Menu

ಉಪ ಲೋಕಾಯುಕ್ತರಿಗೆ ಸೈಬರ್ ವಂಚಕರ ಗಾಳ

ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಸೈಬರ್ ವಂಚಕರ ಗಾಳದಿಂದ ಸ್ವಲ್ಪದರಲ್ಲೇ ಪಾರಾಗಿ, ಸೈಬರ್ ಠಾಣೆಗೆ ದೂರು ಸಲ್ಲಿಸಿ  ತನಿಖೆಗೆ ಮನವಿ ಮಾಡಿದ್ದಾರೆ.

ಉಪ ಲೋಕಾಯುಕ್ತರಿಗೆ ಕರೆ ಮಾಡಿದ್ದ ಸೈಬರ್ ಕಳ್ಳರು, ನಾನು ಸೀನಿಯರ್‌ ಕನ್ಸಲ್ಟೆಂಟ್‌ ದೀಪಕ್ ಕುಮಾರ್ ಶರ್ಮ ಹಾಗೂ ಜೂನಿಯರ್‌ ಕನ್ಸಲೆಂಟ್ ರಾಹುಲ್ ಕುಮಾರ್ ಶರ್ಮಾ ಎಂದು ಪರಿಚಯ ಮಾಡಿಕೊಂಡಿದ್ದರು. ನಾವು ಡಾಟಾ ಪ್ರಾಜೆಕ್ಟ್‌ ಬೋರ್ಡ್‌ ಆಫ್‌ ಇಂಡಿಯಾ ಮುಂಬೈ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ.

ನಿಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿದೆ. ಇದನ್ನು ಬಳಸಿಕೊಂಡು ಕಾನೂನು ಬಾಹಿರ ಚಟುವಟಿಕೆ ಅಪರಾಧಗಳನ್ನು ಎಸಗುತ್ತಿದ್ದೀರಿ ಎಂದು ಫಣೀಂದ್ರಗೆ ಬ್ಲಾಕ್‌ಮೇಲ್ ಮಾಡಿದ್ದರು. ಇದನ್ನು ಕೇಳಿದ ಉಪ ಲೋಕಾಯುಕ್ತ ಫಣೀಂದ್ರ ಅವರು ನನಗೆ ನೋಟೀಸ್ ಕಳುಹಿಸಿ ಕೊಡಿ ಎಂದು ಕೇಳಿದ್ದಾರೆ.

ಬಳಿಕ ಉಪಲೋಕಾಯುಕ್ತರು ಕೇಂದ್ರ ವಿಭಾಗ ಸೈಬರ್ ಠಾಣೆಗೆ ದೂರು ಸಲ್ಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಕೇಂದ್ರ ವಿಭಾಗದ ಸೆನ್ ಠಾಣೆ ಪೊಲೀಸರು ಎಫ್ ಐಆರ್ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *