Menu

ಬೇಸಿಗೆ ಮಳೆಯಿಂದ ಬೆಂಗಳೂರಿನಲ್ಲಿ ಡೆಂಗ್ಯು, ಚಿಕನ್‌ ಗುನ್ಯ ಆತಂಕ

ಬೇಸಿಗೆ ಮಳೆಯ ಕಾರಣ ಬೆಂಗಳೂರಿನಲ್ಲಿ ಮತ್ತೆ ಡೆಂಗ್ಯು ಹಾಗೂ ಚಿಕುನ್ ಗುನ್ಯ ಭೀತಿ ಶುರುವಾಗಿದೆ‌‌. ಕಳೆದ ಮೂರು ತಿಂಗಳಲ್ಲಿ ನಗರದಲ್ಲಿ 910ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಳೆ ಬಂದ ಬಳಿಕ ಒಂದೇ ವಾರದಲ್ಲಿ 75ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ಕಳೆದ ಒಂದೇ ವಾರದಲ್ಲಿ 24 ಚಿಕುನ್ ಗುನ್ಯ ಪ್ರಕರಣಗಳು ಪತ್ತೆಯಾಗಿವೆ. ಜನವರಿಯಂದ ಇಲ್ಲಿಯವರೆಗೆ 260 ಚಿಕುನ್ ಗುನ್ಯ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಯೋಜನಾ ವಿಭಾಗದ ನಿರ್ದೇಶಕ ಅನ್ಸರ್ ಅಹಮ್ಮದ್ ತಿಳಿಸಿದ್ದಾರೆ.

ಈಗಾಗಲೇ ಜ್ವರ, ವೈರಲ್ ಫಿವರ್ ಎಂದು ಆಸ್ಪತ್ರೆಯತ್ತ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ತಪಾಸಣೆ ನಡೆಸಿದಾಗ ಜನರಲ್ಲಿ ಡೆಂಗ್ಯು ಹಾಗೂ ಚಿಕುನ್ ಗುನ್ಯ ಲಕ್ಷಣಗಳು ಪತ್ತೆಯಾಗುತ್ತಿವೆ. ಜನರು ಎಚ್ಚರವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಮನೆ ಸುತ್ತಮುತ್ತ ನೀರು ಸಂಗ್ರಹವಾಗದಂತೆ, ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಂಡು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಕೆಸಿ ಜನರಲ್ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದ ವೈದ್ಯ ಡಾ ಸುರೇಶ್ ಸಲಹೆ ನೀಡಿದ್ದಾರೆ.

ಈಡಿಸ್ ಈಜಿಪ್ಟಿ ಸೊಳ್ಳೆಯಿಂದ ಡೆಂಗ್ಯು ಹಾಗೂ ಚಿಕುನ್ ಗುನ್ಯ ಹರಡುತ್ತದೆ. ಈ ಸೊಳ್ಳೆಗಳ ಕಾಟ ಬೆಳಗಿನ ಹೊತ್ತು ಹೆಚ್ಚಾಗಿರುತ್ತದೆ, ಎಚ್ಚರ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ತೀವ್ರ ಜ್ವರ, ತಲೆನೋವು, ಸ್ನಾಯು ಮತ್ತು ಕೀಲು ನೋವು, ವಾಕರಿಕೆ ಮತ್ತು ವಾಂತಿ, ಗ್ರಂಥಿಗಳ ಉರಿಯೂತ, ದದ್ದು, ಆಯಾಸ, ಆಲಸ್ಯ ಡೆಂಗ್ಯುವಿನ ಮುಖ್ಯ ಲಕ್ಷಣಗಳಾಗಿವೆ. ಹಠಾತ್ ಆಗಿ ತೀವ್ರ ಜ್ವರ ಬರುವುದು, ಕೀಲು ನೋವು, ಕೀಲು ಊತ, ಸ್ನಾಯು ನೋವು, ತಲೆನೋವು, ದದ್ದು, ಆಯಾಸ, ವಾಕರಿಕೆ ಚಿಕುನ್ ಗುನ್ಯ ಲಕ್ಷಣಗಳಾಗಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *