Menu

ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ಭಾರತದ ಶೇ 30 ಸುಂಕ ವಾಪಸ್‌ಗೆ ಆಗ್ರಹ

ಕಳೆದ ನವೆಂಬರ್‌ನಲ್ಲಿ ಅಮೆರಿಕದ ದ್ವಿದಳ ಧಾನ್ಯಗಳ ಬೆಳೆಗಳ ಮೇಲೆ ಭಾರತ ಶೇ. 30 ಸುಂಕ ವಿಧಿಸಿರುವುದನ್ನು ಕಡಿಮೆ ಮಾಡಲು ಮಾತುಕತೆ ನಡೆಸುವಂತೆ ಉತ್ತರ ಡಕೋಟಾ ಮತ್ತು ಮೊಂಟಾನಾ ಸೆನೆಟರ್‌ಗಳು ಅಲ್ಲಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರಿಗೆ ಒತ್ತಾಯಿಸಿದ್ದಾರೆ.

ಮೊಂಟಾನಾ ಮತ್ತು ಉತ್ತರ ಡಕೋಟಾ ದ್ವಿದಳ ಧಾನ್ಯಗಳ ಬೆಳೆಯುವ ಎರಡು ಪ್ರಮುಖ ತಾಣಗಳು. ಭಾರತವು ವಿಶ್ವದ ದ್ವಿದಳ ಧಾನ್ಯ ಸೇವನೆಯ ಶೇ. 27ರಷ್ಟು ಅತಿದೊಡ್ಡ ಗ್ರಾಹಕ. ಅಮೆರಿಕದಿಂದ ರಫ್ತು ಮಾಡುವ ಹಳದಿ ಬಟಾಣಿಗಳ ಮೇಲೆ ಭಾರತ ಶೇ. 30 ಸುಂಕ ವಿಧಿಸುವ ಮೊದಲು ಸುಂಕ ರಹಿತವಾಗಿ ಭಾರತಕ್ಕೆ ರಫ್ತು ಮಾಡಲು ಅವಕಾಶವಿತ್ತು. ಈ ವಿಚಾರದಲ್ಲಿ ಭಾರತದ ಜೊತೆ ಮಾತುಕೆ ನಡೆಸಿದರೆ ಭಾರತದಲ್ಲಿನ ಅಮೇರಿಕನ್ ಉತ್ಪಾದಕರು ಮತ್ತು ಗ್ರಾಹಕರಿಗೆ ಪ್ರಯೋಜನವಾಗ ಬಹುದು. ಎಂದು ಸೆನೆಟರ್‌ಗಳು ಟ್ರಂಪ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಡೊನಾಲ್ಡ್ ಟ್ರಂಪ್‌ ಎರಡನೇ ಬಾರಿ ಅಧಿಕಾರಕ್ಕೆ ಬಂದ ಆರಂಭದಲ್ಲಿ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಶೇ. 25 ಸುಂಕ ವಿಧಿಸಿದ್ದರು. ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಪ್ರತಿಯಾಗಿ 25 ದಂಡ ರೂಪದ ಸುಂಕ ಹೇರಿದ್ದರು. ಈ ನಿರ್ಧಾರದಿಂದ ಭಾರತದ ಕೆಲವು ವಸ್ತುಗಳಿಗೆ ಈಗ ಶೇ. 50 ಸುಂಕ ಪಾವತಿಸುವಂತಾಗಿದೆ.

Related Posts

Leave a Reply

Your email address will not be published. Required fields are marked *