ಸಂವಿಧಾನದಲ್ಲಿ ಮಾತನಾಡುವ ಸ್ವಾತಂತ್ರ್ಯ ಇದ್ದರೂ ಅದಕ್ಕೆ ಮಿತಿ ಇದೆ ಎಂದು ಯೂಟ್ಯೂಬರ್ ರಣವೀರ್ ಅಲ್ಲಾಬಾದಿಯಾಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ.
ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಪೋಷಕರು ಸೆಕ್ಸ್ ಮಾಡುವುದನ್ನು ನೀನು ನೋಡಿದ್ದಿಯಾ ಎಂದು ಕೀಳುಮಟ್ಟದ ಪ್ರಶ್ನೆ ಮಾಡಿದ್ದ ರಣವೀರ್ ಅಲ್ಲಾಬಾದಿಯಾ ವಿವಾದಕ್ಕೆ ಗುರಿಯಾಗಿದ್ದರು.
ಕೇಂದ್ರ ಸರ್ಕಾರ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದ ಕಂಟೆಂಟ್ ಕುರಿತು ನಿಯಮ ರೂಪಿಸುವುದಾಗಿ ಹೇಳಿತ್ತು. ಕೇಂದ್ರ ಸರ್ಕಾರದ ಈ ವರದಿಗೆ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂಕೊರ್ಟ್, ಸಾರ್ವಜನಿಕವಾಗಿ ಮಾತನಾಡುವಾಗ ಬಳಸುವ ಭಾಷೆ ಹದ್ದುಬಸ್ತಿನಲ್ಲಿ ಇರಬೇಕು ಎಂದು ಹೇಳಿದೆ.