ದೇಶ-ವಿದೇಶ
ಭಾರತೀಯ ಸೇನೆಗೆ ಖಲಾಶ್ತಿಕೋವ್: ನಿಮಿಷದಲ್ಲಿ 700 ಬುಲೆಟ್ ಸಿಡಿಯುವ AK-203 ರೈಫಲ್!
ಲಕ್ನೋ: ಒಂದು ನಿಮಿಷದಲ್ಲಿ 700 ಬುಲೆಟ್ ಸಿಡಿಯುವ `ಖಾಲಾಶ್ತಿಕೋವ್’ ಸರಣಿಯ ಎಕೆ-203 ರೈಫಲ್ ಭಾರತೀಯ ಸೇನೆಗೆ ಶೀಘ್ರವೇ ಸೇರ್ಪಡೆಗೊಳ್ಳಲಿದೆ. ಉತ್ತರ ಪ್ರದೇಶದ ಅಮೇಥಿಯಲ್ಲಿ 800 ಮೀಟರ್ ವ್ಯಾಪ್ತಿಯಲ್ಲಿ 1 ನಿಮಿಷದಲ್ಲಿ 700 ಬುಲೆಟ್ ಸಿಡಿಯುವ ಈ ರೈಫಲ್ ಅನ್ನು ಭಾರತೀಯ ಸೇನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ಪರೀಕ್ಷೆಗೊಳಪಡಿಸಲಿದೆ. ಇಂಡೋ-ರಷ್ಯಾನ್ ರೈಫಲ್ಸ್ ಪ್ರವೇಟ್ ಲಿಮಿಟೆಡ್ ಕಂಪನಿ (IRRPL) ಎಕೆ-203 ರೈಫಲ್ ಅಭಿವೃದ್ಧಿಪಡಿಸಿದ್ದು, ಇದನ್ನು ಭಾರತದಲ್ಲಿ ಶೇರ್’ ಎಂದು ಹೆಸರಿಡಲಾಗಿದೆ. ಕಂಪನಿಯು ಅಭಿವೃದ್ಧಿಪಡಿಸಿದ
ಹನಿಟ್ರ್ಯಾಪ್ ಗೆ ಬಿದ್ದ 9 ಬೌದ್ಧ ಸನ್ಯಾಸಿಗಳ ಸನ್ಯಾಸತ್ವದಿಂದ ವಜಾ: ರಾಸಲೀಲೆ ಹಗರಣಕ್ಕೆ ಬೆಚ್ಚಿಬಿದ್ದ ಥಾಯ್ಲೆಂಡ್
ಬ್ಯಾಂಕಾಕ್: ಮಹಿಳೆಯೊಬ್ಬರ ಮೊಬೈಲ್ ನಲ್ಲಿ ಬೌದ್ಧ ಸನ್ಯಾಸಿಗಳ ರಾಸಲೀಲೆಯ ವೀಡಿಯೋ ಸೇರಿದಂತೆ 80,000ಕ್ಕೂ ಅಧಿಕ ಜನರ ನಗ್ನ ಫೋಟೊಗಳು ಪತ್ತೆಯಾದ ಘಟನೆ ಥಾಯ್ಲೆಂಡ್ ಬೆಚ್ಚಿಬಿದ್ದಿದೆ. ವಿಲಾವನ್ ಎಮ್ಹಾವತ್ (30) ಎಂಬ ಮಹಿಳೆಯ ಹನಿಟ್ರ್ಯಾಪ್ ಗೆ ಬಿದ್ದ ಸಾವಿರಾರು ಮಂದಿಯಲ್ಲಿ ಹಲವಾರು ಮಂದಿ
ಭಾರತ-ಪಾಕ್ ಗಡಿಯಲ್ಲಿ ಮೋಸ್ಟ್ ವಾಂಟೆಡ್ ಮಸೂದ್ ಅಜರ್ ಪತ್ತೆ!
ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಉಗ್ರ ಹಾಗೂ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಕಾಣಿಸಿಕೊಂಡಿದ್ದಾನೆ. ಭಾರತೀಯ ಗುಪ್ತಚರ ಸಂಸ್ಥೆಗಳು ಪಿಒಕೆ ಬಳಿಯ ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿರುವ ಬಹಾವಲ್ಪುರ್ ಭದ್ರಕೋಟೆಯಿಂದ 1,000 ಕಿ.ಮೀ
ಗಂಡು ಹಾವನ್ನು ಸಾಯಿಸಿದವನ ಕಚ್ಚಿ ಕೊಂದ ಹೆಣ್ಣು ಹಾವು
ಗಂಡು ಸಂಗಾತಿ ಹಾವನ್ನು ಕೊಂದವನ ಮನೆಗೆ ಬಂದ ಹೆಣ್ಣು ಹಾವು ಆತನಿಗೆ ಕಚ್ಚಿ ಕೊಂದು ಪ್ರತೀಕಾರ ತೀರಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಹೋರಾ ಗ್ರಾಮದ ನಿವಾಸಿ ಮನೋಜ್ ಅವರ ಮಗುವಿನ
ಯೆಮೆನ್ನಲ್ಲಿ ನಿಮಿಷಪ್ರಿಯಾಗೆ ಮರಣದಂಡನೆ: ವಿಚಾರಣೆ ಆಗಸ್ಟ್ 14ಕ್ಕೆ ಮುಂದೂಡಿದ ಸುಪ್ರೀಂ
ಕೇರಳದ ನರ್ಸ್ ನಿಮಿಷಾ ಪ್ರಿಯಾ ಯೆಮೆನ್ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಪ್ರಕರಣದ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 14ಕ್ಕೆ ಮುಂದೂಡಿದೆ. ಮರಣದಂಡನೆಯನ್ನು ತಡೆಯಲು ರಾಜತಾಂತ್ರಿಕ ಮತ್ತು ಕಾನೂನು ಪ್ರಯತ್ನಗಳಿಗೆ ಹೆಚ್ಚಿನ ಸಮಯವನ್ನು ನೀಡಲಾಗಿದೆ. ಜುಲೈ 16 ರಂದು ಜಾರಿಗೊಳಿಸಲು ನಿಗದಿಯಾಗಿದ್ದ ಮರಣದಂಡನೆಯು
ರಾಬರ್ಟ್ ವಾದ್ರಾ ವಿರುದ್ಧ ಇಡಿ ಚಾರ್ಜ್ಶೀಟ್ ಸಲ್ಲಿಕೆ
ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ವಿರುದ್ಧ ಹಣದ ಬಳಕೆಯ ಅಕ್ರಮ ಪ್ರಕರಣದಲ್ಲಿ ಇಡಿಯು ಚಾರ್ಜ್ಶೀಟ್ ಸಲ್ಲಿಸಿದೆ. ಹರಿಯಾಣದ ಗುಡ್ಗಾಂವ್ನ ಶಿಕೋಹ್ಪುರ್ (ಈಗ ಸೆಕ್ಟರ್ 83) ಪ್ರದೇಶದ 2008ರ ಫೆಬ್ರವರಿಯಲ್ಲಿ ನಡೆದ
ಮೋದಿ ಕನಸಿನ ಜನ್ ಧನ್ ಬಗ್ಗೆ ಜನರ ನಿರಾಸಕ್ತಿ: ಶೇ.35ರಷ್ಟು ಖಾತೆಗಳು ನಿಷ್ಕ್ರಿಯ
ನವದೆಹಲಿ: ಭಾರತದಲ್ಲಿ ಶೇ. 35ರಷ್ಟು ಜನ ತಮ್ಮ ಖಾತೆಗಳನ್ನು ಬಳಸದೆ ನಿಷ್ಕ್ರಿಯವಾಗಿರಿಸಿದ್ದಾರೆ ಎಂದು ವಿಶ್ವ ಬ್ಯಾಂಕ್ನ ಗ್ಲೋಬಲ್ ಫೈಂಡೆಕ್ಸ್ 2025 ವರದಿ ಬಹಿರಂಗಪಡಿಸಿದೆ. ಇದು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶೇ. 5ರಷ್ಟಿರುವ ನಿಷ್ಕ್ರಿಯ ಖಾತೆಗಳ ಸರಾಸರಿಗಿಂತ ಏಳು ಪಟ್ಟು ಹೆಚ್ಚಾಗಿದೆ. ಈ
ಬೆಂಗಳೂರಲ್ಲಿ ಎಸ್ಬಿಐಗೆ ವಂಚನೆ: ತಲೆಮರೆಸಿಕೊಂಡಿದ್ದ ಆರೋಪಿ 20 ವರ್ಷ ಬಳಿಕ ಇಂದೋರ್ನಲ್ಲಿ ಅರೆಸ್ಟ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರಿನ ಶಾಖೆಯೊಂದಕ್ಕೆ 8 ಲಕ್ಷ ರೂ. ವಂಚಿಸಿ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿಬಿಐ ಮಧ್ಯಪ್ರದೇಶದ ಇಂದೋರ್ನಲ್ಲಿ ಬಂಧಿಸಿದೆ. ಆಧುನಿಕ ಇಮೇಜ್ ಸರ್ಚ್ ಟೂಲ್ಗಳನ್ನು ಬಳಸಿಕೊಂಡು ಸಿಬಿಐ ಆರೋಪಿಯ ಜಾಡು ಪತ್ತೆ ಹಚ್ಚಿದೆ ಎಂಬುದು ಗಮನಾರ್ಹ.
ಬೆಂಗಳೂರು, ದೆಹಲಿ ಶಾಲೆಗಳಿಗೆ ಬಾಂಬ್ ಬೆದರಿಕೆ
ಬೆಂಗಳೂರಿನ ಆರ್ಆರ್ ನಗರ, ಕೆಂಗೇರಿ ಸೇರಿದಂತೆ ಒಟ್ಟು 40 ಶಾಲೆಗಳಿಗೆ ಹಾಗೂ ದೆಹಲಿಯ 50 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಚಾಮರಾಜಪೇಟೆ ವಿಸ್ಡಮ್ ಅಂತಾರಾಷ್ಟ್ರೀಯ ಶಾಲೆಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಶಾಲೆಯಲ್ಲಿದ್ದ 800 ಮಕ್ಕಳನ್ನು ಬೇರೆ ಕಟ್ಟಡಕ್ಕೆ ಶಿಫ್ಟ್ ಮಾಡಲಾಗಿದೆ.
ಐಷಾರಾಮಿ ಬಂಗಲೆಯಲ್ಲಿ ಬಾರ್, ಮಲೇಷ್ಯಾ ಹುಡುಗಿಯರು, ಸೀಕ್ರೆಟ್ ರೂಂ: ಮಂಗಳೂರಲ್ಲಿ ಉದ್ಯಮಿಗಳಿಗೆ 200 ಕೋಟಿ ವಂಚಿಸಿದಾತ ಅರೆಸ್ಟ್
ಮಂಗಳೂರು ಜಿಲ್ಲಾ ಪೊಲೀಸರು ಬೃಹತ್ ವಂಚನಾ ಜಾಲವೊಂದನ್ನು ಭೇದಿಸಿದ್ದು, ಉದ್ಯಮಿಗಳಿಗೆ ನೂರಾರು ಕೋಟಿ ಸಾಲ ಕೊಡಿಸುವುದಾಗಿ ನಂಬಿಸಿ ಕೋಟಿ ಕೋಟಿ ವಂಚನೆ ಮಾಡುತ್ತಿದ್ದ ವಂಚಕನನ್ನು ಬಂಧಿಸಿದ್ದಾರೆ. ವಂಚನೆಯ ಕಿಂಗ್ ಪಿನ್ ರೊನಾಲ್ಡ್ ಸಲ್ದಾನಾ ಬಂಧಿತ. ರೊನಾಲ್ಡ್ ಸಲ್ದಾನಾ ಕಾರ್ಯಾಚರಿಸುತ್ತಿದ್ದ ಜಪ್ಪಿನಮೊಗರು ಎಂಬಲ್ಲಿನ