Menu

KSRTC, BMTC ನೌಕರರ ಪಿಎಫ್‌ ಹಣ ಟ್ರಸ್ಟ್‌ಗೆ ಪಾವತಿಸುವಂತೆ ಆಗ್ರಹ

ಕೆಎಸ್ಆರ್​ಟಿಸಿ, ಬಿಎಂಟಿಸಿ ನೌಕರರ ಪಿಎಫ್‌ ಹಣವನ್ನು ಕಳೆದ ಒಂದು ವರ್ಷದಿಂದ ಪಿಎಫ್ ಟ್ರಸ್ಟ್​ಗೆ ಪಾವತಿ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಾರಿಗೆ ನೌಕರರು ಪಿಎಫ್ ಹಣಕ್ಕಾಗಿ ಅರ್ಜಿ ಸಲ್ಲಿಸಿದರೂ ಹಣ ಸಿಗದಂತಾಗಿದೆ. ನೌಕರರ ಪಿಎಫ್ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಾರಿಗೆ ನೌಕರರ ಮುಖಂಡ ಜಗದೀಶ್ ಆರೋಪಿಸಿದ್ದಾರೆ.

ನೌಕರರ ಸಂಬಳದಲ್ಲಿ ಪ್ರತಿ ತಿಂಗಳು ಸಾವಿರಾರು ರೂಪಾಯಿ ಪಿಎಫ್​​ಗಾಗಿ ಕಡಿತ ಮಾಡಲಾಗುತ್ತದೆ. ‌ಪಿಎಫ್ ಟ್ರಸ್ಟ್ ಗೆ ಪಾವತಿಸಬೇಕಿದ್ದ 3110 ಕೋಟಿ ರೂಪಾಯಿ ಹಣವನ್ನು ನಾಲ್ಕು ಸಾರಿಗೆ ನಿಗಮಗಳು ಬಾಕಿ ಉಳಿಸಿಕೊಂಡಿವೆ. ಪಿಎಫ್ ಟ್ರಸ್ಟ್​​ಗೆ ಪಾವತಿ ಮಾಡಬೇಕಿರುವ ಸಾವಿರಾರು ಕೋಟಿ ರೂಪಾಯಿ ಪಾವತಿಸಿ ಎಂದು ಸಾರಿಗೆ ನೌಕರರರು ನಾಲ್ಕು ಸಾರಿಗೆ ನಿಗಮಗಳ ಎಂಡಿಗಳನ್ನು ಆಗ್ರಹಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಹಣ ಪಾವತಿ ಮಾಡದ ಕಾರಣ ಪಿಎಫ್ ಟ್ರಸ್ಟ್ ನಾಲ್ಕು ನಿಗಮಗಳಿಗೆ ಪಾವತಿ ಮಾಡಬೇಕಿರುವ 3110 ಕೋಟಿ ರೂಪಾಯಿಗೆ ಶೇ 37 ರ ವರೆಗೆ ಬಡ್ಡಿ ವಿಧಿಸಲಿದೆ. ಕೆಎಸ್ಆರ್ಟಿಸಿ- 891 ಕೋಟಿ ರೂ, ಬಿಎಂಟಿಸಿ-958 ಕೋಟಿ ರೂ, ಎನ್ಡಬ್ಲೂಕೆಆರ್ಟಿಸಿ- 1184 ಕೋಟಿ ರೂಪಾಯಿ ಹಾಗೂ ಕೆಕೆಆರ್ಟಿಸಿ- 76 ಕೋಟಿ ರೂ. ಸೇರಿ ಒಟ್ಟು3110 ಕೋಟಿ ರೂಪಾಯಿ ಬಾಕಿಯಿದ್ದು, ದಿನದಿಂದ ದಿನಕ್ಕೆ ಬಡ್ಡಿ ಪ್ರಮಾಣ ಹಚ್ಚಳವಾಗುತ್ತಲೇ ಇದೆ ಎನ್ನಲಾಗಿದೆ.

ಸಾರಿಗೆ ನೌಕರರ ಪಿಎಫ್ ಹಣವನ್ನು  ಟ್ರಸ್ಟ್​ಗೆ ಪಾವತಿ ಮಾಡಲು ರಾಜ್ಯ ಸರ್ಕಾರ ಎರಡು ಸಾವಿರ ಕೋಟಿ ಸಹಾಯಧನ ನೀಡಲು ಗ್ರೀನ್ ಸಿಗ್ನಲ್ ನೀಡಿದೆ.  ಪಿಎಫ್ ಟ್ರಸ್ಟ್​​ಗೆ  ಹಂತ ಹಂತವಾಗಿ ಪಾವತಿ ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ. ಎನ್​ವಿ ಪ್ರಸಾದ್ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *