ಸೈಬರ್ ವಂಚಕರು ಕಿಚ್ಚ ಸುದೀಪ್ ಅಭಿಮಾನಿಯೊಬ್ಬರಿಗೆ ATS (ಭಯೋತ್ಪಾದನಾ ನಿಗ್ರಹ ದಳ) ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ಹಾಕಿ ಹಣ ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ದೆಹಲಿ ಬಾಂಬ್ ಸ್ಪೋಟದಲ್ಲಿ ನಿಮ್ಮ ಕೈವಾಡ ಇದೆ. ನಿಮ್ಮ ಮೊಬೈಲ್ ನಂಬರ್ ಬಳಕೆಯಾಗಿದೆ ಎಂದು ಬೆದರಿಕೆ ಹಾಕಿದ್ದಾರೆ. ಈ ಆರೋಪದಿಂದ ಹೊರಬರಬೇಕಿದ್ದರೆ ನಾವು ಹೇಳಿದಂತೆ ಕೇಳಬೇಕು. ಆಗ ಮಾತ್ರ ನಿಮಗೆ ಸರ್ಟಿಫಿಕೇಟ್ ಆಫ್ ಇನೋಸೆನ್ಸ್ ನೀಡುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಭಯಗೊಂಡ ಕಿಚ್ಚ ಅಭಿಮಾನಿ ಶರಣ್ ಆರ್ ಮುಕುಂದ್ ಹಣ ನೀಡಿದ್ದಾರೆ.
“ನನಗೆ ಒಬ್ಬ ಕಾಲ್ ಮಾಡಿ ನಾವು ಎಟಿಎಸ್ ನಿಂದ ಕರೆ ಮಾಡುತ್ತಿದ್ದೇವೆ. ದೆಹಲಿ ರೆಡ್ ಫೋರ್ಟ್ ಬ್ಲಾಸ್ಟ್ ನಲ್ಲಿ ನಿಮ್ಮ ಕೈವಾಡವಿದೆ ಎಂದು ಹೇಳಿದರು, ನನಗೂ ಸ್ವಲ್ಪ ಹೆದರಿಕೆ ಆಯಿತು. ಇಲ್ಲ ಸರ್ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದೆ. ಅವರು ನಿಮ್ಮ ಕೈವಾಡ ಇದೆ ಎಂಬ ಸಾಕ್ಷಿ ಸಿಕ್ಕಿದೆ. ನಮ್ಮ ಎನ್ ಐ ಎ ಟೀಂ ಸದ್ಯದಲ್ಲೆ ಕಾಲ್ ಮಾಡುತ್ತದೆ ಎಂದರು. ನಂತರ +91 9620122894, +91 6262656645 ನಿಂದ ವೀಡಿಯೊ ಕರೆ ಬಂದಿದೆ. ನಾನು ಗೌರವ್ ಎನ್ ಐ ಎ ಆಫೀಸರ್, ನಿಮ್ಮ ವೀಡಿಯೊ ಹೇಳಿಕೆಬೇಕು ಎಂದು ನನ್ನ ವೈಯಕ್ತಿಕ ದಾಖಲೆಗಳನ್ನು ಕೇಳಿದ್ದಾರೆ. ನನ್ನ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಕೂಡ ಕೇಳಿದ್ದರೆ, ನಾವು ಹೇಳುವರೆಗೆ ಕಾಲ್ ಕಟ್ ಮಾಡಬೇಡಿ ಎಂದು ಎಚ್ಚರಿಸಿದ್ದಾರೆ.
ಸ್ವಲ್ಪ ಹೊತ್ತಿನ ಸೌಮ್ಯವಾಗಿ ಮಾತನಾಡಲು ಶುರು ಮಾಡಿದ್ದಾರೆ, ನಿಮ್ಮ ಮೇಲಿನ ಆರೋಪ ಹೋಗಬೇಕೆಂದರೆ, ನಿಮಗೆ ಸರ್ಟಿಫಿಕೇಟ್ ಆಫ್ ಇನೋಸೆನ್ಸ್ ಬೇಕೆಂದರೆ ಸ್ವಲ್ಪ ಹಣ ಪೇ ಮಾಡಬೇಕು. ಅದು ಗವರ್ನಮೆಂಟ್ ಫೀಸ್ ಎಂದು ಹೇಳಿದ್ದಾರೆ. ತನಿಖೆ ಮುಗಿದ ನಂತರ ವಾಪಸ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಶರಣ್ ಆರ್ ಮುಕುಂದ್ ವಂಚಕರಿಗೆ ಹಂತ ಹಂತವಾಗಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಹೀಗೆ 5.53 ಲಕ್ಷ ರೂ.ವರೆಗೆ ವಂಚಕರಿಗೆ ಕಳುಹಿಸಿದ್ದಾರೆ. ಕೊನೆಗೆ ಅನುಮಾನ ಬಂದು 1930ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸೌತ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


