Menu

ಸಾಲದ ಶೂಲ: ದೊಡ್ಡಬಳ್ಳಾಪುರದಲ್ಲಿ ತಿಂಗಳ ಹಿಂದೆ ತಾಯಿ, ಇಂದು ಮಗ ಆತ್ಮಹತ್ಯೆ

ಸಾಲದ ಸುಳಿಗೆ ಸಿಲುಕಿ ಒಂದೂವರೆ ತಿಂಗಳ ಅವಧಿಯಲ್ಲಿ ತಾಯಿ ಮಗ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ನಂದಿ ಮೋರಿ ಬಳಿ ಸೋಮವಾರ ಬೆಳಗ್ಗೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ತಾಲೂಕಿನ ಕೊನಘಟ್ಟ ಗ್ರಾಮದ ರಕ್ಷಿತ್ ಬಾಬು (26) ಎಂದು ಗುರುತಿಸಲಾಗಿದೆ. ಮೃತ ಯುವಕ ಮಾರಸಂದ್ರದ ಫೈವ್​​ ಸ್ಟಾರ್, ಸ್ವಿಗ್ಗಿ ಸೇರಿದಂತೆ ಹಲವು ಕಂಪನಿಗಳ ಡೆಲಿವರ್​ ಬಾಯ್​ ಆಗಿ ಕೆಲಸ ಮಾಡುತ್ತಿದ್ದ.

ಒಂದೂವರೆ ತಿಂಗಳ ಹಿಂದೆ ಮೃತ ಯುವಕನ ತಾಯಿ ಕೊನಘಟ್ಟ ಗ್ರಾಮದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಕುಟುಂಬ ಸಾಲದ ಸುಳಿಯಲ್ಲಿ ಸಿಲುಕಿತ್ತು. ಸಾಲ ಕೊಟ್ಟವರು ಮನೆಯ ಬಳಿ ಬಂದು ಗಲಾಟೆ ಮಾಡಿದ್ದರೆಂಬ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಮಗ ಕೂಡ ಅದೇ ಕೃತ್ಯ ಎಸಗಿದ್ದಾರೆ.

ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತಂತೆ ತನಿಖೆ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *