Menu

ಚೀನಾ, ಸಿಂಗಾಪುರಗಳಲ್ಲಿ ಮತ್ತೆ ಕೋವಿಡ್‌ ಸದ್ದು

ಐದು ವರ್ಷದ ಹಿಂದೆ (2020) ಜಗತ್ತನೇ ತಲ್ಲಣಗೊಳಿಸಿದ ಕೋವಿಡ್ 19 ಮತ್ತೆ ಚೀನಾದಲ್ಲಿ ಕಾಣಿಸಿಕೊಂಡಿದ್ದು, ಸಿಂಗಾಪುರದಲ್ಲಿಯೂ ಕೋವಿಡ್‌ ಸೋಂಕುಗಳು ಹೆಚ್ಚಾಗಿವೆ ಎಂದು ವರದಿಯಾಗಿದೆ.

ಸಿಂಗಾಪುರದ ಆರೋಗ್ಯ ಅಧಿಕಾರಿಗಳು ಏಷ್ಯಾದಾದ್ಯಂತ ಕೋವಿಡ್‌ನ ಹೊಸ ಅಲೆ ಹರಡುವ ಸಾಧ್ಯತೆಯ ಬಗ್ಗೆ ಎಚ್ಚರಿ ಸಿದ್ದಾರೆ. ಕೋವಿಡ್‌ ಹೆಚ್ಚಳವೂ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಿರುವುದರ ಸೂಚನೆಯಾಗಿರಬಹುದು, ಹೀಗಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಅಲ್ಲಿನ ಅಧಿಕಾರಿಗಳು ಜನರನ್ನು ಒತ್ತಾಯಿಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಯಲ್ಲಿ ತಿಳಿಸಿದೆ.

ಚೀನಾದ ಪ್ರಮುಖ ನಗರ ಹಾಂಗ್ ಕಾಂಗ್‌ನ ಆರೋಗ್ಯ ರಕ್ಷಣಾ ಕೇಂದ್ರದ ಸಾಂಕ್ರಾಮಿಕ ರೋಗಗಳ ಶಾಖೆಯ ಮುಖ್ಯಸ್ಥ ಆಲ್ಬರ್ಟ್ ಮಾಧ್ಯಮಗಳೊಂದಿಗೆ ಮಾತನಾಡಿ, ನಗರದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಈ ವರ್ಷ ಮೇ 3 ರವರೆಗೆ ವರದಿಯಾದಂತೆ 31 ಗಂಭೀರ ಸ್ಥಿತಿಯ ಪ್ರಕರಣಗಳು ದಾಖಲಾಗಿವೆ, ಸಾವಿನ ಸಂಖ್ಯೆ ಗರಿಷ್ಠ ಮಟ್ಟ ತಲುಪಿದೆ. ಇತ್ತೀಚೆಗೆ ಇಲ್ಲಿಕೊಳಚೆ ನೀರಿನಲ್ಲೂ ಕೋವಿಡ್-19 ವೈರಸ್ ಪತ್ತೆಯಾಗಿದೆ. ಹೆಚ್ಚಿನ ಜನರು ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಹೋಗುತ್ತಿದದಾರೆ ಎಂದು ವರದಿಯಾಗಿರುವುದಾಗಿ ಹೇಳಿದ್ದಾರೆ.

ಸಿಂಗಾಪುರದಲ್ಲಿಯೂ ಕೋವಿಡ್ -19 ಪ್ರಕರಣಗಳ ಹೆಚ್ಚಳವಾಗಿರುವುದಾಗಿ ವರದಿಯಾಗಿದೆ. ಮೇ 3 ಕ್ಕೆ ಕೊನೆಗೊಂಡ ವಾರದಲ್ಲಿ ಕೋವಿಡ್ -19 ಪ್ರಕರಣಗಳು ಶೇ. 28% ರಷ್ಟು ಹೆಚ್ಚಾಗಿದೆ. ಕೋವಿಡ್ -19 ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಶೇಖಡಾ 30% ರಷ್ಟು ಹೆಚ್ಚಾಗಿದೆ.

ಹಾಂಗ್ ಕಾಂಗ್‌ನ ಪಾಪ್ ತಾರೆ ಈಸನ್ ಚಾನ್ ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ಕಂಡುಬಂದಿದ್ದು, ಹೀಗಾಗಿ ಅವರು ತೈವಾನ್ ಸಂಗೀತ ಕಚೇರಿಗಳನ್ನು ಮುಂದೂಡಿದ್ದಾರೆ ಎಂದು ಅವರ ಅಧಿಕೃತ ಚೀನಾದ ಸಾಮಾಜಿಕ ಮಾಧ್ಯಮ ಖಾತೆ ವೀಬೊದಲ್ಲಿ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *