‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಮಡೆನೂರು ಮನು ಅವರನ್ನು ನ್ಯಾಯಾಲಯ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಸಹ ಕಲಾವಿದೆ ನೀಡಿದ ಅತ್ಯಾಚಾರ ದೂರಿನ ಹಿನ್ನೆಲೆಯಲ್ಲಿ ಮೇ 22ರಂದು ಮನು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಶುಕ್ರವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲಾಗಿದ್ದು, 2 ದಿನ ಪೊಲೀಸ್ ವಶಕ್ಕೆ ನೀಡಲಾಗಿದೆ.
ಇದೇ ವೇಳೆ ಹೊಸ ಆಡಿಯೋ ಬಿಡುಗಡೆ ಮಾಡಿರುವ ಮಡೆನೂರು ಮನು, ಮಿಂಚುಗೆ ನಾನು ತಾಳಿ ಕಟ್ಟಿದ್ದೇನೆ. ಅವಳೇ ನನ್ನ ಹೆಂಡತಿ. ಮದುವೆ ಆಗಿದ್ದೇವೆ ಹೊರತು ಅತ್ಯಾಚಾರ ಮಾಡಿಲ್ಲ ಎಂದು ಹೇಳಿದ್ದಾರೆ.
ಶುಕ್ರವಾರ ದಿಢೀರನೆ ಹೊಸದಾಗಿ ಆಡಿಯೋ ಬಿಡುಗಡೆ ಮಾಡಿರುವ ಮಡೆನೂರು ಮನು, ನಾನು ಮಿಂಚುಗೆ ತಾಳಿ ಕಟ್ಟಿದ್ದೇನೆ. ನಾನು ಆಕೆಗೆ ಮೋಸ ಮಾಡಿಲ್ಲ. ಆದರೆ ಕಾರಣಾಂತರಗಳಿಂದ ಅವಳಿಗೆ ಸಮಯ ಕೊಡಲು ಆಗಿರಲಿಲ್ಲ. ಈ ಸಮಸ್ಯೆಯನ್ನು ನಾವಿಬ್ಬರೇ ಬಗೆಹರಿಸಿಕೊಳ್ಳುತ್ತೇವೆ. ಯಾರೂ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಹೊಸ ಆಡಿಯೋದಲ್ಲಿ ಹೇಳಿದ್ದಾರೆ.
ಕಳೆದೆರಡು ದಿನಗಳಿಂದ ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿರುವ ಮಡೆನೂರು ಮನು ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆರಂಭದಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದ ಕಿರುತೆರೆ ಕಲಾವಿದೆ ನಂತರ ಗಂಟೆಗೊಂದು ಹೇಳಿಕೆ ನೀಡಿ ಮತ್ತಷ್ಟು ಗೊಂದಲ ಸೃಷ್ಟಿಸಿದ್ದರು.
ನಾನು ಮತ್ತು ಮನು ಇಬ್ಬರು ಒಂದಾಗಿದ್ದೇವೆ. ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದು ಒಮ್ಮೆ ಹೇಳಿದರೆ ಮತ್ತೊಮ್ಮೆ ಮನುಗೆ ಶಿಕ್ಷೆ ಆಗಲೇಬೇಕು. ಆತ ನನಗೆ ಕುಡಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿದ್ದರು. ಅಲ್ಲದೇ ನನ್ನ ಸಾವಿಗೆ ಯಾರೂ ಕಾರಣರಲ್ಲ, ಅಪ್ಪಣ್ಣ ಕೂಡ ನನಗೆ ಟಾರ್ಚರ್ ನೀಡಿದ್ದಾನೆ ಎಂದು ಆರೋಪಿಸಿದ್ದರು.