Menu

ಹೋಟೆಲ್‌ನಲ್ಲಿ ಚಿಕನ್‌ ಕೇಳಿದ್ರೆ ಬೀಫ್‌ ಕೊಡ್ತಾರೆ: ಹಳಿಯಾಳದಲ್ಲಿ ಗ್ರಾಹಕರ ಪ್ರತಿಭಟನೆ

ಹಳಿಯಾಳದಲ್ಲಿರುವ ನ್ಯೂ ಹೋಟೆಲ್‌ ಹುಬ್ಬಳ್ಳಿ ತಗಡ ಬಿರಿಯಾನಿಯಲ್ಲಿ ಚಿಕನ್ ಬಿರಿಯಾನಿ ಕೇಳಿದರೆ ಬೀಫ್‌ ಬಿರಿಯಾನಿ ಕೊಡುತ್ತಾರೆ ಎಂದು ಬಿರಿಯಾನಿ ತಿಂದವರು ಆರೋಪಿಸಿದ್ದಾರೆ.

ಇದನ್ನು ವಿರೋಧಿಸಿ ಸಾರ್ವಜನಿಕರು ಅಂಗಡಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಆಗಮಿಸಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಕೊಟ್ಟ ಬಿರಿಯಾನಿಯಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಗ್ರಾಹಕರು ಹೋಟೆಲ್‌ ಮಾಲೀಕರನ್ನು ಕರೆದು ವಿಚಾರಿಸಿದ್ದಾರೆ. ಆದರೆ ಮಾಲೀಕರು ಅಸಂಬದ್ಧವಾಗಿ ವರ್ತಿಸಿರುವುದನ್ನು ಕಂಡು ಪೊಲೀಸರು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.

ಪುರಸಭೆ ಹಾಗೂ ಆರೋಗ್ಯಾಧಿಕಾರಿಗಳು ಹೋಟೆಲ್‌ನಲ್ಲಿ ತಯಾರಿಸಿಟ್ಟಿದ್ದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ. ಸ್ಥಳಕ್ಕೆ ಬಿಜೆಪಿ ಮಂಡಲ ಕಾರ್ಯದರ್ಶಿ ಸಂತೋಷ ಘಟಕಾಂಬ್ಳೆ ಹಾಗೂ ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದರು.

Related Posts

Leave a Reply

Your email address will not be published. Required fields are marked *