ಬಾಗಲಕೋಟೆಯ ರಬಕವಿಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಬಸವಗೋಪಾಲ ನೀಲಮಾಣಿಕಮಠದ ದಾನೇಶ್ವರ ಸ್ವಾಮೀಜಿ ನಿಧನಾರದರು. ಅವರಿಗೆ ೭೫ ವರ್ಷ ಆಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿಯನ್ನು ನಾಲ್ಕು ದಿನದ ಹಿಂದೆ ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ರಾತ್ರಿ ನಿಧನರಾಗಿದ್ದಾರೆ. ದಾಸೋಹ ಚಕ್ರವರ್ತಿ ಅನ್ನದಾನೇಶ್ವರ ಎಂದು ಹೆಸರಾಗಿದ್ದ ಸ್ವಾಮೀಜಿ ಬಾಗಲಕೋಟೆ, ವಿಜಯಪುರ, ಬೆಳಗಾವಿ ಭಾಗಗಳಲ್ಲಿ ಅಪಾರ ಭಕ್ತರನ್ನು ಹೊಂದಿದ್ದಾರೆ. ಶುಕ್ರವಾರ (ಇಂದು) ಮಧ್ಯಾಹ್ನ ಆಸ್ಪತ್ರೆಯಿಂದ ಪಾರ್ಥೀವ ಶರೀರವನ್ನು ಅವರ ಹುಟ್ಟೂರು ಬೆಳಗಾವಿ ಜಿಲ್ಲೆಯ ಸವದಿ ಗ್ರಾಮಕ್ಕೆ ತರಲಾಗುವುದು. ಅಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ರಾತ್ರಿ 10 ಕ್ಕೆ ಬಂಡಿಗಣಿ ಗ್ರಾಮದ ಮಠಕ್ಕೆ ತರುತ್ತಿದ್ದು, ನಾಳೆ ಸಂಜೆವರೆಗೆ ಭಕ್ತರಿಗೆ ಮಠದ ಆವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶವಿದೆ. ನಾಳೆ ಸಂಜೆ 4 ಗಂಟೆಗೆ ವೀರಶೈವ ಲಿಂಗಾಯತ ವಿಧಿವಿಧಾನ ಪ್ರಕಾರ ಅಂತ್ಯಸಂಸ್ಕಾರ
ನಡೆಯಲಿದೆ.
ಕಳೆದ ಅಕ್ಟೋಬರ್ 13 ರಂದು ಸ್ವಾಮೀಜಿ ಬಂಡಿಗಣಿ ಮಠದಲ್ಲಿ ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ ಸಮಾವೇಶ ನಡೆಸಿದ್ದರು, ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ಸ್ವಾಮೀಜಿ ವರ್ಷದಲ್ಲಿ 187 ಬಾರಿ ಅನ್ನದಾನ ಮಾಡಿದ್ದಾರೆ. ಹೊರ ರಾಜ್ಯದಲ್ಲೂ ಅನ್ನದಾನ ಮಾಡಿದ್ದಾರೆ.


