Menu

ಮದುವೆ ಬೇಡ ಅನ್ನೋ ಮಗಳು, ಮಾಡೇ ಮಾಡ್ತೇವೆ ಅನ್ನೋ ಪೋಷಕರು: ಹುಡುಗಿ ಪರ ಹೈಕೋರ್ಟ್‌ ತೀರ್ಪು

ವಯಸ್ಸಿಗೆ ಬಂದ ಮಗಳಿಗೆ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳಬೇಕೆಂಬ ಆಸೆಯ ತಂದೆ ತಾಯಿ ಒಂದೆಡೆ, ಓದು ಮುಗಿಸಿ ಒಳ್ಳೆಯ ಕೆಲಸ ಸಿಕ್ಕಿದ ತಕ್ಷಣ ಮದುವೆ ಆಗಲಾರೆ ಅನ್ನುವ ಮಗಳು ಮತ್ತೊಂದೆಡೆ. ಈ ಇಬ್ಬರ ಹಗ್ಗಜಗ್ಗಾಟ ಹೈಕೋರ್ಟ್ ಮೆಟ್ಟಿಲೇರಿ, ಅಂತ್ಯ ಕಂಡಿದೆ.

ನಾನು ಮದುವೆ ಆಗುವುದಿಲ್ಲ ಎಂಬ ಹುಡುಗಿಯ ಹಠಕ್ಕೆ ಮದುವೆ ಮಾಡೇ ಮಾಡಿಸ್ತೇವೆ ಅಂತ ಪಾಲಕರು ಪಟ್ಟು ಹಿಡಿದಿದ್ದಾರೆ. ಕೊನೆಗೂ ಮಹಾರಾಷ್ಟ್ರ ಹೈಕೋರ್ಟ್ ನಲ್ಲಿ ಪ್ರಕರಣ ಇತ್ಯರ್ಥ ಆಗಿದೆ. 24 ವರ್ಷದ ಬಿಹಾರದ ಹುಡುಗಿ ಪುಣೆಯ ರಿಯಲ್ ಎಸ್ಟೇಟ್ ಏಜೆನ್ಸಿಯಲ್ಲಿ ಕೆಲಸ ಮಾಡ್ತಿದ್ದಾಳೆ. ಕಳೆದ ತಿಂಗಳು ಬಿಹಾರದಲ್ಲಿರುವ ಮನೆಗೆ ಹೋಗಿದ್ದಾಗ ಕುಟುಂಬದವರು ಮದುವೆಗೆ ಒತ್ತಾಯ ಮಾಡಿದ್ದಾರೆ. ಅವಳನ್ನು ಒತ್ತೆಯಾಳಾಗಿ ಇಟ್ಟುಕೊಂಡು ಮದುವೆ ಆಗುವಂತೆ ಒತ್ತಡ ಹೇರಿದ್ದಾರೆ. ಹುಡುಗಿ ವಿರೋಧ ವ್ಯಕ್ತಪಡಿಸಿದ್ದಾಳೆ. ಆದರೆ ಮನೆಯವರು ಹುಡುಗಿಗೆ ಥಳಿಸಿ ಬುದ್ಧಿ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ಸಮಯದಲ್ಲಿ ಹುಡುಗಿ ತನ್ನ ಫ್ರೆಂಡ್ಸ್ ಸಹಾಯ ಪಡೆದಿದ್ದಾಳೆ. ಹುಡುಗಿ ಪರ ಫ್ರೆಂಡ್ಸ್ ಬಾಂಬೆ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಹುಡುಗಿಯನ್ನು ಬಿಡುಗಡೆ ಮಾಡುವಂತೆ ಕೋರಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಪುಣೆ ಪೊಲೀಸರಿಗೆ ಹುಡುಗಿಯನ್ನು ಹುಡುಕಿ ಹಾಜರುಪಡಿಸಲು ಆದೇಶಿಸಿತು. ಪುಣೆ ಪೊಲೀಸರು ಬಿಹಾರದಿಂದ ಹುಡುಗಿಯನ್ನು ಮುಂಬೈಗೆ ಕರೆದುಕೊಂಡು ಬಂದು ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ಕೋರ್ಟ್ ಮುಂದೆ ಬಂದ ಹುಡುಗಿ. ನಾನು ಒಂಟಿಯಾಗಿರಲು ಹಾಗೂ ಕೆಲಸ ಮಾಡಲು ಬಯಸುತ್ತೇನೆ. ಆದರೆ ಕುಟುಂಬದವರು ಬಲವಂತವಾಗಿ ಮದುವೆ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದ್ದಾಳೆ.
ಹುಡುಗಿಯ ಮಾತುಗಳನ್ನು ಕೇಳಿದ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ನೀಲಾ ಗೋಖಲೆ ಮತ್ತು ಫಿರ್ದೌಸ್ ಪೂನಾವಾಲಾ ಹುಡುಗಿ ಪರ ತೀರ್ಪು ನೀಡಿದ್ದಾರೆ.

ಹುಡುಗಿ ಸ್ವಂತ ಇಚ್ಛೆಯಿಂದ ಪುಣೆಯಲ್ಲಿ ವಾಸಿಸಲು ಬಯಸ್ತಿದ್ದಾಳೆ. ಅವಳು ಒಬ್ಬಂಟಿಯಾಗಿ ವಾಸಿಸಲು ಮತ್ತು ಕೆಲಸ ಮಾಡಲು ಇಷ್ಟಪಡ್ತಿದ್ದಾಳೆ. ಅವಳ ಕುಟುಂಬ ಬಲವಂತವಾಗಿ ಮದುವೆ ಮಾಡಲು ಮುಂದಾಗಿದೆ. ಹುಡುಗಿ ತನ್ನ ಇಚ್ಛೆಯಂತೆ ಬದುಕಬಹುದು ಎಂದು ಕೋರ್ಟ್ ತೀರ್ಪು ನೀಡಿದೆ.

Related Posts

Leave a Reply

Your email address will not be published. Required fields are marked *