Menu

ಸಿದ್ದರಾಮಯ್ಯರಿಂದಲೇ ದಸರಾ ಆಚರಣೆ: ಸಚಿವ ಎಚ್.ಸಿ.ಮಹದೇವಪ್ಪ

ಮೈಸೂರು: ಈ ಬಾರಿ ದಸರಾವನ್ನು ಸಿದ್ದರಾಮಯ್ಯ ಅವರೆ ನಡೆಸುತ್ತಾರೆ. ಮುಖ್ಯಮಂತ್ರಿಯಾಗಿ ಅವರೆ ಮುಂದುವರೆಯುತ್ತಾರೆ, ಎಂದು ಮೈಸೂರು ಉಸ್ತುವರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿ ಆಷಾಢ ಸಿದ್ಧತೆಗಳ ಪರಿಶೀಲಿಸಿ ಮಾತನಾಡಿದ ಅವರು, ಈ ಬಾರಿ ದಸರಾವನ್ನು ಸಿದ್ದರಾಮಯ್ಯ ಮಾಡುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿಕೆ  ವಿಚಾರಕ್ಕೆ ಪ್ರತಿಕ್ರಿಯಿಸಿ, ಆರ್.ಅಶೋಕ್ ಕಾಂಗ್ರೆಸ್ ಹೈ ಕಮಾಂಡ್ ಅಲ್ಲ. ಆರ್.ಅಶೋಕ ಕೇವಲ ವಿರೋಧ ಪಕ್ಷದ ನಾಯಕ ಅಷ್ಟೇ. ಅವರಿಗೂ ಕಾಂಗ್ರೆಸ್ ಗೆ ಏನು ಸಂಬಂಧ‌ ಹೇಳಿ. ಆ ರೀತಿಯ ಯಾವ ಚರ್ಚೆಗಳು ಏನು ನಡೆದಿಲ್ಲ. ಅಧಿಕಾರದ ಯಾವ ಒಪ್ಪಂದಗಳಿದೆ ಎಂಬುದು ಯಾವುದು ನನ್ನ ಗಮನಕ್ಕೆ ಬಂದಿಲ್ಲ. ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿದ್ದಾರೆ. ಅವರೇ ದಸರಾ ಮಾಡುತ್ತಾರೆ. ಅವರೇ ಸಿಎಂ ಸ್ಥಾನದಲ್ಲಿ ಇರುತ್ತಾರೆ. ಇದು ಸತ್ಯ ಎಂದು ಹೇಳಿದರು.

5 ವರ್ಷವೂ ಕಾಂಗ್ರೆಸ್ ಸರ್ಕಾರ ಸ್ಥಿರವಾಗಿಯೇ ಇರುತ್ತದೆ‌. ನನ್ನ ಆತ್ಮ ವಿಶ್ವಾಸದ ಪ್ರಕಾರವೂ ಕಾಂಗ್ರೆಸ್ ಸರ್ಕಾರ ಗಟ್ಟಿಯಾಗಿರುತ್ತದೆ. ಸಿದ್ದರಾಮಯ್ಯ ಸಿಎಂ ಆಗಿ ಇರುತ್ತಾರೆ. ಆನೆ ಹೋಗುತ್ತಿರುತ್ತದೆ ಅದನೋ ಬೀಳುತ್ತೆ ಅಂಥ ಕಾಯುವ ಸ್ಥಿತಿಯಲ್ಲಿ ಬಿಜೆಪಿ ಇದೆ.

ಅದು ಬೀಳುವುದಿಲ್ಲ, ಇವರು ಕಾಯುವುದು ಬಿಡುವುದಿಲ್ಲ. ಶಾಸಕರುಗಳು ಯಾವ ಅರ್ಥದಲ್ಲಿ ಮೂರು ತಿಂಗಳಲ್ಲಿ ಕ್ರಾಂತಿ ಎಂದು  ಹೇಳಿದ್ದಾರೆ ಅವರನ್ನೇ ಕೇಳಿ. ಕೆಲವು ಶಾಸಕರು ಅವರವರ ಅನೂಕಲಕ್ಕೆ ತಕ್ಕಂತೆ ಹೇಳಿಕೆ ನೀಡಿರಬಹುದು.

ಅದಕ್ಕು ನಮಗೂ ಸಂಬಂಧ ಇಲ್ಲ. ರಾಜಕೀಯವಾಗಿ ಕ್ರಾಂತಿಗಳು ಯಾವಗಲೂ ನಡೆಯುತ್ತಿರುತ್ತದೆ. ಸಂಕ್ರಾಂತಿಯನ್ನ ಜೋರಾಗಿ ಮಾಡೋಣಾ ಬಿಡಿ ಎಂದರು.

ಇದೇ ವೇಳೆ ಆಷಾಢದ ವೇಳೆ ತೊಂದರೆ ಭಕ್ತರಿಗೆ ಉಂಟಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು. ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ರೂಪ, ನಗರ ಪೊಲೀಸ್ ಆಯುಕ್ತೆ ಸೀಮಾ‌ಲಾಟ್ಕರ್ ಇನ್ನಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *