ಹಾವೇರಿ: ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ‘ಕಲ್ಟ್’ ಸಿನಿಮಾ ಜನವರಿ 23ರಂದು 100 ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದ್ದು, ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗಿದೆ ಎಂದು ನಾಯಕ ನಟ ಝೈದ್ ಖಾನ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಲ್ಟ್’ ಸಿನಿಮಾ ಕಾಲೇಜಿಗೆ ತೆರಳುವ ದಾರಿ ತಪ್ಪಿದ ಯುವ ಜನತೆಗೆ ಒಳ್ಳೆಯ ಸಂದೇಶ ನೀಡಿ ಅವರನ್ನು ಉತ್ತಮ ದಾರಿಗೆ ತರುವ ಸಂದೇಶ ಹೊಂದಿದೆ. ಸಿನಿಮಾದ ಬಹುತೇಕ ಚಿತ್ರೀಕರಣ ಹಂಪಿ ಮತ್ತು ವಿಜಯನಗರ ಹಾಗೂ ಚಿತ್ರದುರ್ಗದಲ್ಲಿ ನಡೆದಿದೆ ಎಂದರು.
ಚಿತ್ರನಟ ದರ್ಶನ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿರುವೆ. ಧಾರವಾಡದಲ್ಲಿ ಪ್ರಚಾರ ಮಾಡುವ ವೇಳೆ ಅವರ ನೆನಪು ಬಹಳ ಕಾಡಿತು. ಜನವರಿಯಲ್ಲಿ ಅವರಿಗೆ ನ್ಯಾಯಾಲಯದಿಂದ ಜಾಮೀನು ಸಿಗುವ ನಿರೀಕ್ಷೆ ಇದೆ. ಒಂದು ವೇಳೆ ಜಾಮೀನು ಸಿಗದೆ ಇದ್ದಲ್ಲಿ ಜೈಲಿಗೆ ತೆರಳಿ ಅವರ ಆಶೀರ್ವಾದ ಪಡೆಯುವೆ. ಮುಂಬರುವ ನನ್ನ ಎಲ್ಲ ಸಿನಿಮಾಗಳಲ್ಲಿ ಉತ್ತರ ಕರ್ನಾಟಕ ಕನಿಷ್ಠ ಒಬ್ಬರಿಗಾದರೂ ಅವಕಾಶ ನೀಡುವೆ ಎಂದು ಹೇಳಿದರು.
ಮಲೈಕಾ ಟಿ.ವಸುಪಾಲ್ ಮಾತನಾಡಿ, ‘ಉಪಾಧ್ಯಕ್ಷ’ ಸಿನಿಮಾ ನಂತರ ಅನಿಲ್ ಕುಮಾರ್ ನಿರ್ದೇಶನದಲ್ಲಿ ಮತ್ತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಚಿತ್ರದಲ್ಲಿ ನಾಯಕಿಯರಾಗಿ ನಾನು ಹಾಗೂ ನಡಿಸುತ್ತಿದ್ದೇವೆ. ಇಬ್ಬರ ಪಾತ್ರಕ್ಕೂ ಸಮಾನವಾದ ಪ್ರಾಮುಖ್ಯತೆಯನ್ನು ನಿರ್ದೇಶಕರು ಸಿನಿಮಾದಲ್ಲಿ ಕಲ್ಪಿಸಿದ್ದಾರೆ. ಇದೊಂದು ಕೌಟುಂಬಿಕ ಸಿನಿಮಾವಾಗಿದ್ದು, ಜನರು ಇಷ್ಟಪಡುವ ನಿರೀಕ್ಷೆ ಇದೆ ಎಂದರು.


