ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಮಧ್ಯಾಹ್ನದ ನಂತರ ಚುರುಕುಗೊಂಡಿದ್ದು, ಮಧ್ಯಾಹ್ನ 5 ಗಂಟೆ ವೇಳೆಗೆ 57.70ರಷ್ಟು ಮತದಾನ ದಾಖಲಾಗಿದೆ.
ದೆಹಲಿಯಲ್ಲಿ ಮಧ್ಯಾಹ್ನ 11 ಗಂಟೆಯವರೆಗೂ ನಿಧಾನಗತಿಯಲ್ಲಿ ನಡೆದ ಮತದಾನ ಮಧ್ಯಾಹ್ನದ ನಂತರ ಚುರುಕುಗೊಂಡಿದ್ದು, ಸಂಜೆ ವೇಳೆಗೆ ಉತ್ತಮ ಮತದಾನ ದಾಖಲಾಗಿದೆ.
ಸೆಂಟ್ರಲ್ 55.24 ಪೂರ್ವ 59.98, ನವದೆಹಲಿ 57.24, ಉತ್ತರ 57.27, ಈಶಾನ್ಯ 63.83, ವಾಯುವ್ಯ 58.05, ಶಹದಾರ 61.35, ದಕ್ಷಿಣ 51.37, ಆಗ್ನೇಯ 57.37, ದಕ್ಷಿಣ 51.57ರಷ್ಟು ಮತದಾನವಾಗಿದೆ.
ದೆಹಲಿ ವಿಧಾನಸಭಾ ಕ್ಷೇತ್ರದ 70 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಹ್ಯಾಟ್ರಿಕ್ ಗೆಲುವಿನೊಂದಿಗೆ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದ್ದರೆ, ಕಳೆದ ಬಾರಿ 7 ಸ್ಥಾನ ಗೆದ್ದಿದ್ದ ಬಿಜೆಪಿ ಮೊದಲ ಬಾರಿ ಅಧಿಕಾರದ ಗದ್ದುಗೆ ಹಿಡಿಯವ ಪ್ರಯತ್ನದಲ್ಲಿದೆ.
ಬಹುಮತಕ್ಕೆ 36 ಸ್ಥಾನಗಳ ಅವಶ್ಯಕತೆ ಇದ್ದು, ಕಳೆದ ಚುನಾವಣೆಯಲ್ಲಿ ಆಪ್ 62 ಸ್ಥಾನಗಳಲ್ಲಿ ಗೆದ್ದು, ಜಯಭೇರಿ ಬಾರಿಸಿದ್ದರೆ, ಬಿಜೆಪಿ 7 ಮತ್ತು ಕಾಂಗ್ರೆಸ್ 1 ಸ್ಥಾನಕ್ಕೆ ಕುಸಿದಿತ್ತು.