Menu

ವೀಸಾ ನಿಯಮ ಉಲ್ಲಂಘಿಸಿ ಅಮೆರಿಕದಲ್ಲಿರುವ ವಿದೇಶಿ ಪ್ರಜೆಗಳ ಗಡಿಪಾರು

ಅಮೆರಿಕದ ವೀಸಾ ನಿಯಮಗಳನ್ನು ಉಲ್ಲಂಘಿಸಿ ವಾಸ್ತವ್ಯ ಹೂಡಿರುವ ಭಾರತ ಸೇರಿದಂತೆ ವಿದೇಶಿ ಪ್ರಜೆಗಳಿಗೆ ಅಮೆರಿಕ ಗಡಿಪಾರು ಎಚ್ಚರಿಕೆ ನೀಡಿದೆ. ವೀಸಾ ಅವಧಿ ಮೀರಿ ಉಳಿಯುವುದು ಮತ್ತು ಉಲ್ಲಂಘಿಸುವುದು ವೀಸಾ ರದ್ಧತಿ ಹಾಗೂ ಗಡೀಪಾರು ಸೇರಿದಂತೆ ಗಂಭೀರ ಕ್ರಮಗಳ ಎದುರಿಸುವಿಕೆಗೆ ಕಾರಣವಾಗಬಹುದು ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

ಭಾರತ ಸೇರಿದಂತೆ ವಿದೇಶಿ ರಾಷ್ಟ್ರಗಳವರು ವೀಸಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತನ್ನ ನೆಲದಲ್ಲಿರುವ ವಿದೇಶಿ ನಾಗರಿಕರಿಗೆ ಅಮೆರಿಕ ಸೂಚನೆ ನೀಡಿದೆ. ವೀಸಾ ಅವಧಿ ಮೀರಿದರೆ, ಅಂತಹ ವ್ಯಕ್ತಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಬಹುದು. ಗಡೀಪಾರು, ದಂಡ ಮತ್ತು ಭವಿಷ್ಯದಲ್ಲಿ ಅಮೆರಿಕ ಪ್ರವೇಶ ನಿಷೇಧವೂ ಸೇರಿರಬಹುದು ಎಂದು ತಿಳಿಸಿದೆ.

ವಿದೇಶದಲ್ಲಿ ವೀಸಾ ನಿಯಮಗಳನ್ನು ಉಲ್ಲಂಘಿಸಿದರೆ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಯಾವುದೇ ದೇಶದ ಕಾನೂನುಗಳನ್ನು ಗೌರವಿಸುವುದು ಮತ್ತು ವೀಸಾ ಅವಧಿಯೊಳಗೆ ಉಳಿಯುವುದು ಅತ್ಯಗತ್ಯ ಎಂದು ಅಮೆರಿಕ ಗೃಹ ಭದ್ರತಾ ಇಲಾಖೆಯ ವಕ್ತಾರರು ಹೇಳಿದ್ದಾರೆ.
ಭಾರತದಲ್ಲಿರುವ ಅಮೆರಿಕ ನಾಗರಿಕರಿಗೆ, ತಮ್ಮ ವೀಸಾ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಿದ್ದರೆ ವೀಸಾ ವಿಸ್ತರಣೆಗೆ ಅರ್ಜಿ ಸಲ್ಲಿಸುವಂತೆ ಯುಎಸ್ ರಾಯಭಾರ ಕಚೇರಿಯು ಸಲಹೆ ನೀಡಿದೆ. ಯುಎಸ್ ನಾಗರಿಕರಿಗೆ ತಮ್ಮ ಪ್ರಯಾಣ ಮತ್ತು ವಾಸಸ್ಥಾನದ ಯೋಜನೆಗಳನ್ನು ಕಾನೂನು ಚೌಕಟ್ಟಿನೊಳಗೆ ಇರಿಸಿಕೊಳ್ಳುವಂತೆ ತಿಳಿಸಿದೆ.

Related Posts

Leave a Reply

Your email address will not be published. Required fields are marked *