Menu

ನಟಿ ಹೆಸರಲ್ಲಿ ನಕಲಿ ವಾಟ್ಸಾಪ್‌ ಮೂಲಕ ಹಣಕ್ಕೆ ಬೇಡಿಕೆ ಇಟ್ಟ ಸೈಬರ್‌ ಖದೀಮರು

ನಕಲಿ ಮೊಬೈಲ್‌ ನಂಬರ್ ತೆಗೆದುಕೊಂಡು ವಾಟ್ಸಾಪ್‌ಗೆ ನಟಿಯೊಬ್ಬರ ಫೋಟೋ ಹಾಕಿದ ಸೈಬರ್‌ ವಂಚಕರು ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಬಯಲಾಗಿದೆ.

ನಟಿ ಶರಣ್ಯ ಶೆಟ್ಟಿ ಹೆಸರು ಬಳಸಿ‌ ಆಕೆಯ ಫೋಟೋವನ್ನು ಡಿಪಿಯಾಗಿ ಹಾಕಿಕೊಂಡು, ಸ್ವಲ್ಪ ಹಣದ‌ ಅವಶ್ಯಕತೆ ಇದೆ, ಹಣ ಇದ್ದರೆ ಕಳಿಸಿ ಎಂದು ಮೆಸೇಜ್ ಮಾಡಿದ್ದ ವಂಚಕರು ನಂತರ ನಂತರ ಇಂತಿಷ್ಟು ಹಣ ಬೇಕು ಎಂದು ಕೇಳಿದ್ದಾರೆ ಎಂದು ತಮ್ಮ ಅಸಲಿ ಖಾತೆಯಲ್ಲಿ ನಟಿ‌ ಶರಣ್ಯ ಬರೆದುಕೊಂಡಿದ್ದಾರೆ.

ಇದೊಂದು ನಕಲಿ‌ ವಾಟ್ಸ್ ಅಪ್, ಅದನ್ನು ನಂಬಿ ಯಾರು ಹಣ ಕಳಿಸಬೇಡಿ. ಅಂತಹ ಖದೀಮರ ವಿರುದ್ಧ  ನಾನು ಸೈಬರ್ ಕ್ರೈಂ ನಲ್ಲಿ ದೂರು‌ ನೀಡುತ್ತೇನೆ ಎಂದು ನಟಿ ಶರಣ್ಯ ಮನವಿ ಮಾಡಿದ್ದಾರೆ.

Related Posts

Leave a Reply

Your email address will not be published. Required fields are marked *