Menu

ಪ್ಲೇಆಫ್ ರೇಸ್ ನಿಂದ ಹೊರಬಿದ್ದ ಸಿಎಸ್ ಕೆ, ಪಂಜಾಜ್ ಪ್ಲೇಆಫ್ ಆಸೆ ಜೀವಂತ

chahal

ಸ್ಪಿನ್ನರ್ ಯಜುರ್ವೆಂದ್ರ ಚಾಹಲ್ ಹ್ಯಾಟ್ರಿಕ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ 4 ವಿಕೆಟ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯ ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ.

ಚೆನ್ನೈನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 19.2 ಓವರ್ ಗಳಲ್ಲಿ 190 ರನ್ ಗೆ ಆಲೌಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 19.4 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಚೆನ್ನೈ ತವರಿನಲ್ಲಿ 5ನೇ ಬಾರಿ ಸೋಲುಂಡಿದ್ದು, ಈ ಮೂಲಕ 10 ಪಂದ್ಯಗಳಿಂದ 2 ಜಯ ಹಾಗೂ 8 ಸೋಲಿನೊಂದಿಗೆ ಪ್ಲೇಆಫ್ ರೇಸ್ ನಿಂದ ಹೊರಬಿದ್ದಿತು. ಪಂಜಾಬ್ ಕಿಂಗ್ಸ್ 10 ಪಂದ್ಯಗಳಿಂದ 6 ಜಯ ಹಾಗೂ 3 ಸೋಲು ಹಾಗೂ 1 ಪಂದ್ಯ ರದ್ದಾಗಿದ್ದರಿಂದ ಗಳಿಸಿದ 1 ಸೇರಿದಂತೆ 13 ಅಂಕದೊಂದಿಗೆ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕುವ ಮೂಲಕ ಪ್ಲೇಆಫ್ ರೇಸ್ ಆಸೆ ಜೀವಂತವಾಗಿರಿಸಿಕೊಂಡಿತು.

ಪಂಜಾಬ್ ತಂಡಕ್ಕೆ ಪ್ರಭು ಸಿಮ್ರಾನ್ ಸಿಂಗ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅರ್ಧಶತಕಗಳಿಂದ ತಂಡವನ್ನು ಗೆಲುವಿನ ದಡ ಸೇರಿಸಿದರು. ಪ್ರಭು ಸಿಮ್ರಾನ್ 36 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ನೊಂದಿಗೆ 54 ರನ್ ಗಳಿಸಿದರು. ಇದು ಪ್ರಭು ಸಿಮ್ರಾನ್ ಗೆ 4ನೇ ಅರ್ಧಶತಕವಾಗಿದೆ.

ಮತ್ತೊಂದೆಡೆ ನಾಯಕ ಶ್ರೇಯಸ್ ಅಯ್ಯರ್ 41 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 72 ರನ್ ಬಾರಿಸಿ ತಂಡವನ್ನು ಗೆಲುವಿನ ದಡದತ್ತ ಕೊಂಡೊಯ್ದರು. ಶಶಾಂಕ್ 12 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸೇರಿ 23 ರನ್ ಸಿಡಿಸಿದರು.

ಖಲೀಲ್ ಮತ್ತು ಪತಿರಾಣ ಮತ್ತು ತಲಾ 2 ವಿಕೆಟ್ ಪಡೆದಿದ್ದೂ ಅಲ್ಲದೇ ಕೊನೆಯಲ್ಲಿ ತಿರುಗೇಟು ನೀಡಿದರೂ ನಾಟಕೀಯ ತಿರುವಿನ ನಂತರವೂ ತಂಡ ಗೆಲುವಿನ ನಗೆ ಬೀರಿತು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸ್ಯಾಮ್ ಕರನ್ (88 ರನ್, 47 ಎಸೆತ, 9 ಬೌಂಡರಿ, 4 ಸಿಕ್ಸರ್) ಅರ್ಧಶತಕದ ನೆರವಿನಿಂದ ಉತ್ತಮ ಪೇರಿಸಿತು. ಆದರೆ ಯಜುರ್ವೆಂದ್ರ ಚಾಹಲ್ ಹ್ಯಾಟ್ರಿಕ್ ಸೇರಿದಂತೆ ಒಂದೇ ಓವರ್ ನಲ್ಲಿ 4 ವಿಕೆಟ್ ಪಡೆದು ತಂಡ 200ರ ಗಡಿ ಹೊಸ್ತಿಲಲ್ಲಿ ಎಡವಿತು.

Related Posts

Leave a Reply

Your email address will not be published. Required fields are marked *