ಗುರುತಿಸಲಾಗಿದೆ. ಕೆಎಸ್ಆರ್ಟಿಸಿ ಬಸ್ ಚಾಲಕ ಕೂಡ ಮೃತಪಟ್ಟಿದ್ದಾರೆ. ಬಸ್‌ನಲ್ಲಿದ್ದ ಓಂ ಶಕ್ತಿ ಭಕ್ತರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ವೇಲೂರು ಸಿಎಂಸಿ ಆಸ್ಪತ್ರೆಗೆ, ರತ್ನಗಿರಿ ಮೆಡಿಕಲ್
ಲಾಸ್ ಏಂಜಲೀಸ್‌ನಲ್ಲಿ ಕಾಳ್ಗಿಚ್ಚು ಆರ್ಭಟಕ್ಕೆ ಐವರು ಬಲಿ
ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಭೀಕರ ಕಾಳ್ಗಿಚ್ಚು ಕಾ ಣಿಸಿಕೊಂಡಿದ್ದು, ಐವರು ಬಲಿಯಾಗಿದ್ದಾರೆ. ಐದು ಎಕರೆ ಪ್ರದೇಶದಲ್ಲಿ ಕಾಳ್ಗಿಚ್ಚು ಆವರಿಸಿದ್ದು, ಪ್ರಾಣಿ, ಪಕ್ಷಿಗಳು ಬೆಂಕಿಗೆ ಆಹುತಿಯಾಗಿವೆ. ಇಡೀ ಪ್ರದೇಶ ಬೆಂಕಿ ಮತ್ತು ದಟ್ಟ ಹೊಗೆಯಿಂದ ಆವೃತವಾಗಿದೆ. ಲಾಸ್ ಏಂಜಲೀಸ್ ಪಕ್ಕದ ಪೆಸಿಫಿಕ್ ಪ್ಯಾಲಿಸೈಡ್ಸ್
ತಿರುಪತಿಯಲ್ಲಿ ಭಕ್ತರ ನೂಕುನುಗ್ಗಲಿಂದ ಕಾಲ್ತುಳಿತಕ್ಕೆ ಬಲಿಯಾದವರ ಸಂಖ್ಯೆ 7ಕ್ಕೆ ಏರಿಕೆ
ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಷ್ಣು ನಿವಾಸಂನಲ್ಲಿ ಶುಕ್ರವಾರದಿಂದ 10 ದಿನ ವೈಕುಂಠ ದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ಭಕ್ತರು ನೂಕು ನುಗ್ಗಲು ಉಂಟು ಮಾಡಿದ್ದರಿಂದ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ
ಮಳೆ ಪ್ರವಾಹದಿಂದ ತತ್ತರಿಸುತ್ತಿದೆ ಮರುಭೂಮಿ ಸೌದಿ ಅರೇಬಿಯಾ
ಮರುಭೂಮಿ ಸೌದಿ ಅರೇಬಿಯಾದಲ್ಲಿ ಮಂಗಳವಾರದಿಂದ ಭಾರಿ ಮಳೆಯಾಗುತ್ತಿದ್ದು, ಪ್ರವಾಹದಿಂದ ತತ್ತರಿಸಿ ಹೋಗಿದೆ. ಜೆಡ್ಡಾ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶ, ಮೆಕ್ಕಾ ಮತ್ತು ಮದೀನಾದಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿ ಪ್ರವಾಹದಿಂದ ಕಂಗೆಟ್ಟಿದೆ. ಹಲವು ನಗರ ಪ್ರದೇಶಗಳು ಜಲಾವೃತಗೊಂಡು ಜನ ತತ್ತರಿಸಿ
ಊಟಿಯಲ್ಲಿ ಶೂನ್ಯ ತಾಪಮಾನ: ಹೆಪ್ಪುಗಟ್ಟಿವೆ ಜಲಮೂಲ
ಪ್ರವಾಸಿ ತಾಣವಾಗಿರುವ ಊಟಿಯಲ್ಲಿ ತಾಪಮಾನ ಶೂನ್ಯಕ್ಕೆ ತಲುಪಿದೆ. ಎವಲಾಂಚ್ ಪ್ರದೇಶದಲ್ಲಿ ತಾಪಮಾನ -2 ಡಿಗ್ರಿಗೆ ಕುಸಿದಿದೆ. ಊಟಿ, ಕಂಥಲ್, ಥಲೈಕುಂಥ ಪ್ರದೇಶಗಳಲ್ಲಿನ ಜಲಮೂಲಗಳು ಹೆಪ್ಪುಗಟ್ಟಿವೆ. ಇದರಿಂದ ಜನರು ಪರದಾಡುವಂತಾಗಿದೆ. ವಿಪರೀತ ಚಳಿಯಿಂದಾಗಿ ಟೀ ತೋಟಗಳಿಗೆ ಹಾನಿಯಾಗುತ್ತಿದ್ದು, ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ. ಚಳಿಯು ಇನ್ನೂ
ಭಿಕ್ಷುಕನೊಂದಿಗೆ ಪ್ರೇಮಾಂಕುರ, ಪತಿ, ಮಕ್ಕಳ ತೊರೆದು ಮಹಿಳೆ ಪರಾರಿ
ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಗಂಡ ಮತ್ತು 6 ಮಕ್ಕಳೊಂದಿಗೆ ಸಂಸಾರ ಮಾಡುತ್ತಿದ್ದ ಮಹಿಳೆ ಭಿಕ್ಷುಕನ ಪ್ರೇಮಪಾಶಕ್ಕೆ ಸಿಲುಕಿ ಆತನ ಜೊತೆ ಪರಾರಿಯಾಗಿದ್ದಾಳೆ. 36 ವರ್ಷದ ರಾಜೇಶ್ವರಿ ಗಂಡ ಮತ್ತು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಳು. ಆಗಾಗ ಮನೆ ಬಳಿ ಬರುತ್ತಿದ್ದ ಭಿಕ್ಷುಕನ
ಇಸ್ರೋಗೆ ವಿ ನಾರಾಯಣನ್ ನೂತನ ಅಧ್ಯಕ್ಷ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಹೊಸ ಅಧ್ಯಕ್ಷ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿಕೇಂದ್ರ ಸರ್ಕಾರವು ವಿ ನಾರಾಯಣನ್ ಅವರನ್ನು ನೇಮಿಸಿದೆ. ಜನವರಿ 14 ರಂದು ಪ್ರಸ್ತುತ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ವಿ ನಾರಾಯಣನ್ ಅವರ
ಸಂಕ್ರಾಂತಿ ಸಂಭ್ರಮಕ್ಕೆ ಬೆಂಗಳೂರು ಚೆನ್ನೈ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು
ಮಕರ ಸಂಕ್ರಾಂತಿಗೆ ಕೆಎಸ್ಆರ್ ಬೆಂಗಳೂರು ಹಾಗೂ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಾಗುವುದು ಎಂದು ನೈಋತ್ಯ ರೈಲ್ವೆ ಘೋಷಿಸಿದೆ. ಬೆಂಗಳೂರು, ತೂತುಕುಡಿ, ಮೈಸೂರು ಮಧ್ಯೆಯೂ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಸಾಮಾಜಿಕ ಮಾಧ್ಯಮ ಎಕ್ಸ್
ಬಿಎಚ್ ಇಎಲ್ ಗೆ ಶ್ರೇಷ್ಠತಾ ಪುರಸ್ಕಾರ ಪ್ರದಾನ ಮಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ!
ನವದೆಹಲಿ: ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ (BHEL) ಕಂಪನಿಯ ‘ಉತ್ಕರ್ಷ ದಿವಸ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಕಳೆದ ಸಾಲಿನಲ್ಲಿ ಕಂಪನಿಯ ಅಭಿವೃಧಿಗೆ
ಫೆಬ್ರವರಿ 5 ದೆಹಲಿ ವಿಧಾನಸಭಾ ಚುನಾವಣೆ: ಫೆ.8ರಂದು ಮತ ಎಣಿಕೆ!
ಫೆಬ್ರವರಿ 5ರಂದು ಒಂದೇ ಹಂತದಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ದೆಹಲಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಒಂದೇ ಹಂತದಲ್ಲಿ 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸುವುದಾಗಿ ಘೋಷಿಸಿದರು. ಫೆಬ್ರವರಿ 5ರಂದು




