Wednesday, February 26, 2025
Menu

ಔರಾದ್: ದಂಪತಿ ಜಗಳ ಗಂಡನ ಕೊಲೆಯಲ್ಲಿ ಅಂತ್ಯ

ಔರಾದ್ : ಹೆಣ್ಣಿನ ಕೈಗಳಿಗೆ ಬಳೆ ಯಷ್ಟು ಮುಖ್ಯವೋ ಹೆಣ್ಣಿಗೂ ಗಂಡ ಅಷ್ಟೆ ಮುಖ್ಯ ಎಂಬ ಮಾತಿದೆ. ಗಂಡ-ಹೆಂಡತಿ ಪ್ರೀತಿ ಬಹಳ ಅಮೂಲ್ಯ. ಅಂತದ್ರಲ್ಲಿ ಇಲ್ಲೊಬ್ಬಳು ಹೆಂಡತಿ ಗಂಡನನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾಳೆ. ಅದೂ ಗಂಡ ಹೆಂಡತಿ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಪತ್ನಿ ಸವಿತಾ ಜೋಜನೆ ಎಂಬಾತಳು ತನ್ನ ಪತಿರಾಯನ್ನೇ ಹತ್ಯೆ ಮಾಡಿರುವ ಪ್ರಕರಣ ಬೀದರ ಜಿಲ್ಲೆಯ ಔರಾದ್ ತಾಲೂಕಿನ ಬಾಚೇಪಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಮೃತ ಸಿದ್ದರಾಮೇಶ್ವರ ಜೋಜನೆ ಬಾಚೇಪಳ್ಳಿ (28) ಕಳೆದ 5 ವರ್ಷದ ಹಿಂದೆಯಷ್ಟೇ ಕೂಗಳತೆಯ ದೂರದ ಗ್ರಾಮವಾದ ಲಾಧಾ ಗ್ರಾಮದ ನಿವಾಸಿ ಶಿಶಿಕಾಂತ ಎಂಪಳ್ಳೆ ಅವರ ಮಗಳಾದ ಸವಿತಾ ಜತೆಗೆ ಪ್ರೀತಿಸಿ ಮಾದುವೆಯಾಗಿದ್ದ.

ಈ ನಡುವೆಯೂ ಅನೇಕ ಬಾರಿ ಸವಿತಾ ಮತ್ತು ಮೃತ ಸಿದ್ದರಾಮೇಶ್ಚರ ಮಧ್ಯೆ ಜಗಳವಾಗಿವೆ. ಮಂಗಳವಾರ ಮನೆಯಲ್ಲಿ ಜೋರು ಗಲಾಟೆ ನಡೆದಿದೆ ಎನ್ನಲಾಗಿದ್ದು, ಇದರಿಂದ ಸಿದ್ದರಾಮೇಶ್ಚರ ಅವರ ತಂದೆ ಶಿವರಾಜ ಜೋಜನೆ ಮನೆಗೆ ಬಂದು ಇಬ್ಬರಿಗೂ ಬುದ್ಧಿ ಹೇಳಿದ್ದರಂತೆ. ಆದರೆ ಸಂಜೆಯಾಗುತ್ತಿದ್ದಂತೆ ಮತ್ತೆ ಈ ಗಲಾಟೆ ಜೋರಾಗಿ ಭೀಕರ ಘಟನೆ ನಡೆದೇ ಹೋಗಿದೆ. ಪತ್ನಿ ಸವಿತಾ ಜೋಜನೆ, ಅವಳು ತಾಯಿ ವಿಜಯಲಕ್ಷ್ಮೀ ಎಂಪಳ್ಳೆ, ತಂದೆ ಶಿವಕಾಂತ ಎಂಪಳ್ಳೆ ಜೊತೆ ಸೇರಿ ಹತ್ಯೆ ಮಾಡಿದ್ದಾಳೆ.

ಜಗಳ ವಿಕೋಪಕ್ಕೆ ಹೋಗಿ ಪತಿ ಸಿದ್ದರಾಮೇಶ್ಚರ ಮೇಲೆ ಪತ್ನಿ ಸವಿತಾ, ಅತ್ತೆ ವಿಜಯಲಕ್ಷ್ಮೀ, ಮಾವ ಶಶಿಕಾಂತ ತೀವ್ರವಾಗಿ ಹಲ್ಲೆ ನಡೆಸಿದ ಪರಿಣಾಮ ಸಿದ್ದರಾಮೇಶ್ಚರ ತೀವ್ರ ರೀತಿಯಲ್ಲಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಎಸ್ಪಿ ಪ್ರದೀಪ್ ಗುಂಟಿ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ರಘುವೀರಸಿಂಗ್ ಠಾಕೂರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮೃತನ ತಂದೆ ಶಿವರಾಜ ಜೋಜನೆ ನೀಡಿದ ದೂರಿನ ಮೇರೆಗೆ ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ ಐ ನಂದಕುಮಾರ ಮೂಳೆ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *